Advertisement

ಪ್ರಜಾಪ್ರಭುತ್ವದಲ್ಲಿ ವಿಶ್ವಾಸವೇ ಇಲ್ಲದ ಕಾಂಗ್ರೆಸ್ ಅವಸಾನದತ್ತ: ಪ್ರಹ್ಲಾದ ಜೋಶಿ

03:25 PM Oct 26, 2020 | keerthan |

ಹುಬ್ಬಳ್ಳಿ: ಪ್ರಜಾಪ್ರಭುತ್ವದಲ್ಲಿ ವಿಶ್ವಾಸವೇ ಇಲ್ಲದ ಕಾಂಗ್ರೆಸ್ ಅವಸಾನದತ್ತ ಸಾಗಿದೆ. ಜನಾದೇಶವನ್ನು ಅವಹೇಳನ ಮಾಡುವುದು ಕಾಂಗ್ರೆಸ್ ಪ್ರವೃತ್ತಿಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಇತ್ತೀಚೆಗೆ ಮಂಡಿಸಿದ ಕೆಲ ತಿದ್ದುಪಡಿ ಮಸೂದೆಗಳು ಲೋಕಸಭೆ ಅಂಗೀಕಾರವಾದರೂ ರಾಜ್ಯಸಭೆಯಲ್ಲಿ ಕಾಂಗ್ರೆಸ್‌ ಗದ್ದಲವೆಬ್ಬಿಸಿ ತಡೆಯುವ ಮೂಲಕ ಜನಾದೇಶದ ವಿರುದ್ದ ವರ್ತಿಸಿದೆ ಎಂದರು.

ಕಾಂಗ್ರೆಸ್ ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಪ್ರಶ್ನಿಸಿದವರನ್ನು ಮೂಲೆ ಗುಂಪು ಮಾಡಲಾಗಿದೆ ಎಂದರು. ಚೀನಾ ವಿಚಾರದಲ್ಲಿ ರಾಹುಲ್ ಗಾಂಧಿ ಹೇಳಿಗಳು ಹಾಸ್ಯಾಸ್ಪದವಾಗಿವೆ. ಚೀನಾದಿಂದ ಪಕ್ಷಕ್ಕೆ ದೇಣಿಗೆ ಪಡೆದ ಕಾಂಗ್ರೆಸ್ ನವರು ಇದೀಗ ಏನೇನೋ ಹೇಳಿಕೆ ನೀಡುತ್ತಿದ್ದಾರೆ ಎಂದರು.

ರಾಜ್ಯದಲ್ಲಿ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಪಟ್ಟ ಪೈಪೋಟಿಗಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ದ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ:ಸರ್ಕಾರದ ಪ್ರತಿನಿಧಿಗಳು ಜನರ ಬಳಿ ಹೋಗ್ತಿಲ್ಲ, ಜನರ ಪಾಲಿಗೆ ಸರ್ಕಾರ ಸತ್ತಿದೆ: ಸಿದ್ದರಾಮಯ್ಯ

Advertisement

ನೆರೆ-ಬರ ವಿಷಯವಾಗಿ ಕೇಂದ್ರದಿಂದ ಯುಪಿಎ ಅವಧಿಯಲ್ಲಿ ರಾಜ್ಯದಿಂದ 44,552 ಕೋಟಿ ರೂ. ಬೇಡಿಕೆ ಸಲ್ಲಿಕೆಯಾಗಿತ್ತು. ಬಂದಿದ್ದು 4,690 ಕೋಟಿ ರೂ.ಮಾತ್ರ. ಶೇ.10.35ರಷ್ಟು ನೀಡಲಾಗಿತ್ತು. ಮೋದಿ ಸರಕಾರದಲ್ಲಿ 2014-15ರಿಂದ 2019-2020ರವರೆಗೆ ರಾಜ್ಯದಿಂದ ಬೇಡಿಕೆ ಸಲ್ಲಕೆ ಬಂದಿದ್ದು 11,753 ಕೋಟಿ ರೂ. ಬೇಡಿಕೆಯ ಶೇಕಡಾ 43.20 ರಷ್ಟು ಹಣ ಬಿಡುಗಡೆ ಆಗಿದೆ. ಈ ಅಂಕಿಅಂಶಗಳ ಆಧಾರದಲ್ಲಿ ಸಿದ್ದರಾಮಯ್ಯ ಚರ್ಚೆಗೆ ಬರಲಿ ಎಂದರು.

ರಾಜ್ಯದಲ್ಲಿ ನಡೆಯುತ್ತಿರುವ ನಾಲ್ಕು ವಿಧಾನ ಪರಿಷತ್ತು ಕ್ಷೇತ್ರ ಚುನಾವಣೆ, ಎರಡು ವಿಧಾನಸಭೆ ಕ್ಷೇತ್ರ ಗಳ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ ಎಂದರು.

ರಾಜ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next