ಸಂಡೂರು: ದೇಶದಲ್ಲಿ ಕೃಷಿ ಕಾಯಿದೆಯನ್ನು ತಿದ್ದು ಪಡಿ ಮಾಡುವ ಮೂಲಕ ರೈತರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದ್ದು ತಕ್ಷಣ ನಿಲ್ಲಿಸಬೇಕು. ರೈತರನ್ನು ರಕ್ಷಿಸಬೇಕು ಅದಕ್ಕಾಗಿಯೇ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಮಹಿಳಾ ಕಾಂಗ್ರೆಸ್ ನಡಿಗೆ ಅನ್ನದಾತರ ಬಳಿಗೆ ಎನ್ನುವ ಮೂಲಕ ರೈತರ ಜಮೀನಿಗೆ ತೆರಳಿ ರೈತರ ಕಷ್ಟಗಳನ್ನು ಅಲಿಸುವಂಥ ಮಹತ್ತರ ಕಾರ್ಯವನ್ನು ಮಾಡುತ್ತಿದ್ದೇವೆ ಎಂದು ಜಿಲ್ಲಾ ಗ್ರಾಮೀಣ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಶಾಲತಾ ತಿಳಿಸಿದರು.
ಅವರು ತಾಲೂಕಿನ ಸುಶೀಲಾನಗರ ಗ್ರಾಮದ ರೈತ ಮಹಿಳೆಯರ ಕೃಷಿ ಜಮೀನಿಗೆ ತೆರಳಿ ಅವರು ಬೆಳೆದ ಬೆಳೆ, ಮಾಡಿದ ಖರ್ಚು, ಸಿಕ್ಕ ಮಾರುಕಟ್ಟೆ ಬೆಲೆ, ಆದ ನಷ್ಟಗಳನ್ನು ಅಲಿಸುವ ಮೂಲಕ ಅವರಿಗೆ ಬೆಳೆಗೆ ಉತ್ತಮ ಬೆಲೆ ಭರವಸೆ ನೀಡುವ ಮೂಲಕ ಸಮಾಲೋಚನೆ ನಡೆಸಿದರು. ಅವರ ಜೊತೆಗೆ ಸೇರಿ ಶ್ರಮದಾನ ಮಾಡುವ ಮೂಲಕ ಸಮಸ್ಯೆಗಳನ್ನು ಆಲಿಸುವ ಕೆಲಸ ಮಾಡಿದರು.
ಇದನ್ನೂ ಓದಿ:ವೇಣುಗೋಪಾಲಕೃಷ್ಣಸ್ವಾಮಿ ರಥೋತ್ಸವ
ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್(ಗ್ರಾಮೀಣ) ಅಧ್ಯಕ್ಷೆ ಆಶಾಲತಾ ಸೋಮಪ್ಪ, ಉಪಾಧ್ಯಕ್ಷೆ ಪುಷ್ಪಾವತಿ, ತಾಲೂಕು ಮಹಿಳಾ ಅಧ್ಯಕ್ಷೆ ಈರಮ್ಮ, ಉಪಾಧ್ಯಕ್ಷೆ ಜಿ.ಕೆ.ರೇಖಾ, ಯುವ ಕಾಂಗ್ರೆಸ್ ಕಾರ್ಯದರ್ಶಿ ನಿರ್ಮಲಾ, ಆರ್‌ಎಸ್‌ಎಸ್‌ಎನ್ ಸದಸ್ಯರಾದ ಶೋಭಾ, ತಾಲೂಕು ಪಂಚಾಯಿತಿ ಸದಸ್ಯರಾದ ಗಂಗಾಬಾಯಿ ಚಂದ್ರನಾಯ್ಕ, ಪದಾಧಿಕಾರಿಗಳಾದ ಶಹಜಾದ್ ಬೀ, ಗೌರಿಬಾಯಿ, ಕಾಶಿಬಾಯಿ, ಲಚ್ಚಿಬಾಯಿ ಇದ್ದರು.