ರಾಮನಗರ: ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಕುಟುಂಬ ಸದಸ್ಯರು ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಆರೋಪವಿದ್ದು, ಅವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಆಗ್ರಹಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಬಿಎಸ್‌ವೈ ಅವರಕುಟುಂಬ ಸದಸ್ಯರ ಬಗ್ಗೆಕೇಳಿ ಬಂದಿರುವ ಆರೋಪಗಳಿಗೆ ನ್ಯಾಯಾಂಗ ತನಿಖೆಗೆ ಕಾಂಗ್ರೆಸ್ ಆಗ್ರಹಿಸಿದೆ. ಆದರೆ ಅವರು ವಿರೋಧ ಪಕ್ಷ ನಾಯಕರ ಒತ್ತಾಯವನ್ನು ವೈಯಕ್ತಿಕ ದ್ವೇಷಕ್ಕೆ ತಿರುಗಿಸಿ ಪ್ರಜಾಪ್ರ ಭುತ್ವದ ಕಗ್ಗೊಲೆಗೆ ಮುಂದಾಗಿದ್ದಾರೆ. ಬಿಜೆಪಿ ಪಕ್ಷ ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿ ಬಿಎಸ್‌ವೈ ಅವರಿಂದ ರಾಜೀನಾಮೆ ಪಡೆಯಬೇಕುಎಂದು ಹರಿ ಹಾಯ್ದರು.
ಕ್ರಾಂತಿಕಾರಕ ನಿರ್ಧಾರ!: ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಮತ್ತು ಕಾರ್ಮಿಕ ಕಾಯ್ದೆಗಳಿಗೆ ತಂದಿರುವ ತಿದ್ದುಪಡಿಗೆ ನಮ್ಮ ಪಕ್ಷ ಎಂದಿಗೂ ಬೆಂಬಲಿಸು ವುದಿಲ್ಲ. ವಿಧಾನ ಪರಿಷತ್‌ನಲ್ಲಿ ಕಾರ್ಮಿಕ ಕಾಯ್ದೆ ತಿದ್ದುಪಡಿ ವಿಧೇಯಕವನ್ನು ವಿಫಲಗೊಳಿಸಿದ್ದೇವೆ. ಇದು ವಿಧಾನ ಪರಿಷತ್ ಇತಿಹಾಸದಲ್ಲೇ ಪ್ರಥಮ. ಸರ್ಕಾರ ಮಂಡಿಸಿದ ವಿಧೇಯವೊಂದು ಮೇಲ್ಮ ನೆಯಲ್ಲಿ ಸದಸ್ಯರ ಅನುಮೋದನೆ ಸಿಗದೆ ಬಿದ್ದು ಹೋಗಿದ್ದು ಇದೇ ಪ್ರಥಮ. ಇನ್ನುಳಿದ 2 ತಿದ್ದುಪಡಿಗಳಿಗೂ ವಿಧಾನ ಪರಿಷತ್‌ನಲ್ಲಿ ಅನುಮೋದನೆ ಸಿಕ್ಕಿಲ್ಲ ಎಂದರು.
ಭೂ ಸುಧಾರಣಾ ಕಾಯ್ದೆಗೆ ತಂದಿರುವ ತಿದ್ದುಪಡಿಯಿಂದ ಆರ್ಥಿಕವಾಗಿ ಬಲಾಡ್ಯರು ಭೂ ಖರೀದಿ ಮಾಡುತ್ತಾರೆ. ಭೂಮಿ ಮಾರಿದ ರೈತ ಆ ಬಲಾಡ್ಯನ ಬಳಿ ಕೆಲಸಕ್ಕೆ ಸೇರುವ ಪರಿಸ್ಥಿತಿ ಬರುತ್ತದೆ. ಉಳುವವನೆ ಭೂ ಒಡೆಯ ಎಂದು ದೇವರಾಜ ಅರಸರ ನೀತಿಗೆ ಈ ಸರ್ಕಾರ ತಿಲಾಂಜಲಿ ಇಟ್ಟಿದೆ ಎಂದರು.
ಇಸ್ರೇಲ್‌ಮಾದರಿ ಎಲ್ಲಿ?: ಟೀಕಾ ಪ್ರಹಾರವನ್ನು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ತಿರು ಗಿಸಿದ ಸಿ.ಎಂ.ಲಿಂಗಪ್ಪ, ರಾಜ್ಯದಲ್ಲಿ ಇಸ್ರೇಲ್‌ಎಲ್ಲಿ (ಇಸ್ರೆಲ್ ಮಾದರಿ ಕೃಷಿ) ಎಂದು ಪ್ರಶ್ನಿಸಿದರು. ಚುನಾ ವಣೆಗೆ ಮುನ್ನ ರಾಜ್ಯಾದ್ಯಂತ ಸುತ್ತಾಡಿ ಇಸ್ರೇಲ್ ಮಾದರಿ ಕೃಷಿ ಬಗ್ಗೆ ರೈತರಿಗೆ ಆಶ್ವಾಸನೆ ನೀಡಿದ ಕುಮಾರಸ್ವಾಮಿ ಅವರು ಆರಂಭಿಸಲಿಲ್ಲ. ರಾಜ್ಯದಲ್ಲಿ ಕನಿಷ್ಠ ಒಂದೇ ಒಂದು ಎಕರೆಯಲ್ಲಿ ಆ ಮಾದರಿಯನ್ನು ಪರಿಚಯಿಸಿದ್ದರೆ, ಎಚ್.ಡಿ.ಕುಮಾರಸ್ವಾಮಿ ಅವರ ಪವಿತ್ರಪಾದಗಳಿಗೆ ಸಾಷ್ಟಾಂಗ ನಮಸ್ಕಾರ ಹಾಕುವೆ ಎಂದು ಲೇವಡಿ ಮಾಡಿದರು.
ಜಿಪಂ ಮಾಜಿ ಅಧ್ಯಕ್ಷ ಇಕ್ಬಾಲ್ ಹುಸೇನ್ ಮತ್ತು ಕೆಪಿಸಿಸಿ ಕಾರ್ಯದರ್ಶಿ ಸೈಯದ್ ಜಿಯಾವುಲ್ಲಾ ಮಾತನಾಡಿದರು. ಈ ವೇಳೆ ವಿಧಾನ ಪರಿಷತ್ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ನರಸಿಂಹ ಮೂರ್ತಿ, ತಾಪಂ ಅಧ್ಯಕ್ಷ ಭದ್ರಯ್ಯ, ಮುಖಂಡರಾದ ಪಾರ್ವತಮ್ಮ, ಜಯಮ್ಮ, ವಿ.ಎಚ್.ರಾಜು, ಎ.ಬಿ.ಚೇತನ್ ಕುಮಾರ್, ಸಿ.ಎನ್. ಆರ್.ವೆಂಕಟೇಶ್, ನರಸಿಂಹಯ್ಯ (ಕೆಪಿಸಿಸಿ ಸದಸ್ಯ), ಜಿ.ಮಹೇಂದ್ರ, ದೇವರಾಜ್ ಮುಂತಾದವರು ಹಾಜರಿದ್ದರು.