Advertisement

ಬಜರಂಗದಳ ನಿಷೇಧ ಪ್ರಸ್ತಾವ ಸಮರ್ಥಿಸಿಕೊಂಡ ಕಾಂಗ್ರೆಸ್‌: ಹಿಂದೆ ಸರಿಯದಿರಲು ಕೈ ಅಚಲ ನಿರ್ಧಾರ

12:37 AM May 04, 2023 | Team Udayavani |

ಬೆಂಗಳೂರು: ರಾಜ್ಯಾದ್ಯಂತ ಕೇಸರಿ ಪಡೆಗಳ ತೀವ್ರ ವಾಗ್ಧಾಳಿ ನಡುವೆಯೂ ತನ್ನ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿರುವ ಕಾಂಗ್ರೆಸ್‌, “ಸಂವಿಧಾನ ವಿಧಿಗಳನ್ನು ಉಲ್ಲಂ ಸುವ ಬಜರಂಗದಳ ಸೇರಿದಂತೆ ಯಾವುದೇ ಸಂಘಟನೆ ಅಥವಾ ವ್ಯಕ್ತಿಯ ನಿಷೇಧ ಹಾಗೂ ಅಂಥವರ ವಿರುದ್ಧ ಬಲವಾದ ಕಾನೂನು ಕ್ರಮಕ್ಕೆ ಈಗಲೂ ಪಕ್ಷ ಬದ್ಧ” ಎಂದು ತನ್ನ ದೃಢ ನಿಲುವು ಪ್ರಕಟಿಸಿದೆ.

Advertisement

ಪ್ರಣಾಳಿಕೆ ಬಿಡುಗಡೆ ಬೆನ್ನಲ್ಲೇ ವ್ಯಾಪಕ ಆಕ್ರೋಶ ವ್ಯಕ್ತವಾದ ಅನಂತರ ಹಿಂಪಡೆಯುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬಂದಿತ್ತು. ಬುಧವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತಿತರ ನಾಯಕರ ಸಭೆ ನಡೆಸ ಲಾಯಿತು. ಅಲ್ಲಿ “ನಿರ್ಧಾರ ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಈ ವಿಚಾರದಲ್ಲಿ ನಿಲುವು ಅಚಲ’ ಎಂದು ಸಮರ್ಥಿಸಿಕೊಳ್ಳಲಾಯಿತು.

ಪ್ರತ್ಯೇಕ ಪ್ರತಿಪಾದನೆಗೆ ಸೂಚನೆ

ಈ ನಿರ್ಣಯದೊಂದಿಗೆ ಕಾಂಗ್ರೆಸ್‌ ರಾಜಕೀಯವಾಗಿಯೇ ಇದನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಬಜರಂಗ ದಳಕ್ಕೂ ಹನುಮಂತನಿಗೂ ಬಿಜೆಪಿ ತಳುಕುಹಾಕುತ್ತಿದೆ. ಇವೆರಡಕ್ಕೂ ಸಂಬಂಧ ಇಲ್ಲ. ಹನುಮಂತ ಎಲ್ಲರಿಗೂ ದೇವರು. ತಮ್ಮ ಬ್ರ್ಯಾಂಡ್‌ ಮಾಡಿಕೊಂಡು ಸಮಾಜಕ್ಕೆ ಮಾರಕವಾಗುವಂತಹ ಸಂಘಟನೆಗಳೊಂದಿಗೆ ತಳುಕು ಹಾಕುವುದು, ಆ ಮೂಲಕ ಜನರ ಭಾವನೆಗಳನ್ನು ಕೆರಳಿಸುವ ವಿಚಾರಗಳಿಗೆ ಅಷ್ಟೇ ತೀವ್ರವಾಗಿ ತಿರುಗೇಟು ನೀಡಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.

ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್‌, “ನಾವೂ ಹನುಮಂತನ ಭಕ್ತರು. ನಿತ್ಯ ಹನುಮಾನ್‌ ಚಾಲೀಸ ಪಠಣ ಮಾಡುತ್ತೇವೆ. ಬಜರಂಗದಳಕ್ಕೂ ಹನುಮಂತನಿಗೂ ಏನು ಸಂಬಂಧ? ಬಜರಂಗದಳ ಒಂದು ಸಂಘಟನೆ. ಆಂಜನೇಯನ ಹೆಸರಿನ್ನಿಟ್ಟ ಮಾತ್ರಕ್ಕೆ ಅವರು ಹನುಮಂತನೇ?’ ಎಂದು ಪ್ರಶ್ನಿಸಿದರು.

Advertisement

“ಪ್ರಣಾಳಿಕೆ ಅಂಶವನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಿರುವುದರಿಂದ ಈ ಅವಾಂತರ ಆಗುತ್ತಿದೆ. ಅದೇನೇ ಇರಲಿ, ಪ್ರಧಾನಿ ಮೋದಿ ಅವರು ಅನಗತ್ಯ ಟೀಕೆ ಮಾಡುವುದನ್ನು ಬಿಟ್ಟು, ರಾಜ್ಯಕ್ಕೆ ಡಬಲ್‌ ಎಂಜಿನ್‌ ಸರಕಾರದ ಕೊಡುಗೆಗಳೇನು ಎಂಬುದನ್ನು ಸ್ಪಷ್ಟಪಡಿಸಲಿ’ ಎಂದು ತಿರುಗೇಟು ನೀಡಿದರು.

ಬಿಜೆಪಿ ಮತ್ತು ಅದರ ನಾಯಕರಿಗೆ ಹನುಮಾನ್‌ ಚಾಲೀಸ ಓದಲಿಕ್ಕೂ ಬರುವುದಿಲ್ಲ. ಅವರಿಗೆ 40 ಪರ್ಸೆಂಟ್‌ ಕಮಿಷನ್‌ ತೆಗೆದುಕೊಳ್ಳುವುದು ಮಾತ್ರ ಗೊತ್ತು. ಬಜರಂಗದಳವನ್ನು ಹನುಮಂತನಿಗೆ ಹೋಲಿಕೆ ಮಾಡುವುದೇ ಹನುಮಂತನಿಗೆ ಮಾಡುವ ದೊಡ್ಡ  ಅವಮಾನ.

– ರಣದೀಪ್‌ ಸಿಂಗ್‌ ಸುರ್ಜೇವಾಲ, ಕಾಂಗ್ರೆಸ್‌ ರಾಜ್ಯ ಉಸ್ತುವಾರಿ

Advertisement

Udayavani is now on Telegram. Click here to join our channel and stay updated with the latest news.

Next