Advertisement
ಬನಹಟ್ಟಿಯ ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತೇರದಾಳ ಕ್ಷೇತ್ರದಲ್ಲಿ ನೇಕಾರರೊಂದಿಗಿನ ಸಂವಾದ ನಡೆಸಲು ಆಗಮಿಸಿದ್ದು, ಕಾಂಗ್ರೆಸ್‌ನ ಪ್ರಚಾರಕ್ಕೆ ಹೊರತು ನೇಕಾರರ ಕಳಕಳಿ ಹೊತ್ತು ಬಂದಿಲ್ಲ. ಆಡಳಿತ ಪಕ್ಷದಲ್ಲಿದ್ದಾಗಲೇ ಇಂದಿಗೂ ನೇಕಾರರ ಪರ ಧ್ವನಿ ಎತ್ತುತ್ತಿದ್ದೇನೆ. ಒಂದೇ ಒಂದು ಸಲವಾದರೂ ನನ್ನೊಂದಿಗೆ ಧ್ವನಿಗೂಡಿಸಿದ್ದರೆ ನೇಕಾರರ ನಿಜವಾದ ಕಳಕಳಿ ಎನ್ನಬಹುದು. ಆಡಳಿತ ಪಕ್ಷದಲ್ಲಿರುವ ನಾವೇ ನಾಲ್ಕೈದು ಶಾಸಕರು ನಿತ್ಯ ನೇಕಾರರ ಸಮಸ್ಯೆಗಳಿಗೆ ಧ್ವನಿಯಾಗಿ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿದೆ. ಈ ಸಂವಾದ ಬದಲಾಗಿ ಕಲಾಪದಲ್ಲಿ ಸಮಸ್ಯೆ ಪರಿಹರಿಸಿ ಎಂದು ಸವದಿ ತೀಕ್ಷ್ಣವಾಗಿ ಡಿಕೆಶಿಗೆ ಟಾಂಗ್ ನೀಡಿದರು.
ರಾಜ್ಯದಲ್ಲಿ ಕಳೆದ 5 ವರ್ಷ ಕಾಂಗ್ರೆಸ್ ನಲ್ಲಿದ್ದಾಗ 32.65 ಕೋಟಿ ರೂ. ಗಳಷ್ಟು ಕೆಎಚ್‌ಡಿಸಿ ನಿಗಮವನ್ನು ಹಾನಿ ಮಾಡಿ ಅವನತಿಗೆ ತಂದಿದ್ದಾರೆ. ಇದೀಗ ಪುನಶ್ಚೇತನಗೊಳ್ಳುತ್ತಿದೆ. ಎಂ.ಡಿ. ಲಕ್ಷ್ಮೀನಾರಾಯಣ ಅವರನ್ನು ಬೆಳಕಿಗೆ ತಂದಿದ್ದೇ ಬಿಜೆಪಿ. ಇದೀಗ ಪಕ್ಷಕ್ಕೆ ದ್ರೋಹ ಬಗೆದು ಅಧಿಕಾರದ ಸ್ವಾರ್ಥಕ್ಕಾಗಿ ಕಾಂಗ್ರೆಸ್‌ಗೆ ಹೋಗಿದ್ದಾರೆ. ಡಿಕೆಶಿ, ಉಮಾಶ್ರೀ ಅವರಿಗೆ ನೇಕಾರಿಕೆ ಬರುತ್ತದೆಯೇ? ನೇಕಾರ ಕುಲದಿಂದ ಬಂದರೆ ನೇಕಾರಿಕೆ ಬಂದಂತೆಯೇ?
ಹಾಗಿದ್ದಲ್ಲಿ ಸಚಿವರಾಗಿ, ಮಾಜಿ ಸಿಎಂ ಸಿದ್ದರಾಮಯ್ಯನವರ ಬಲಗೈ ಬಂಟರಾಗಿ ಕೆಲಸ ಮಾಡುವ ಸಂದರ್ಭ ನೇಕಾರರಿಗೆ ಯಾವ ಯೋಜನೆ ಜಾರಿ ತಂದಿದ್ದೀರಿ ಎಂದು ಉಮಾಶ್ರೀ ಅವರನ್ನು ಸವದಿ ಪ್ರಶ್ನಿಸಿದರು. ನಗರಸಭಾಧ್ಯಕ್ಷ ಶ್ರೀಶೈಲ ಬೀಳಗಿ, ರಾಜು ಅಂಬಲಿ, ಮಲ್ಲಿಕಾರ್ಜುನ ಬಾಣಕಾರ, ಜಿ.ಎಸ್. ಗೊಂಬಿ, ಮಹಾದೇವ ಮುನ್ನೋಳ್ಳಿ, ಸಿದ್ರಾಮಪ್ಪ ಸವದತ್ತಿ, ಬಸವರಾಜ ತೆಗ್ಗಿ, ನಾರಾಯಣ ಮಾಲಪಾನಿ, ಹಟ್ಟಿ ಸೇರಿದಂತೆ ಅನೇಕ ನೇಕಾರ ಮುಖಂಡರಿದ್ದರು.