Advertisement

ಜನರ ಮಧ್ಯೆ ತೆರಳಿ ಕಾಂಗ್ರೆಸ್‌ ಹೋರಾಟ; ವಿಭಾಗ ಮಟ್ಟದ ಸಂಕಲ್ಪ ಸಮಾವೇಶ

04:50 PM Jan 19, 2021 | Team Udayavani |

ಕಲಬುರಗಿ: ಈ ವರ್ಷ ಹೋರಾಟದ ವರ್ಷವೆಂದು ಪಕ್ಷ ಘೋಷಿಸಿದ್ದು, ಜನರ ನಡುವೆ ನಿಂತು ಹೋರಾಟ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ತಿಳಿಸಿದರು. ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ಜನ ವಿರೋಧಿ  ನೀತಿಗಳನ್ನು ಅನುಸರಿಸಿ ಜನರ ಆಶೋತ್ತರಗಳನ್ನು ಗಾಳಿಗೆ ತೂರಲಾಗುತ್ತಿದೆ. ಹೀಗಾಗಿ ಎರಡೂ ಸರ್ಕಾರಗಳನ್ನು ಕಿತ್ತೂಗೆಯಲು ಜನರು ನಡುವೆ ಹೋಗಿ ಕಾಂಗ್ರೆಸ್‌ ಪಕ್ಷ ನಿರಂತರ ಹೋರಾಟ ಮಾಡಲಾಗುವುದು. ಇದಕ್ಕಾಗಿ ರೂಪುರೇಷೆ ಹಾಕಿಕೊಳ್ಳಲಾಗಿದೆ ಎಂದರು.

Advertisement

ಅತಿವೃಷ್ಟಿ ಹಾನಿಗೆ ಪರಿಹಾರ ಪರಿಹಾರ ಬಂದಿಲ್ಲ. ಕಲ್ಯಾಣ ಕರ್ನಾಟಕದಲ್ಲಿನ ತೊಗರಿ ರೈತರಿಗೆ ಪ್ರೋತ್ಸಾಹ ಧನ ನೀಡದಿರುವುದು, ಜನರ ಭಾವನೆ ಮರೆತು ಸ್ವ ಹಿತಾಸಕ್ತಿಯಲ್ಲಿ ತೊಡಗಿರುವ ಸರ್ಕಾರದ ಧೋರಣೆಗಳನ್ನು ಜನರಿಗೆ ಮುಟ್ಟಿಸಿ ಎರಡೂ ಸರ್ಕಾರಗಳನ್ನು ಕಿತ್ತೂಗೆಯಲು ಪಕ್ಷ ಸಂಕಲ್ಪ ತೊಟ್ಟಿದೆ ಎಂದರು.

ಕೆಪಿಸಿಸಿ ರಾಜ್ಯದ 150 ಕ್ಷೇತ್ರಗಳಿಗೆ ಭೇಟಿ ನೀಡಿ ಪಕ್ಷದ ಸಂಘಟನೆಯ ಕುರಿತಾಗಿ ಸಮಾಲೋಚನೆ ನಡೆಸಲಿದೆ. ಪಕ್ಷದಲ್ಲಿ ಶಿಸ್ತಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ನಾವೇ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು. ಪಕ್ಷದ ಪ್ರಾಮಾಣಿಕತೆ ಹಾಗೂ ಕಾರ್ಯಚಟುವಟಿಕೆಗಳನ್ನು ಪಕ್ಷದ ಸಮಿತಿ ನಿಗಾವಹಿಸುತ್ತಿದೆ ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

ರಾಜ್ಯಕ್ಕೆ ಬರುವ ಅನುದಾನದಲ್ಲಿ ರಾಜ್ಯಕ್ಕೆ ಅನ್ಯಾಯವಾದರೆ, ರಾಜ್ಯ ಸರ್ಕಾರದಿಂದ ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಅನ್ಯಾಯದ ವಿರುದ್ಧ ಇನ್ಮುಂದೆ ಕಾಂಗ್ರೆಸ್‌ ಹೋರಾಟ ಮಾಡಲಿದೆ. 2021ನೇ ವರ್ಷ ಕಾಂಗ್ರೆಸ್‌ ಪಕ್ಷ ಹೋರಾಟ ಹಾಗೂ ಪಕ್ಷದ ಸಂಘಟನೆ ವರ್ಷ ಎಂಬುದಾಗಿ ಘೋಷಿಸಿದೆ ಎಂದು ವಿವರಿಸಿದರು.

ಗ್ರಾಪಂ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿತರೇ ಶೇ.55ರಷ್ಟು ಗೆಲುವು ಸಾಧಿಸಿದ್ದಾರೆ. ಮೀಸಲಾತಿ ಯಾವುದೇ ತರಲಿ, ಅಧ್ಯಕ್ಷರಾದ ನಂತರ ಯಾರು
ಎಷ್ಟು? ಎಂಬುದು ಗೊತ್ತಾಗುತ್ತದೆ. ಶಾಸಕರು ಹಾಗೂ ಪಕ್ಷದ ಮುಖಂಡರು ಸಭೆಗಳನ್ನು ಪಕ್ಷದ ಕಚೇರಿಯಲ್ಲೇ ನಡೆಸುವಂತೆ ಸೂಚಿಸಲಾಗಿದೆ ಎಂದು ಡಿಕೆಶಿ ಇದೇ ಸಂದರ್ಭದಲ್ಲಿ ತಿಳಿಸಿದರು.

Advertisement

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸತೀಶ್‌ ಜಾರಕಿಹೊಳಿ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಎಸ್‌.ಆರ್‌. ಪಾಟೀಲ್‌, ಮಹಿಳಾ
ಘಟಕದ ರಾಜ್ಯಾಧ್ಯಕ್ಷೆ ಪುಷ್ಪಾ ಅಮರನಾಥ, ಶಾಸಕರಾದ ಅಲ್ಲಂ ವೀರಭದ್ರಪ್ಪ, ಪ್ರಿಯಾಂಕ್‌ ಖರ್ಗೆ, ಎಂ. ವೈ. ಪಾಟೀಲ್‌, ಶರಣಬಸಪ್ಪ ದರ್ಶನಾಪುರ,
ಖನೀಜಾ ಫಾತೀಮಾ, ಪಿ.ಟಿ. ಪರಮೇಶ್ವರ ನಾಯಕ, ಡಾ. ಚಂದ್ರಶೇಖರ ಪಾಟೀಲ್‌, ಅರವಿಂದ ಅರಳಿ, ಮಾಜಿ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ್‌,
ಕೆ.ಬಿ. ಶಾಣಪ್ಪ, ಅಮರೇಗೌಡ ಬಯ್ನಾಪುರ, ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ, ಬಿ.ವಿ. ನಾಯಕ, ಮಾಜಿ ಶಾಸಕರಾದ ಬಿ.ಆರ್‌. ಪಾಟೀಲ್‌,
ತಿಪ್ಪಣ್ಣಪ್ಪ ಕಮಕನೂರ, ಅಲ್ಲಮಪ್ರಭು ಪಾಟೀಲ್‌, ಶರಣಪ್ಪ ಮಟ್ಟೂರ, ಪಕ್ಷದ ಮುಖಂಡರಾದ ಕೆ.ಸಿ. ಕೊಂಡಯ್ಯ, ಎನ್‌.ಎಸ್‌. ಭೋಸರಾಜ, ಕಾಂಗ್ರೆಸ್‌
ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಕಲಬುರಗಿ ದಕ್ಷಿಣ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನೀಲಕಂಠರಾವ ಮೂಲಗೆ, ಶಾಸಕರು, ವಿವಿಧ ಘಟಕಗಳ ಅಧ್ಯಕ್ಷರು,
ಪಕ್ಷದ ಬೆಂಬಲಿತ ಗ್ರಾಪಂ ಸದಸ್ಯರ ವಿಭಾಗೀಯ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ವಿಧಾನ  ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ.ಅಜಯಸಿಂಗ ಸ್ವಾಗತಿಸಿದರು. ಮುಖಂಡ ವಿ.ಆರ್‌. ಸುದರ್ಶನ ನಿರೂಪಿಸಿದರು. ವಿವಿಧ
ಎಲ್ಲ ಘಟಕಗಳ ಅಧ್ಯಕ್ಷರು ತಮ್ಮ ವಿಷಯಗಳನ್ನು ಸಮಾವೇಶದಲ್ಲಿ ಮಂಡಿಸಿದರು.

ಡಬಲ್‌ ಇಂಜಿನ್‌ ಕೆಟ್ಟಿದೆ 
ಕೇಂದ್ರ ಹಾಗೂ ರಾಜ್ಯ ಸರ್ಕಾರ ಡಬಲ್‌ ಇಂಜಿನ್‌ ಯಾಗಿದ್ದರೆ. ಅತಿವೃಷ್ಟಿಯಿಂದ 35 ಸಾವಿರ ರೂ ಕೋ. ರೂ. ಹಾನಿಯಾಗಿರುವಾಗ ಕೇವಲ 1860 ಕೋ.ರೂ.
ಮಾತ್ರ ಏಕೆ ಪರಿಹಾರ ಬಿಡುಗಡೆಯಾಗುತ್ತಿತ್ತು. ಅದೇ ರೀತಿ ಕೆಕೆಆರ್‌ಡಿಬಿ ಅನುದಾನ ಕಡಿತ ಜತೆಗೆ ಉದ್ಯೋಗ ನೇಮಕಾತಿ ಏಕೆ ಸ್ಥಗಿತಗೊಳ್ಳುತ್ತಿತ್ತು. ಒಟ್ಟಾರೆ ಡಬಲ್‌ಇಂಜಿನ್‌ ಕೆಟ್ಟು ಹೋಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಟೀಕಿಸಿದರು.

ತೊಗರಿಗೆ ರಾಜ್ಯ ಸರ್ಕಾರ ಪ್ರೋತ್ಸಾಹ ಧನ ನೀಡದಿರುವ ವಿರುದ್ಧ ಕಾಂಗ್ರೆಸ್‌ ಇಷ್ಟೋತ್ತಿಗೆ ಹೋರಾಟ ಮಾಡಬೇಕಿತ್ತು. ಇನ್ಮುಂದೆ ಹೋರಾಟ ಕೈಗೊಳ್ಳಲಿದೆ. ಅದಕ್ಕಾಗಿಯೇ ಕಲಬುರಗಿಗೆ ಬರಲಾಗಿದೆ. ಇನ್ಮುಂದೆ ಪಕ್ಷ ಕ್ರಿಯಾಶೀಲವಾಗಲಿದೆ. ಆಲಸ್ಯ, ನಿರ್ಲಕ್ಷ್ಯ ಸಹಿಸಲಾಗದು. ಹೋರಾಟದಲ್ಲಿ ಹಿಂದೆ ಬಿದ್ದರೆ ಕ್ರಮಕ್ಕೆ ಮುಂದಾಗಲಾಗುವುದು.
ಡಿ.ಕೆ. ಶಿವಕುಮಾರ, ಅಧ್ಯಕ್ಷ, ಕೆಪಿಸಿಸಿ

Advertisement

Udayavani is now on Telegram. Click here to join our channel and stay updated with the latest news.

Next