ಚಿತ್ತಾಪುರ: ಪಟ್ಟಣದ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಚಂದ್ರಶೇಖರ ಕಾಶಿ ಅಧ್ಯಕ್ಷರಾಗಿ ಹಾಗೂಶ್ರುತಿ ಪೂಜಾರಿ ಉಪಾಧ್ಯಕ್ಷರಾಗಿ ಗೆಲುವು ಸಾಧಿಸಿದರು.
ಒಟ್ಟು 23 ಸದಸ್ಯರ ಬಲಾಬಲ ಹೊಂದಿರುವ ಪುರಸಭೆಯಲ್ಲಿ ಕಾಂಗ್ರೆಸ್-18, ಬಿಜೆಪಿ-5 ಸ್ಥಾನಗಳಲ್ಲಿ ಗೆಲುವು ಸಾಧಿ ಸಿದ್ದವು. ಅಧ್ಯಕ್ಷಸ್ಥಾನ (ಎಸ್‌ಸಿ), ಉಪಾಧ್ಯಕ್ಷ ಸ್ಥಾನ (ಬಿಸಿಎ)ಗೆ ಮೀಸಲಿರಿಸಿ ಸರ್ಕಾರ ಆದೇಶ ಹೊರಡಿಸಿತ್ತು.ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಚಂದ್ರಶೇಖರಕಾಶಿ, ಬಿಜೆಪಿಯಿಂದ ಸುಶೀಲಾದೇವಿನಾಮಪತ್ರ ಸಲ್ಲಿಸಿದ್ದರು. ಚಂದ್ರಶೇಖರ ಕಾಶಿ 18 ಮತಗಳು ಪಡೆಯುವ ಮೂಲಕ ಗೆಲುವು ಸಾಧಿಸಿದರೆ, ಬಿಜೆಪಿ ಅಭ್ಯರ್ಥಿ ಸುಶೀಲಾದೇವಿ 4 ಮತಗಳು ಪಡೆದು ಪರಾಭವಗೊಂಡರು.
ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಶ್ರುತಿ ಪೂಜಾರಿ, ಬಿಜೆಪಿಯಿಂದ ಪ್ರಭು ಗಂಗಾಣಿ ನಾಮಪತ್ರ ಸಲ್ಲಿಸಿದ್ದರು. ಶ್ರುತಿ ಪೂಜಾರಿ 18 ಮತಗಳು ಪಡೆದು ಗೆಲುವು ಸಾಧಿ ಸಿದರೆ,ಬಿಜೆಪಿ ಅಭ್ಯರ್ಥಿ ಪ್ರಭು ಗಂಗಾಣಿ 4 ಮತ ಪಡೆದು ಪರಾಭವಗೊಂಡರು. ಓರ್ವ ಬಿಜೆಪಿ ಸದಸ್ಯ ಗೈರಾಗಿದ್ದರು. ತಹಶೀಲ್ದಾರ್ ಉಮಾಕಾಂತ ಹಳ್ಳೆ ಚುನಾವಣಾ ಪ್ರಕ್ರಿಯೆ ನಡೆಸಿದರು.
ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಅಭ್ಯರ್ಥಿಗಳು ಆಯ್ಕೆಯಾಗುತ್ತಿದ್ದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ನಂತರ ತೆರೆದ ವಾಹನದಲ್ಲಿ ಕಾಂಗ್ರೆಸ್ ಕಚೇರಿಯಿಂದ ರೈಲ್ವೆ ನಿಲ್ದಾಣ, ನಾಗಾವಿ ವೃತ್ತ, ಜನತಾ ಚೌಕ್, ಕಪಡಾ ಬಜಾರ್,ಭುವನೇಶ್ವರಿ ವೃತ್ತ, ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ, ಬಸವೇಶ್ವರ ವೃತ್ತ, ಲಾಡಿjàಂಗ್ ಕ್ರಾಸ್‌ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಸಿಪಿಐ ಕೃಷ್ಣಪ್ಪ ಕಲ್ಲದೇವರು, ಪಿಎಸ್‌ಐ ಶ್ರೀಶೈಲ್ ಅಂಬಾಟಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಿದ್ದರು. ವಿಧಾನ ಪರಿಷತ್ ಮಾಜಿ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ,ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ್, ಎಪಿಎಂಸಿ ಅಧ್ಯಕ್ಷ ಸಿದ್ದುಗೌಡ, ತಾಪಂ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ್, ಜಿಪಂ ಸದಸ್ಯರಾದ ಶಿವಾನಂದ ಪಾಟೀಲ್, ಶಿವರುದ್ರ ಭೀಣಿ,ಮುಖಂಡರಾದ ವೀರಣ್ಣಗೌಡ ಪರಸರೆಡ್ಡಿ, ಶಂಭುಲಿಂಗ ಗುಂಡಗುರ್ತಿ, ಮುಕ್ತಾರ ಪಟೇಲ್, ನಾಗರೆಡ್ಡಿ ಗೋಪಸೇನ್, ಅಜೀಜ್ ಸೇಠ್, ಮಲ್ಲಿಕಾರ್ಜುನ ಕಾಳಗಿ, ಶೀಲಾ ಕಾಶಿ, ರಸೂಲ್ ಮುಸ್ತಫಾ, ಪಾಶಾಮಿಯಾ ಖುರೇಶಿ, ಅಹ್ಮದ್ ಸೇಠ್, ವಿನೋದ್ ಗುತ್ತೇದಾರ, ಇಸ್ಮಾಯಿಲ್ ಸಾಬ್, ಶಾಮ ನಾಟೀಕಾರ್, ಪ್ರಕಾಶ ಕಮಕನೂರ್, ಸುನೀಲ್ ದೊಡ್ಮನಿ, ನಾಗಯ್ಯ ಗುತ್ತೇದಾರ, ಅಣ್ಣಾರಾವ ಸಣ್ಣೂಕರ್, ಸಾಬಣ್ಣ ಕಾಶಿ, ಜಗದೀಶ ಚವ್ಹಾಣ, ದೇವಿಂದ್ರ ಅಣಕಲ್, ಶರಣು ಡೋಣಗಾಂವ, ಶೇಖ ಬಬು, ಶಿವಾಜಿ ಕಾಶಿ, ನಜೀರ ಆಡಕಿ ಇದ್ದರು.