Advertisement

ಕಾಂಗ್ರೆಸ್ ಸರ್ಕಾರ ಶಿಕ್ಷಣ ಕ್ಷೇತ್ರವನ್ನು ಹಾಳು ಮಾಡುತ್ತಿದೆ:ವಿ.ಪ. ಸದಸ್ಯ ಎಸ್.ವಿ. ಸಂಕನೂರ

03:14 PM May 21, 2024 | Kavyashree |

ಗದಗ: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಆಡಳಿತಕ್ಕೆ ಬಂದ ನಂತರ ಶಿಕ್ಷಣ ಇಲಾಖೆಯಲ್ಲಿ ಹಲವಾರು ತಪ್ಪು ನಿರ್ಣಯಗಳನ್ನು ಕೈಕೊಂಡು ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣವಾಗಿ ಹಾಳು ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.

Advertisement

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೇ ಕಾರಣಿಕರ್ತರು ಎಂದು ಆರೋಪಿಸಿದರು.

ಜೂನ್ ಮೊದಲ ತಿಂಗಳಿನಿಂದಲೇ ಅನಾವಶ್ಯಕವಾಗಿ ಹಿಂದೆ ಇದ್ದ ಶಾಲಾ ಪಠ್ಯಕ್ರಮದ ಬದಲಾವಣೆ ಮಾಡುವ ಕುರಿತು ಸರ್ಕಾರವು ಬಿಜೆಪಿ ವಿರುದ್ಧ ದ್ವೇಷದ ನಿರ್ಣಯ ಕೈಕೊಂಡಿದೆ ಎಂದ ಅವರು ಎನ್.ಇ.ಪಿ. ರದ್ದುಪಡಿಸಿ ಎಸ್.ಇ.ಪಿ ಜಾರಿ ಮಾಡಿದ್ದು ಕೂಡ ರಾಜಕೀಯ ಪ್ರೇರಿತವಾದ ನಿರ್ಣಯವಾಗಿದೆ ಎಂದರು.

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಗೆ ಮೂರು ಪರೀಕ್ಷೆಗಳನ್ನು ನಡೆಸುವ ತಪ್ಪು ನಿರ್ಧಾರ ಕೈಗೊಂಡಿದೆ. ಇಷ್ಟೆಲ್ಲ ಲೋಪದೋಷಗಳಾಗಲು ಶಿಕ್ಷಣ ಸಚಿವರು ಇಲಾಖೆಯ ಆಗು ಹೋಗುಗಳ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ ಹಾಗೂ ನಿರ್ಲಕ್ಷ್ಯ ಭಾವನೆ ತೋರಿದ್ದಾರೆ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆ ವೆಬ್ ಕಾಸ್ಟಿಂಗ್  ಸ್ವಾಗತಿಸುತ್ತೇನೆ. ವೆಬ್ ಕಾಸ್ಟಿಂಗ್ ನಿಂದ ಮಕ್ಕಳಲ್ಲಿ ಭಯ ಉಂಟಾಗುತ್ತದೆ. ಭಯದ ವಾತಾವರಣದಲ್ಲಿ ಪರೀಕ್ಷೆ ಬರೆದಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಅತ್ಯಂತ ಕಡಿಮೆ ಫಲಿತಾಂಶ ಬಂದಿರುವುದು ರಾಜ್ಯಕ್ಕೆ ಅಪಮಾನವಾಗಿದೆ ಎಂದರು.

Advertisement

ಫಲಿತಾಂಶ ಬಗ್ಗೆ ಮಾಹಿತಿಯನ್ನು ಗೌಪ್ಯವಾಗಿಡಲಾಗಿದೆ. ಶೇ. 43ರಷ್ಟಿರುವುದನ್ನು ಶೇ. 73ಕ್ಕೇರಿಸಲಾಗಿದೆ. ಹೆಚ್ಚಿನ ಗ್ರೇಸ್‌ ಮಾರ್ಕ್ಸ ನೀಡಿದ್ದಾರೆ. ವೆಬ್ ಕಾಸ್ಟಿಂಗ್ ಅನಿವಾರ್ಯವಿತ್ತಾ ಎಂಬ ಪ್ರಶ್ನೆ ಎದುರಾಗುತ್ತದೆ ಎಂದ ಅವರು, ಸರಕಾರ, ಸಚಿವ ಮಧು ಬಂಗಾರಪ್ಪ ವಿದ್ಯಾರ್ಥಿಗಳನ್ನು ಗೊಂದಲಕ್ಕೀಡು ಮಾಡುತ್ತಿದ್ದಾರೆ ಎಂದು ಹೇಳಿದರು.

5, 8, 9 ಹಾಗೂ 11 ನೇ ತರಗತಿಗಳಿಗೆ ಇಲಾಖೆಯಿಂದಲೇ ಪರೀಕ್ಷೆ ನಡೆಸಬೇಕೆಂಬ ನಿರ್ಧಾರವನ್ನು ಜಾರಿ ಮಾಡುವಲ್ಲಿ ವಿಫಲವಾದ ಸರಕಾರದ ಬಗ್ಗೆ ಹೇಳುತ್ತಾ, 5, 8, 9 ಹಾಗೂ 11ನೇ ತರಗತಿಗಳಿಗೆ ಶಾಲಾ ಮಟ್ಟದಲ್ಲಿ ಪರೀಕ್ಷೆ ನಡೆಯುತ್ತಿತ್ತು. ಈಗ ಇಲಾಖೆಯಿಂದ ಪರೀಕ್ಷೆ ನಡೆಸುವುದಾಗಿ ತಿಳಿಸಿದೆ. ಇದನ್ನು ಸ್ವಾಗತಿಸುತ್ತೇವೆ ಎಂದರು.

ಈ ನಿರ್ಣಯ ಜಾರಿ ಮಾಡಲು ಶಿಕ್ಷಕರನ್ನು, ಆಡಳಿತ ಮಂಡಳಿಯವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ತಪ್ಪು ಮಾಡಿದ್ದಾರೆ. ಸರಕಾರ ಏಕಪಕ್ಷೀಯ ನಿರ್ಧಾರ ಕೈಗೊಳ್ಳುವ ಮೂಲಕ ತಪ್ಪು ಹೆಜ್ಜೆಯನ್ನಿಟ್ಡಿದ್ದು, ಶಿಕ್ಷಕರಿಗೆ, ಆಡಳಿತ ಮಂಡಳಿಯವರಿಗೆ ಮನವರಿಕೆ ಮಾಡಲು ಸರಕಾರ ಎಡವಿದೆ ಎಂದು ಹೇಳಿದರು.

ಏಪ್ರಿಲ್ 2024ರ ಫಲಿತಾಂಶ ಕಡಿಮೆಯಾಗಲು ಕಾರಣವೇನು, ಇದಕ್ಕೆ ಯಾರು ಕಾರಣ ಎಂದು ಪ್ರಶ್ನಿಸಿದ ಅವರು ತಪ್ಪಿತಸ್ಥರಿಗೆ ಶಿಸ್ತು ಕ್ರಮ ಕೈಗೊಳ್ಳಬೇಕು. ಲೋಪದೋಷಗಳ ಕುರಿತು ತನಿಖೆ ನಡೆಸಲು ಉನ್ನತ ಮಟ್ಟದ ಅಧಿಕಾರಿಗಳ ಸಮಿತಿ ರಚನೆಯಾಘಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next