Advertisement
ಪಕ್ಷವು ತನ್ನದೇ ಪ್ರಭಾವಶಾಲಿ ನಾಯಕತ್ವದ ಅಂತ್ಯವನ್ನು ಗುರುತಿಸಲು ವಿಫಲವಾದದ್ದೂ ಒಂದು ಕಾರಣ, ಅಲ್ಲದೇ ಅಸಾಮಾನ್ಯ ನಾಯಕರ ಕೊರತೆಯಿಂದಾಗಿ ಯುಪಿಎ ಆಡಳಿತವು, “ಸಾಮಾನ್ಯ ಸರಕಾರ’ವಾಗಿ ಉಳಿದುಹೋಯಿತು ಎನ್ನುವ ಕಹಿ ಸತ್ಯ ಪ್ರಣವ್ ಮುಖರ್ಜಿಯವರ ಆತ್ಮಚರಿತ್ರೆಯಲ್ಲಿದೆ. ಪುಸ್ತಕದಲ್ಲಿ ಅವರು 2014ರ ಲೋಕಸಭಾ ಚುನಾವಣೆಯ ಫಲಿತಾಂಶದ ದಿನದ ಬಗ್ಗೆ ಮಾತನಾಡಿದ್ದಾರೆ, “ಸಾಯಂಕಾಲದ ವೇಳೆಗೆ ಫಲಿತಾಂಶ ಹೊರಬೀಳುತ್ತಿದ್ದಂತೆಯೇ, ನಿರ್ಣಾಯಕ ಫಲಿತಾಂಶ ಬಂದದ್ದನ್ನು ನೋಡಿ ನಿರಾಳವಾಯಿತು. ಆದರೆ ನನ್ನ ಪಕ್ಷದ ಪ್ರದರ್ಶನದಿಂದ ಬೇಸರವಾಗಿತ್ತು. ಕಾಂಗ್ರೆಸ್ ಕೇವಲ 44 ಸ್ಥಾನಗಳನ್ನಷ್ಟೇ ಪಡೆದಿತ್ತು ಎನ್ನುವುದನ್ನು ನಂಬಲೂ ಕಷ್ಟವಾಯಿತು.
Advertisement
ಕೈಗೆ ನಾಯಕತ್ವದ ಕೊರತೆ: ಪ್ರಣವ್ ಮುಖರ್ಜಿ ಆತ್ಮಚರಿತ್ರೆಯಲ್ಲಿ ವಿಶ್ಲೇಷಣೆ
01:23 AM Jan 06, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.