Advertisement

ಮಧ್ಯವರ್ತಿಗಳ ಪರ ಕೆಲಸ ಮಾಡುವ ಕಾಂಗ್ರೆಸ್‌

12:30 AM Jan 06, 2019 | Team Udayavani |

ಭುವನೇಶ್ವರ: ಯುಪಿಎ ಆಡಳಿತದ ಅವಧಿಯಲ್ಲಿ ಜನರ ಪರವಾಗಿ ಕೆಲಸ ಮಾಡದ ಕಾಂಗ್ರೆಸ್‌ ಈಗ ವಿರೋಧ ಪಕ್ಷವಾಗಿ ರಕ್ಷಣಾ ವಲಯದ ದಲ್ಲಾಳಿಗಳ ಪರ ಕೆಲಸ ಮಾಡುತ್ತಿದೆ ಎಂದು ಒಡಿಶಾದಲ್ಲಿ ಪ್ರಧಾನಿ ನರೇಂದ್ರ ಮೋದಿ ವಾಗ್ಧಾಳಿ ನಡೆಸಿದ್ದಾರೆ.

Advertisement

ಒಡಿಶಾದ ಬರಿಪಾಡದಲ್ಲಿ ರ್ಯಾಲಿಯಲ್ಲಿ ಮಾತನಾಡಿದ ಅವರು, 2004 ರಿಂದ 2014ರ ವೇಳೆ ದೇಶದ ರಕ್ಷಣಾ ವಲಯವನ್ನು ಕ್ಷೀಣಗೊಳಿಸುವ ಹುನ್ನಾರ ನಡೆಸಲಾಗಿತ್ತು. ಅದರ ವಾಸ್ತವಾಂಶಗಳು ಈಗ ಬಹಿರಂಗಗೊಳ್ಳು ತ್ತಿರುವುದ ರಿಂದ ಕಾಂಗ್ರೆಸ್‌ಗೆ ನೋವಾಗುತ್ತಿದೆ. ಹೀಗಾಗಿಯೇ ಅವರು ಚೌಕಿದಾರನನ್ನು ಕೆಳಗಿಳಿಸಬೇಕು ಎಂದು ಬಯಸಿವೆ. ಸಮಾಜದಲ್ಲೇ ಇರಲಿ ಅಥವಾ ಫ್ಯಾಕ್ಟರಿಯಲ್ಲೇ ಇರಲಿ, ಚೌಕಿದಾರ ಹೊರಗೆ ಹೋಗುವುದನ್ನೇ ಕಳ್ಳರು ಕಾಯುತ್ತಿರುತ್ತಾರೆ. ಯಾಕೆಂದರೆ ಚೌಕಿದಾರ ನಿಲ್ಲದಿದ್ದಾಗಲೇ ಅವರು ದರೋಡೆ ಮಾಡ ಬಹುದು ಎಂದು ಮೋದಿ ಕಿಡಿಕಾರಿದ್ದಾರೆ.

ಅಗಸ್ಟಾ ವೆಸ್ಟ್‌ಲ್ಯಾಂಡ್‌ ಕಾಪ್ಟರ್‌ ಹಗರಣ ದಲ್ಲಿ ದಲ್ಲಾಳಿ ಕ್ರಿಶ್ಚಿಯನ್‌ ಮೈಕೆಲ್‌ಗೆ ಪ್ರಧಾನಿ ಕಚೇರಿಯಲ್ಲಿನ ಎಲ್ಲ ವಹಿವಾಟುಗಳ ಬಗ್ಗೆಯೂ ಮಾಹಿತಿ ಸಿಗುತ್ತಿತ್ತು. ಸಂಪುಟದಲ್ಲಿ ನಡೆದ ಚರ್ಚೆಗಳ ಬಗ್ಗೆಯೂ ಮಾಹಿತಿ ಲಭ್ಯ ವಾಗುತ್ತಿತ್ತು. ಪ್ರಧಾನಿಗಿಂತಲೂ ಹೆಚ್ಚಿನ ಮಾಹಿತಿ ದಲ್ಲಾಳಿಗೆ ತಿಳಿದಿರುತ್ತಿತ್ತು ಎಂದು ಮೋದಿ ಹೇಳಿದ್ದಾರೆ.

ಕಾಂಗ್ರೆಸ್‌ನ ಸಾಲ ಮನ್ನಾಗೆ ಟೀಕೆ: ಕಾಂಗ್ರೆಸ್‌ ಘೋಷಿಸಿದ ಸಾಲ ಮನ್ನಾ ರೈತ ರನ್ನು ತಪ್ಪುದಾರಿಗೆಳೆಯುತ್ತಿದೆ. ಅವರನ್ನು ಕೇವಲ ಮತ ಬ್ಯಾಂಕ್‌ ರೀತಿ ಕಾಂಗ್ರೆಸ್‌ ನೋಡು ತ್ತಿದೆ. ಆದರೆ ಬಿಜೆಪಿಗೆ ರೈತರು ನಿಜ ವಾದ ಅನ್ನದಾತರು. ವೋಟ್‌ಬ್ಯಾಂಕ್‌ ರಾಜಕೀಯ ಮಾಡಬೇಕೆಂದಿದ್ದರೆ ನಾನೂ ರೈತರ 1 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡುತ್ತಿದ್ದೆ. ಆದರೆ, ನಾನು ಹಳೆಯ ವ್ಯವಸ್ಥೆ ಬದಲಿಸಲು ಹೊರಟಿದ್ದೇವೆ. ರೈತರ ಕಲ್ಯಾಣಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿ ದ್ದೇವೆ ಎಂದು ಜಾರ್ಖಂಡ್‌ನ‌ಲ್ಲಿ ವಿವಿಧ ನೀರಾವರಿ ಯೋಜನೆಗಳನ್ನು ಉದ್ಘಾಟಿಸಿ ಘೋಷಿಸಿದ್ದಾರೆ. ಈ ಯೋಜನೆಗಳಿಂದ 19 ಸಾವಿರ ಹೆಕ್ಟೇರ್‌ ಪ್ರದೇಶಕ್ಕೆ ನೀರು ಒದಗಲಿದೆ. ಅಲ್ಲದೆ ಮಂಡಲ್‌ ಆಣೆಕಟ್ಟೆ ಯೋಜನೆಗೂ ಅವರು ಚಾಲನೆ ನೀಡಿದ್ದಾರೆ. ಆಣೆಕಟ್ಟೆ ಯೋಜನೆ 1972 ರಲ್ಲೇ ಆರಂಭವಾಗಿದ್ದರೂ, ಸ್ಥಗಿತಗೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next