Advertisement

ಕಾಂಗ್ರೆಸ್‌ ಮೊದಲ ಪಟ್ಟಿ  ಪ್ರಕಟ

10:41 AM Mar 25, 2019 | Vishnu Das |

ಬೆಂಗಳೂರು: ಕಾಂಗ್ರೆಸ್‌ ಕೊನೆಗೂ ಆಳೆದು ತೂಗಿ ಅಭ್ಯರ್ಥಿಗಳ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿರುವುದರಿಂದ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ದೊರೆತಿರುವ 20ರ ಪೈಕಿ 18 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗಿದೆ. ದಕ್ಷಿಣ ಕನ್ನಡದಲ್ಲಿ ಯುವ ಮುಖಂಡ ಮಿಥುನ್‌ ರೈಗೆ ಅವಕಾಶ ಕಲ್ಪಿಸಲಾಗಿದೆ.

Advertisement

ರಾಜ್ಯದಲ್ಲಿ ಕಾಂಗ್ರೆಸ್‌ನ 10 ಹಾಲಿ ಸಂಸದರಲ್ಲಿ ತುಮಕೂರು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿ ರುವುದರಿಂದ ಒಂಬತ್ತು ಮಂದಿ ಹಾಲಿ ಸಂಸದರಿಗೆ ಟಿಕೆಟ್‌ ನೀಡಲಾಗಿದೆ. ಉಳಿದ ಎಂಟು ಕ್ಷೇತ್ರಗಳಲ್ಲಿ ಸಾಮಾಜಿಕ ನ್ಯಾಯದ ಅಡಿಯಲ್ಲಿ ಎಲ್ಲರನ್ನೂ ಸಮಾಧಾನಪಡಿಸುವ ಪ್ರಯತ್ನ ಮಾಡಲಾಗಿದೆ. ಜತೆಗೆ ಓರ್ವ ಮಹಿಳೆಗೂ ಟಿಕೆಟ್‌ ನೀಡಲಾಗಿದೆ.

ಕೈ  ಅಭ್ಯರ್ಥಿಗಳ ಪಟ್ಟಿ
– ಬೀದರ್‌-ಈಶ್ವರ್‌ ಖಂಡ್ರೆ
– ಕಲಬುರಗಿ-ಮಲ್ಲಿಕಾರ್ಜುನ ಖರ್ಗೆ
– ರಾಯಚೂರು-ಬಿ.ವಿ. ನಾಯಕ್‌
– ಬಳ್ಳಾರಿ-ವಿ.ಎಸ್‌. ಉಗ್ರಪ್ಪ
– ಚಿಕ್ಕೋಡಿ-ಪ್ರಕಾಶ್‌ ಹುಕ್ಕೇರಿ
– ಬಾಗಲಕೋಟೆ-ವೀಣಾ ಕಾಶಪ್ಪನವರ
– ಹಾವೇರಿ-ಡಿ.ಆರ್‌. ಪಾಟೀಲ್‌
– ಚಿತ್ರದುರ್ಗ-ಬಿ.ಎನ್‌. ಚಂದ್ರಪ್ಪ
– ಕೋಲಾರ-ಕೆ.ಎಚ್‌.ಮುನಿಯಪ್ಪ
– ಚಿಕ್ಕಬಳ್ಳಾಪುರ-ವೀರಪ್ಪ  ಮೊಲಿ
– ಚಾಮರಾಜನಗರ-ಧ್ರುವ ನಾರಾಯಣ
– ಬೆಂಗಳೂರು ಗ್ರಾಮಾಂತರ-ಡಿ.ಕೆ.ಸುರೇಶ್‌
– ಬೆಂಗಳೂರು ಕೇಂದ್ರ- ರಿಜ್ವಾನ್‌ ಅರ್ಷದ್‌
– ಬೆಳಗಾವಿ-ವಿ.ಎಸ್‌. ಸಾಧೂನವರ್‌
– ದಾವಣಗೆರೆ- ಶಾಮನೂರು ಶಿವಶಂಕರಪ್ಪ
– ಮಂಗಳೂರು- ಮಿಥುನ್‌ ರೈ
– ಮೈಸೂರು-ಸಿ.ಎಚ್‌. ವಿಜಯ್‌ಶಂಕರ್‌
– ಕೊಪ್ಪಳ- ರಾಜಶೇಖರ ಹಿಟ್ನಾಳ್‌

Advertisement

Udayavani is now on Telegram. Click here to join our channel and stay updated with the latest news.

Next