Advertisement

ಸುಧಾಕರ್‌ ಹೇಳಿಕೆ ಖಂಡಿಸಿ ಕಾಂಗ್ರೆಸ್‌ ನಾಯಕಿಯರಿಂದ ಹೋರಾಟ ಎಚ್ಚರಿಕೆ

11:06 PM Mar 25, 2021 | Team Udayavani |

ಬೆಂಗಳೂರು: ಡಾ| ಕೆ. ಸುಧಾಕರ್‌ ನೀಡಿರುವ “ಏಕಪತ್ನಿ  ವ್ರತಸ್ಥ’ ಹೇಳಿಕೆಯನ್ನು ಖಂಡಿಸಿ ಕಾಂಗ್ರೆಸ್‌ ನಾಯಕಿಯರು ಹೋರಾಟಕ್ಕಿಳಿಯಲು ನಿರ್ಧರಿಸಿದ್ದಾರೆ.

Advertisement

ಸುಧಾಕರ್‌ ಹೇಳಿಕೆ ಇಡೀ ಮಹಿಳಾ ಕುಲಕ್ಕೆ  ಅಪಮಾನವಾಗಿದ್ದು, ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಎಲ್ಲರ ಮೇಲೂ ಕಳಂಕ ಹೊರಿಸುವ ಕೆಲಸ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವಹೇಳನಕಾರಿ ಹೇಳಿಕೆ ವಿರುದ್ಧ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ದೂರು ನೀಡಲು ಉದ್ದೇಶಿಸಿದ್ದು, ಪ್ರಧಾನಿ  ಮತ್ತು ಕೇಂದ್ರ ಗೃಹ ಸಚಿವರಿಗೂ ದೂರು ನೀಡಲಾಗುವುದು ಎಂದು ಕಾಂಗ್ರೆಸ್‌ ನಾಯಕಿಯರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಹಿಳಾ ಕಾಂಗ್ರೆಸ್‌ ರಾಜ್ಯ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್‌ ಮಾತನಾಡಿ, ಡಾ| ಸುಧಾಕರ್‌  ಸಚಿವರಲ್ಲ; ಶಾಸಕರಾಗಲೂ ಯೋಗ್ಯತೆ ಇಲ್ಲದವರು. ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲಿಕ್ಕೂ  ಅರ್ಹತೆ ಇಲ್ಲ. ಆದ್ದರಿಂದ ತತ್‌ಕ್ಷಣ ಅವರನ್ನು ಶಾಸಕ ಸ್ಥಾನದಿಂದಲೇ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿ ನಾಯಕಿಯರು ಒಪ್ಪುತ್ತಾರಾ? :

ಶಾಸಕಿ ಲಕ್ಷ್ಮೀ ಹೆಬ್ಟಾಳ್ಕರ್‌ ಮಾತನಾಡಿ, “ರಾಮನ ಪಕ್ಷ’ದಲ್ಲಿ ಡಾ| ಸುಧಾಕರ್‌ ಅವರಿಗೆ ಈ ರೀತಿ ಬೇಕಾಬಿಟ್ಟಿಯಾಗಿ ಮಾತನಾಡಲು ಅವಕಾಶ ಮಾಡಿಕೊಟ್ಟವರು ಯಾರು? ಹಿಂದೂ ಸಂಸ್ಕೃತಿ ಇದನ್ನು ಒಪ್ಪಿಕೊಳ್ಳುತ್ತದೆಯೇ? ಬಿಜೆಪಿಯಲ್ಲೂ ಶೋಭಾ ಕರಂದ್ಲಾಜೆ, ಭಾರತಿ ಶೆಟ್ಟಿ, ರೂಪಾಲಿ, ಶಶಿಕಲಾ ಜೊಲ್ಲೆ, ತೇಜಸ್ವಿನಿ ಸಹಿತ ಹಲವು ನಾಯಕಿಯರಿದ್ದಾರೆ. ಅವರೆಲ್ಲರೂ ಸುಧಾಕರ್‌ ಹೇಳಿಕೆಯನ್ನು ಒಪ್ಪಿಕೊಳ್ಳುತ್ತಾರಾ ಎಂದು ಪ್ರಶ್ನಿಸಿದರು.

Advertisement

ಶಾಸಕಿಯರಾದ ರೂಪಾ ಶಶಿಧರ್‌, ಸೌಮ್ಯಾ ರೆಡ್ಡಿ ಮೊದಲಾದವರು ಮಾತನಾಡಿದರು.

ರಮೇಶ್‌ ಜಾರಕಿಹೊಳಿ ಅವರಿಂದ ಸಂತ್ರಸ್ತೆಯಾಗಿದ್ದಾಳೆ ಎನ್ನಲಾದ ಯುವತಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ ಕಾಂಗ್ರೆಸ್‌ ನಾಯಕಿಯರು,  “ಸಂತ್ರಸ್ತ ಯುವತಿಯ ರಕ್ಷಣೆಗೆ ನಾವೆಲ್ಲರೂ ಇದ್ದೇವೆ. ನಿಜವಾಗಿಯೂ ಆಕೆಗೆ ಅನ್ಯಾಯ ಆಗಿದ್ದರೆ ನ್ಯಾಯ ದೊರಕಿಸಿ ಕೊಡಲು ಸಹಾಯ ಮಾಡುತ್ತೇವೆ. ಆಕೆ ಧೈರ್ಯವಾಗಿ  ಮುಂದೆ ಬರಬೇಕು’ ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next