Advertisement
ಲೋಕಸಭೆಗೆ 80 ಸದಸ್ಯರನ್ನು ಆಯ್ಕೆ ಮಾಡಿ ಕಳಿಸುವ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಹೊರಗಿಟ್ಟು ಅಖೀಲೇಶ್ ಯಾದವ್ ಅವರ ಎಸ್‌ಪಿ ಮತ್ತು ಮಾಯಾವತಿ ಷವರ ಬಿಎಸ್‌ಪಿ ಪಕ್ಷ ತಮ್ಮೊಳಗೇ ಸೀಟು ಹಂಚಿಕೊಳ್ಳುವ ಪ್ರಸ್ತಾವವನ್ನು ಅಂತಿಮಗೊಳಿಸಿರುವ ಅಚ್ಚರಿಯ ವಿದ್ಯಮಾನ ಇಂದು ನಡೆದಿದೆ ಎಂದು ಮೂಲಗಳು ತಿಳಿಸಿವೆ.
Related Articles
Advertisement
ಎಸ್ಪಿ ಮತ್ತು ಬಿಎಸ್‌ಪಿ ಒಗ್ಗೂಡಿರುವುದು 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅತ್ಯಂತ ಕಠಿನ ಸವಾಲಾಗಿ ಪರಿಣಮಿಸಲಿದೆ ಎಂದು ತಿಳಿಯಲಾಗಿದೆ.
ಕೆಲ ತಿಂಗಳ ಹಿಂದೆ ನಡೆದಿದ್ದ ಉತ್ತರ ಪ್ರದೇಶದ ಗೋರಖ್‌ಪುರ (ಸಿಎಂ ಯೋಗಿ ಆದಿತ್ಯನಾಥ್ ಅವರ ಕ್ಷೇತ್ರ) ಮತ್ತು ಫೂಲ್‌ಪುರ (ಡಿಸಿಎಂ ಸುಶೀಲ್ ಮೋದಿ ಕ್ಷೇತ್ರ) ಲೋಕಸಭಾ ಕ್ಷೇತ್ರಕ್ಕೆ ನಡೆದಿದ್ದ ಉಪ ಚುನಾವಣೆಯನ್ನು ಎಸ್‌ಪಿ – ಬಿಎಸ್‌ಪಿ ಮೈತ್ರಿಕೂಟ ಜಯಿಸಿತ್ತು ಎನ್ನುವುದು ಗಮನಾರ್ಹ.
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಹೊರಗಿಡುವ ಆಲೋಚನೆ ಇದ್ದುದರಿಂದಲ್ಲೇ ಮಾಯಾವತಿ ಮತ್ತು ಅಖೀಲೇಶ್ ಯಾದವ್ ಅವರು ಮಧ್ಯಪ್ರದೇಶದ ನೂತನ ಕಾಂಗ್ರೆಸ್ ಸಿಎಂ ಅಶೋಕ್ ಗೆಹ್‌ಲೋಟ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ತಪ್ಪಿಸಿಕೊಂಡಿದ್ದರೆಂಬುದು ಈಗ ಸುಸ್ಪಷ್ಟ.