Advertisement

Congress Government: ತೈಲ, ಹಾಲಿನ ದರ ಹೆಚ್ಚಿಸಿ ಬಡವರಿಗೆ ಅನ್ಯಾಯ 

07:55 PM Jun 25, 2024 | Team Udayavani |

ರಬಕವಿ-ಬನಹಟ್ಟಿ (ಬಾಗಲಕೋಟೆ ಜಿಲ್ಲೆ): ರಾಜ್ಯದ ಕಾಂಗ್ರೆಸ್ ಸರ್ಕಾರ ರೈತ, ಬಡವರ, ದೀನ ದಲಿತರ ವಿರೋಧಿಯಾಗಿದ್ದು, ಸರ್ವಾಧಿಕಾರಿ ಆಡಳಿತ ನೀಡುತ್ತಿದೆ. ಗ್ಯಾರಂಟಿ ಯೋಜನೆಗಳಿಗಾಗಿ ತೈಲ, ಹಾಲಿನ ದರ  ಸೇರಿ 40ಕ್ಕೂ ಹೆಚ್ಚು ವಸ್ತುಗಳ ಬೆಲೆ ಹೆಚ್ಚಿಸಿ ಬಡವರಿಗೆ ಅನ್ಯಾಯ ಮಾಡಿದೆ. ಸುಳ್ಳು ಭರವಸೆಗಳ ನೀಡಿ ದೇಶದಲ್ಲಿ ಹೆಚ್ಚಿನ ಸ್ಥಾನಗಳ ಪಡೆದಿರುವ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ತೇರದಾಳ ಕ್ಷೇತ್ರ ಶಾಸಕ ಸಿದ್ದು ಸವದಿ ಹೇಳಿದರು.
ಮಂಗಳವಾರ ಇಲ್ಲಿನ ಭದ್ರನವರ ಕಟ್ಟಡ ಮುಂಭಾಗದಲ್ಲಿ ಜಮಖಂಡಿ ಕುಡಚಿ ರಾಜ್ಯ ಹೆದ್ದಾರಿ ಮೇಲೆ ರಸ್ತೆ ತಡೆ ನಡೆಸಿ, ಪ್ರತಿಭಟನೆ ಸಂದರ್ಭದಲ್ಲಿ ಮಾತನಾಡಿ ರಾಜ್ಯದ ಜನರು ಲೋಕಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ತಿರಸ್ಕಾರ ಮಾಡಿದ್ದಾರೆ. ಕಾಂಗ್ರೆಸ್ ಶಾಸಕರೇ ಗ್ಯಾರಂಟಿ ಯೋಜನೆಗಳ ನಿಲ್ಲಿಸುವಂತೆ ಹೇಳಿದ್ದಾರೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಸರ್ಕಾರ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡದೆ ಇರುವುದರಿಂದ ಯಾವುದೇ ಕಾಮಗಾರಿಗಳು ನಡೆಯುತ್ತಿಲ್ಲ ಎಂದು ಟೀಕಿಸಿದರು.

Advertisement

ಶಕ್ತಿ ಯೋಜನೆಯಿಂದ ದಿನನಿತ್ಯ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಬಹಳಷ್ಟು ಸಮಸ್ಯೆಯಾಗಿದೆ. ನಗರ ಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ನೇಮಕ ಮಾಡಿಲ್ಲ. ನೋಂದಣಿ ಶುಲ್ಕ ಸೇರಿ ಅನೇಕ ರೀತಿಯ ದರಗಳ ಹೆಚ್ಚಿಸಿ  ಕಾಂಗ್ರೆಸ್ ರೈತರಿಗೆ, ಬಡವರಿಗೆ ಅನ್ಯಾಯ ಮಾಡಿದೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.

ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಅರ್ಧ ಗಂಟೆಗಳಿಗಿಂತ ಹೆಚ್ಚು ಕಾಲ ಜಮಖಂಡಿ ಕುಡಚಿ ರಾಜ್ಯ ಹೆದ್ದಾರಿ  ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಶ್ರೀ ಶೈಲ ಬೀಳಗಿ, ಸುರೇಶ ಅಕ್ಕಿವಾಟ, ಧರೆಪ್ಪ ಉಳ್ಳಾಗಡ್ಡಿ, ಸಂಜಯ ತೆಗ್ಗಿ, ಶ್ರೀಶೈಲ ಯಾದವಾಡ, ಬಸವರಾಜ ತೆಗ್ಗಿ, ಸಿದ್ದನಗೌಡ ಪಾಟೀಲ, ಮಾನಿಂಗ ಕೋಳಿಗುಡ್ಡ, ಮನೋಹರ ಶಿರೋಳ, ಪ್ರಭಾಕರ ಮೊಳೆದ, ಈರಣ್ಣ ಚಿಂಚಖಅಡಿ, ಗುರು ಶೀಲವಂತ, ಸವಿತಾ ಹೊಸೂರ, ಗೌರಿ ಮಿಳ್ಳಿ, ದೀಪಾ ಕೊಣ್ಣೂರ, ಶಶಿಕಲಾ ಸಾರವಾಡ, ಜಯಶ್ರೀ ಬಾಗೇವಾಡಿ, ಪವಿತ್ರಾ ತುಕ್ಕನ್ನವರ, ಸಚಿನ ಕೊಡತೆ, ಸುಬಾಸ ಚೋಳಿ, ರವಿ ಕರಲಟ್ಟಿ, ರಾಮಣ್ಣ ಹಿಡಕಲ, ಪ್ರಕಾಶ ದಾನಿಗೊಂಡ, ಚಿದಾನಂದ ಹೊರಟ್ಟಿ, ಶ್ರೀಶೈಲ ಉಳ್ಳಾಗಡ್ಡಿ, ರಾಜು ಪಾಟೀಲ, ಭೀಮಸಿ ಪಾಟೀಲ ಸೇರಿ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next