Advertisement

ಕಾಂಗ್ರೆಸ್‌ಗೆ ಹೋರಾಟದ ಮಹತ್ವ ತಿಳಿದಿಲ್ಲ: ಕಟೀಲ್‌

05:47 PM Jan 28, 2018 | Team Udayavani |

ರಾಯಚೂರು: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಗೊತ್ತಿಲ್ಲ.
ಅವರಿಗಷ್ಟೇ ಅಲ್ಲ ಕಾಂಗ್ರೆಸ್‌ನವರಿಗೇ ಹೋರಾಟ ಹಾಗೂ ಹೋರಾಟಗಾರರ ಮಹತ್ವ ತಿಳಿದಿಲ್ಲ ಎಂದು ಮಂಗಳೂರು
ಸಂಸದ ನಳೀನ್‌ ಕುಮಾರ್‌ ಕಟೀಲ್‌ ವಾಗ್ಧಾಳಿ ನಡೆಸಿದರು.

Advertisement

ನಗರದ ಕೋಟೆಯ ಮುಂಗ್ಲಿ ಮುಖ್ಯ ಪ್ರಾಣದೇವರ ದೇವಸಾœನ ಬಳಿ ವೀರ ಸಾವರ್ಕರ್‌ ಯೂಥ್‌ ಅಸೋಸಿಯೇಶನ್‌ ಹಾಗೂ ವೀರ ಸಾವರ್ಕರ್‌ ಸೇವಾ ಚಾರಿಟೇಬಲ್‌ ಟ್ರಸ್ಟ್‌ ಸಹಯೋಗದಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ವೀರ್‌ ಸಾವರ್ಕರ್‌ ಪುತœಳಿ ಪ್ರತಿಷ್ಠಾಪನೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ವಿನಾಯಕ್‌ ದಾಮೋಧರ್‌ ಸಾವರ್ಕರ್‌ ಮಹಾನ್‌ ಸ್ವಾತಂತ್ರ್ಯ ಸೇನಾನಿಯಾಗಿದ್ದ. ದೇಶಕ್ಕಾಗಿ ಜೀವನವನ್ನೇ ಸವೆಸಿದ ನಾಯಕ. ಆದರೆ, ಅಂಥ ಸೇನಾನಿ ಬಗ್ಗೆ ಸರ್ಕಾರಕ್ಕೆ ಕಾಳಜಿಯಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ತನ್ವೀರ್‌ ಸೇಠ್ಠ… ಅಧಿಕಾರಿಗಳ ಮೂಲಕ ಪುತ್ಥಳಿ ಪ್ರತಿಷ್ಠಾಪನೆಗೆ ಅಡ್ಡಿಪಡಿಸುತ್ತಿರುವುದು ಖಂಡನೀಯ. ತನ್ವೀರ್‌ ಸೇಠ್ಠ… ಭಾರತೀಯರೋ ಪಾಕಿಸ್ತಾನದವರೋ ಎಂಬುದನ್ನು ತಿಳಿಸಲಿ ಎಂದು ಆಗ್ರಹಿಸಿದರು.

ರಾಷ್ಟ್ರಪಿತ ಮಹಾತ್ಮ ಗಾಂಧಿ ಭಾರತ ರಾಮರಾಜ್ಯವಾಗಬೇಕು ಎಂದು ಆಸೆಪಟ್ಟಿದ್ದರೆ ವಿನಃ ಅಲ್ಪಸಂಖ್ಯಾತರ ದೇಶವಾಗಲಿ ಎಂದಲ್ಲ. ಇಂದು ಇಡೀ ವಿಶ್ವ ಭಾರತದ ಏಳಿಗೆಯನ್ನು ನಿಬ್ಬೆರಗಾಗಿ ನೋಡುತ್ತಿದೆ. ನಮ್ಮ ದೇಶ ವಿಶ್ವಕ್ಕೆ ಮಾದರಿಯಾಗಬೇಕು ಎಂಬ ಗಾಂಧೀಜಿ ಕನಸನ್ನು ಪ್ರಧಾನಿ ಮೋದಿ ಈಡೇರಿಸುತ್ತಿದ್ದಾರೆ ಎಂದರು.

ಶೋಭಾಯಾತ್ರೆ: ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಶೋಭಾಯಾತ್ರೆ ಮಾಡಲಾಯಿತು. ಆ ನಂತರ ಗಣ್ಯರು ಪುತ್ಥಳಿಗೆ ಹಾರ ಹಾಕಿ ಗೌರವ ಸಲ್ಲಿಸಿದರು. ನಗರಸಭೆ ಸದಸ್ಯ ನರಸಪ್ಪ ಯಕ್ಲಾಸಪುರ, ಮಾಜಿ
ಶಾಸಕರಾದ ಎನ್‌, ಶಂಕ್ರಪ್ಪ, ಡಾ| ಶಿವರಾಜ ಪಾಟೀಲ್‌, ಬಸವಗೌಡ ಬ್ಯಾಗವಾಟ್‌, ಮುಖಂಡರಾದ ಈ. ಆಂಜನೇಯ, ನಗರಸಭೆ ಸದಸ್ಯರಾದ ಈ. ವಿನಯಕುಮಾರ್‌, ಮಹಾಲಿಂಗ ರಾಂಪುರ ಇತರರಿದ್ದರು.

Advertisement

ಸಾಕಷ್ಟು ಅಡೆತಡೆಗಳ ಮಧ್ಯೆಯೂ ಪುತ್ಥಳಿ ಪ್ರತಿಷ್ಠಾಪನೆ ನಡೆಯಿತು. ಸಾರ್ವಜನಿಕ ಸ್ಥಳದಲ್ಲಿ ವೀರ ಸಾವರ್ಕರ್‌
ಪುತ್ಥಳಿ ಪ್ರತಿಷ್ಠಾಪನೆ ಮಾಡದಂತೆ ಕೆಲ ಸಂಘಗಳು ದೂರು ನೀಡಿದ್ದವು. ಇದರಿಂದ ಜಿಲ್ಲಾಡಳಿತ ಮೆರವಣಿಗೆಗೂ ಅವಕಾಶ ನೀಡಿರಲಿಲ್ಲ. ಹೀಗಾಗಿ ಸಂಘದ ಸದಸ್ಯರು ತರಾತುರಿಯಲ್ಲಿ ಪುತ್ಥಳಿ ಪ್ರತಿಷ್ಠಾಪಿಸಿದರು. ಶುಕ್ರವಾರ ಬೆಳಗ್ಗೆ ಮೆರವಣಿಗೆಗೆ ಜಿಲ್ಲಾಡಳಿತ ಅವಕಾಶ ನೀಡಿದ್ದರಿಂದ ಕಾರ್ಯಕ್ರಮ ಸರಾಗವಾಗಿ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next