Advertisement

Congress Government: ಸಿದ್ದರಾಮಯ್ಯ ನೇತೃತ್ವದ್ದು ಶೇ.80 ಕಮಿಷನ್‌ ಸರಕಾರ: ನಳಿನ್‌

03:15 AM Oct 20, 2024 | Team Udayavani |

ಪುತ್ತೂರು: ನಾನು ರಾಷ್ಟ್ರ ಅಥವಾ ರಾಜ್ಯ ರಾಜಕಾರಣದಲ್ಲಿ ಆಸಕ್ತಿ ಹೊಂದಿಲ್ಲ ಎಂದು ಮಾಜಿ ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು.

Advertisement

ಬಿಜೆಪಿ ಕಚೇರಿಯಲ್ಲಿ ಪ್ರಮುಖರ ಜತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತನಾಗಿ ಬೆಳೆದ ನನ್ನ ಗುರಿ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುವುದು. ಬಿಜೆಪಿ ನನಗೆ ಮೂರು ಬಾರಿ ಸಂಸದನಾಗುವ ಹಾಗೂ ಒಂದು ಬಾರಿ ರಾಜ್ಯಾಧ್ಯಕ್ಷರಾಗುವ ಅವಕಾಶ ಕೊಟ್ಟಿದೆ. ಇದಕ್ಕಿಂತ ಹೆಚ್ಚು ಇನ್ನೇನು ಬೇಕು ಎಂದು ಕೇಳಿದರು.

ನಮ್ಮ ಸರಕಾರದ ವಿರುದ್ಧ ಈ ಹಿಂದೆ ಶೇ. 40 ಕಮಿಷನ್‌ ಸರಕಾರ ಕಾಂಗ್ರೆಸ್‌ ಸುಳ್ಳು ಆರೋಪಿಸಿತ್ತು. ಆದರೆ ಸಿದ್ದರಾಮಯ್ಯ ನೇತೃತ್ವದ ಇಂದಿನ ಕಾಂಗ್ರೆಸ್‌ ಸರಕಾರ ಶೇ. 80 ಕಮಿಷನ್‌ ಸರಕಾರ ಅನ್ನುವುದಕ್ಕೆ ಮುಡಾ ಹಗರಣ, ವಾಲ್ಮೀಕಿ ನಿಗಮ ಹಗರಣಗಳೇ ಸಾಕ್ಷಿ ಎಂದರು.

ಹಿಂದಿನ ಶಾಸಕ ಸಂಜೀವ ಮಠಂದೂರು ಅವಧಿಯಲ್ಲಿ ಬಿಡುಗಡೆಯಾಗಿದ್ದ ಅನುದಾನದ ಕಾಮಗಾರಿಗಳು ಈಗ ಉದ್ಘಾಟನೆ ಆಗುತ್ತಿವೆಯೇ ಹೊರತು ಹೊಸ ಕಾಮಗಾರಿಗಳು ನಡೆಯುತ್ತಿಲ್ಲ. ಈಗಿನ ಸರಕಾರ ಅನುದಾನದಲ್ಲಿ ಕಾಮಗಾರಿ ಆಗುತ್ತಿದ್ದರೆ ಅದಕ್ಕೆ ದಾಖಲೆ ನೀಡಲಿ ಎಂದು ಆಗ್ರಹಿಸಿದರು. ಮಾಜಿ ಶಾಸಕ ಸಂಜೀವ ಮಠಂದೂರು ಮತ್ತಿತರರು ಉಪಸ್ಥಿತರಿದ್ದರು.

ಅಡಿಕೆ ಆಮದು ಒಪ್ಪಂದ : ಚರ್ಚೆ
ಭೂತಾನ್‌ನಿಂದ ಹಸಿ ಅಡಿಕೆ ಆಮದು ಒಪ್ಪಂದದ ಬಗ್ಗೆ ಈಗಾಗಲೇ ಕ್ಯಾಂಪ್ಕೋ ಕೇಂದ್ರ ಸರಕಾರದ ಗಮನಕ್ಕೆ ತಂದಿದೆ. ಕೇಂದ್ರ ವಾಣಿಜ್ಯ, ಕೃಷಿ ಸಚಿವರ ಜತೆ ಚರ್ಚಿಸುತ್ತಿದ್ದು, ಬೆಳೆಗಾರರಿಗೆ ಯಾವುದೇ ತೊಂದರೆ ಆಗದಂತೆ ಪರಿಹಾರ ಸಿಗಲಿದೆ ಎಂದು ನಳಿನ್‌ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next