Advertisement

ಬೆಲೆ ಏರಿಕೆಯಿಂದ ತತ್ತರಿಸಿದ ಜನರಿಗೆ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು ಆಶಾಕಿರಣ-  ಕಾಂಚನ್‌

03:48 PM May 02, 2023 | Team Udayavani |

ಉಡುಪಿ: ಕಾಂಗ್ರೆಸ್‌ ಸರಕಾರ ಬಂದರೆ ಈಗಾಗಲೇ ಜನರಿಗೆ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿವೆ. ಗ್ಯಾರಂಟಿ ಯೋಜನೆಗಳು ಈಗಾಗಲೇ ಜನರ ಮನಸ್ಸು ಮುಟ್ಟಿವೆ. ಹೋದಲ್ಲೆಲ್ಲಾ ವಿಶೇಷವಾಗಿ ಮಹಿಳಾ ಮತದಾರರು ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳನ್ನು ಕೊಂಡಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ಅಭ್ಯರ್ಥಿ ಪ್ರಸಾದ್‌ರಾಜ್‌ ಹೇಳಿದರು.

Advertisement

ಆವರು ಉಡುಪಿ ವಿಧಾನ ಸಭಾ ಕÒೇತ್ರದ ವಿವಿಧ ಕಡೆ ಮತಪ್ರಚಾರ ನಡೆಸಿ ಮಾತನಾಡಿದರು. ಪ್ರತಿ ಮನೆಗೂ 200ಯುನಿಟ್‌ ಉಚಿತ ವಿದ್ಯುತ್‌, ಪ್ರತಿ ಮನೆಯ ಯಜಮಾನಿ ಮಹಿಳೆಗೆ 2000 ರೂ. ಮಾಸಿಕ ಧನ, ಬಿಪಿಎಲ್‌ ಕಾರ್ಡ್‌ದಾರ ಕುಟುಂಬಗಳಿಗೆ ಪ್ರತಿ ತಿಂಗಳು 10 ಕೆ.ಜಿ. ಅಕ್ಕಿ, ಪದವೀಧರರಿಗೆ ಎರಡು ವರ್ಷ ಪ್ರತಿ ತಿಂಗಳು ರೂ. 3000 ಪ್ರೋತ್ಸಾಹ ಧನ, ಡಿಪ್ಲೋಮಾ ದಾರರಿಗೆ ಪ್ರತಿ ತಿಂಗಳು ರೂ. 1500 ಮಾಸಿಕ ಪೊÅàತ್ಸಾಹ ಧನ, ಸರಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಸಂಪೂರ್ಣವಾಗಿ ಉಚಿತ ಪ್ರಯಾಣ, ಮುಂತಾದ ಯೋಜನೆಗಳು ಜನರ ಹೃದಯ ಗೆದ್ದಿವೆ ಎಂಬುದು ಕಾಂಗ್ರೆಸ್‌ ಕಾರ್ಯಕರ್ತರ, ಅನೇಕರ ಅಭಿಪ್ರಾಯವಾಗಿದೆ ಎಂದರು.

ಬಿಜೆಪಿ ಸರಕಾರಗಳು ಜನರಿಗೆ ಒಳ್ಳೆಯ ದಿನಗಳನ್ನು ಕೊಡಲಿವೆ ಎಂಬ ಭರವಸೆಯಿಂದ ಅಧಿಕಾರಕ್ಕೆ ಬಂದಿರುತ್ತವೆ. ಆದರೆ ವಿವಿಧ ರೀತಿಯಲ್ಲಿ ಜನರಿಗೆ ತೊಂದರೆ ನೀಡುತ್ತಾ ಇವೆ. ಜನರು ಹಿಂದೆಂದಿಗಿಂತಲೂ ತೀವ್ರವಾದ ಸಂಕಷ್ಟದಲ್ಲಿ ಇದ್ದಾರೆ ಎಂಬ ವಿಚಾರವೂ ಕಾಂಗ್ರೆಸ್‌ನ ಕಾರ್ಯಕರ್ತರಿಗೆ ಈ ಬಾರಿ ಮನೆ ಮನೆಗೆ ಹೋದಾಗ ಜನ ಹೇಳಿದ್ದಾರೆ ಎಂದರು.

ಬಿಜೆಪಿ ಹೇಳಿದ್ದೊಂದು ಮಾಡಿದ್ದೊಂದು:
ಈ ಬಿಜೆಪಿ ಅಧಿಕಾರ ಸಿಗುವ ಮೊದಲು ಹೇಳಿದ್ದೊಂದು, ಅಧಿಕಾರ ಸಿಕ್ಕ ಮೇಲೆ ಮಾಡಿದ್ದೊಂದು ಎಂಬುದು ಎಲ್ಲಾ ಕಡೆ ಜನರಿಂದ ನಮಗೆ ಈ ಬಾರಿ ಸಿಕ್ಕಿದ ಅಭಿಪ್ರಾಯವಾಗಿದೆ. ಬೊಮ್ಮಾಯಿ ಸರಕಾರ ಭ್ರಷ್ಟಾಚಾರದಲ್ಲೇ ನಂಬರ್‌ ಒಂದನೇ ಸ್ಥಾನ ಪಡೆದಿದೆ ಎಂಬುದು ಜಗಜ್ಜಾಹೀರಾದ ವಿಚಾರ. ಗುತ್ತಿಗೆದಾರರ ಸಂಘ ನೇರವಾಗಿ ಬಹಿರಂಗವಾಗಿ ಬಿಲ್‌ ಪಾವತಿಸಬೇಕಾದರೆ ನಲವತ್ತು ಶೇಕಡಾ ಕಮೀಷನ್‌ನ ಬೇಡಿಕೆ ಈ ಸರಕಾರ ಇಡುತ್ತಾ ಇದೆ ಎಂಬುದು ದಿನಾ ದೊಡ್ಡ ಸುದ್ದಿ ಆಗಿತ್ತು. ಇದರ ಬಗ್ಗೆ ದಿವ್ಯ ಮೌನಕ್ಕೆ ಜಾರಿದ ಮೋದಿಯವರು ಚಕಾರವೆತ್ತಲಿಲ್ಲ ಎಂಬ ಸಿಟ್ಟು ಕೂಡ ಸಾರ್ವಜನಿಕರಲ್ಲಿ ಮನೆ ಮಾಡಿದೆ.
ಶರತ್‌ ಶೆಟ್ಟಿ, ಬ್ಲಾಕ್‌ ಕಾಂಗ್ರೆಸ್‌ ಉಪಾಧ್ಯಕ್ಷ

ಕೇವಲ ಘೋಷಣೆಗಳು ಮಾತ್ರ:
ದೇಶವನ್ನು ವಿಶ್ವದಲ್ಲೇ ಗುರುತಿಸುವ ಹಾಗೆ ಮಾಡಿದ ಡಾ| ಮನಮೋಹನ್‌ ಸಿಂಗ್‌ ಸರಕಾರದ ಸಾಧನೆಗಳನ್ನು ಮಣ್ಣುಪಾಲು ಮಾಡಿದ ನರೇಂದ್ರ ಮೋದಿ ಸರಕಾರ ಕೇವಲ ಘೋಷಣೆಗಳಿಗೆ ಸೀಮಿತವಾಗಿದೆ, ಕೋವಿಡ್‌ ಸಂದರ್ಭದಲ್ಲಿ ಉಂಟಾದ ಕಷ್ಟ ನಷ್ಟಗಳನ್ನು ಭಾರತೀಯರು ಯಾವತ್ತೂ ಮರೆಯುವುದಿಲ್ಲ.
ನಿತ್ಯಾನಂದ ಶೆಟ್ಟಿ,
ಮಾಜಿ ತಾಲೂಕು ಪಂಚಾಯತ್‌ ಅಧ್ಯಕ್ಷರು

Advertisement

ಬಿಜೆಪಿಯ ಭ್ರಷ್ಟಾಚಾರಕ್ಕೆ ಕೈಗನ್ನಡಿ:
ಮಾಡಾಳ್‌ ವಿರೂಪಾಕ್ಷ ಎಂಬ ಬಿಜೆಪಿ ಶಾಸಕರ ಮನೆಯಲ್ಲಿ ಹಾಸಿಗೆ ಮೇಲೆ ಪತ್ತೆ ಆದ 6 ಕೋ.ರೂ. ಬಿಜೆಪಿಯ ಭ್ರಷ್ಟಾಚಾರಕ್ಕೆ ಹಿಡಿದ ಕನ್ನಡಿ ಆಗಿದೆ. ಸ್ಯಾಂಟ್ರೋ ರವಿ ಪ್ರಕರಣವಂತೂ ಜನ ತಲೆ ತಗ್ಗಿಸುವ ವಿಚಾರವಾಗಿತ್ತು. ನನ್ನ ಅನಿಸಿಕೆ ಪ್ರಕಾರ ಬಿಜೆಪಿಯ ಪಾಪದ ಕೊಡ ತುಂಬಿದೆ, ಈ ಬಾರಿ ಜನ ಬಿಜೆಪಿಯನ್ನು ಸೋಲಿಸುವುದು ಖಚಿತ.
ವೆರೋನಿಕಾ ಕರ್ನೆಲಿಯೋ ,ಕೆಪಿಸಿಸಿ ಪ್ಯಾನಲಿಸ್ಟ್‌

ಮಹಿಳೆಯರ ಬಗ್ಗೆ ಗೌರವವಿಲ್ಲ:
ಮಹಿಳೆಯರ ಬಗ್ಗೆ ಬಿಜೆಪಿ ನಾಯಕರುಗಳಿಗೆ ಕಿಂಚಿತ್ತೂ ಗೌರವವಿಲ್ಲ ಎಂಬುದು ಅನೇಕ ಬಾರಿ ಅವರ ಹೇಳಿಕೆ ಹಾಗೂ ವರ್ತನೆಗಳಿಂದ ಸಾಬೀತಾಗಿದೆ. ಕಾಂಗ್ರೆಸ್‌ ಸರಕಾರಗಳು ಈ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಮಹಿಳಾ ಸಬಲೀಕರಣ ಮಾಡಿದೆ. ಕಾಂಗ್ರೆಸ್‌ ನೀಡಿದ ಕೊಡುಗೆಯನ್ನು ಮಹಿಳಾ ಕಾಂಗ್ರೆಸ್‌ ಈ ಬಾರಿ ಉಡುಪಿಯಲ್ಲಿ ಪರಿಣಾಮಕಾರಿಯಾಗಿ ಮನೆ ಮನೆಗೆ ತಲುಪಿಸುವ ಕೆಲಸ ಮಾಡಿದೆ. ಗೆಲುವು ನಮ್ಮದೇ ಎಂಬುವುದರಲ್ಲಿ ಅನುಮಾನವೇ ಇಲ್ಲ.
ಮಮತಾ ಶೆಟ್ಟಿ ,
ಉಡುಪಿಬ್ಲಾಕ್‌ ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ

Advertisement

Udayavani is now on Telegram. Click here to join our channel and stay updated with the latest news.

Next