Advertisement

Congress: ಶಾಸಕ ರವಿ ಗಣಿಗ ವಿರುದ್ಧ ಮಾನನಷ್ಟ ಮೊಕದ್ದಮೆ: ಬಿ.ವೈ.ರಾಘವೇಂದ್ರ

12:32 AM Aug 28, 2024 | Esha Prasanna |

ಶಿವಮೊಗ್ಗ: ಕಾಂಗ್ರೆಸ್‌ ಶಾಸಕರಿಗೆ 100 ಕೋಟಿ ರೂ. ಆಮಿಷ ಒಡ್ಡಲಾಗಿದೆ ಎಂಬ ಶಾಸಕ ರವಿ ಗಣಿಗ ಅವರ ಆರೋಪವನ್ನು ಬಿಜೆಪಿ ವರಿಷ್ಠರು ಗಂಭೀರವಾಗಿ ಪರಿಗಣಿಸಿದ್ದು, ಅವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿ, ನಿಮ್ಮ ಸರಕಾರಕ್ಕೆ ಬೆಂಬಲದ ಕೊರತೆಯಿದೆ ಎಂದು ನಾವು ಹೇಳಿಲ್ಲ, ರಾಜ್ಯಪಾಲರ ಮುಂದೆ ಪರೇಡ್‌ ಮಾಡುವ ಆವಶ್ಯಕತೆಯೂ ಇಲ್ಲ. ಮುಡಾ ಅಧಿ ವೇಶನ ಹಂಚಿಕೆಯಲ್ಲಿ ಅಕ್ರಮವಾಗಿದೆ ಎಂಬ ನಿಮ್ಮ ಮೇಲಿನ ಆರೋಪದ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೇಳಿದ್ದೇವೆ. ರಾಜೀನಾಮೆ ನೀಡಿ ತನಿಖೆ ಎದುರಿಸಲಿ.

ನಿರಪರಾಧಿ  ಎಂದಾದಲ್ಲಿ ಮತ್ತೆ ಅ ಧಿಕಾರಕ್ಕೆ ಬರಲಿ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಐಷಾರಾಮಿ ಸೌಲಭ್ಯಗಳನ್ನು ಕೈದಿಗಳಿಗೆ ನೀಡುತ್ತಿರುವುದು ರಾಜ್ಯ ಸರಕಾರದ ಕಾರ್ಯವೈಖರಿಗೆ ಹಿಡಿದ ಕನ್ನಡಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next