Advertisement

Assembly; ಸರಕಾರದ ವಿರುದ್ಧ ಮುಗಿಬಿದ್ದ ಬಿಜೆಪಿ; ತೀವ್ರ ವಾಕ್ಸಮರ

05:00 PM Jul 05, 2023 | Team Udayavani |

ವಿಧಾನಸಭೆ: ಬಿಜೆಪಿ ಶಾಸಕರು ಬುಧವಾರದ ಕಾಲಾಪದಲ್ಲಿ ಕಾಂಗ್ರೆಸ್ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಜನರನ್ನು ದಾರಿತಪ್ಪಿಸುವ ಚುನಾವಣ ಭರವಸೆಗಳಿಂದ ವಂಚನೆ ಮಾಡಲಾಗಿದೆ ಎಂದು ಆರೋಪಿಸಿದೆ. ಜನರು ಇನ್ನು ಮುಂದೆ  ಗ್ಯಾರಂಟಿಗಳ ಮೇಲೆ ಅವಲಂಬಿತರಾಗದ ಕಾರಣ ಸಿದ್ದರಾಮಯ್ಯ ಸರಕಾರವು ತನ್ನ ಜನಪ್ರಿಯತೆಯನ್ನು ವೇಗವಾಗಿ ಕಳೆದುಕೊಳ್ಳುತ್ತದೆ ಎಂದು ಹೇಳಿದೆ.

Advertisement

ಮಾಜಿ ಡಿಸಿಎಂ ಆರ್ ಅಶೋಕ್ ಮಾತನಾಡಿ, ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದ ಐದು ‘ಗ್ಯಾರಂಟಿ’ಗಳಿಗೆ ಹಲವಾರು ಷರತ್ತುಗಳನ್ನು ಹಾಕಲಾಗಿದೆ ಮತ್ತು ಫಲಾನುಭವಿಗಳ ಸಂಖ್ಯೆಯನ್ನು ಸೀಮಿತಗೊಳಿಸಲಾಗಿದೆ.ಷರತ್ತುಗಳು ಜನರಲ್ಲಿ ಗೊಂದಲ ಮೂಡಿಸುತ್ತಿವೆ ಎಂದು ಆರೋಪಿಸಿದರು.

ಸರಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ನೀಡುವ ‘ಶಕ್ತಿ’ ಯೋಜನೆಯನ್ನು ಉಲ್ಲೇಖಿಸಿ, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಯಾವುದೇ ಷರತ್ತುಗಳನ್ನು ಉಲ್ಲೇಖಿಸಿಲ್ಲ ಆದರೆ ಅಧಿಕಾರಕ್ಕೆ ಬಂದ ನಂತರ ಐಷಾರಾಮಿ ಅಲ್ಲದ ಬಸ್‌ಗಳಲ್ಲಿ ಮಾತ್ರ ಈ ಯೋಜನೆ ಲಭ್ಯವಿದೆ ಎಂದು ಹೇಳಿದೆ. ಸೀಮಿತ ಸಂಖ್ಯೆಯ ಬಸ್‌ಗಳನ್ನು ಮಾತ್ರ ಓಡಿಸಲಾಗುತ್ತಿದೆ. ಇದರಿಂದಾಗಿ ವಿಪರೀತ ರಷ್‌ನಿಂದ ಬಸ್‌ಗಳ ಬಾಗಿಲು ಮತ್ತು ಕಿಟಕಿಗಳಿಗೆ ಹಾನಿಯಾದಂತಹ ಹಲವು ಘಟನೆಗಳು ಸಂಭವಿಸಿವೆ ಎಂದು ಕಿಡಿ ಕಾರಿದರು.

ಜನಸಂದಣಿಯಿಂದ ತುಂಬಿರುವ ಸರಕಾರಿ ಬಸ್ಸುಗಳು ಜನರಿಗೆ ಸರಕಾರದ ಮೇಲೆ ವಿಶ್ವಾಸವಿಲ್ಲ ಎಂಬುದನ್ನು ತೋರಿಸುತ್ತದೆ. ಈ ಯೋಜನೆಯನ್ನು ಶೀಘ್ರದಲ್ಲೇ ಹಿಂಪಡೆಯಲಾಗುತ್ತದೆ ಎಂಬುದು ಮಹಿಳೆಯರಿಗೆ ಗೊತ್ತಿರುವುದರಿಂದ ಅವರು ಉಚಿತವಾಗಿ ಪ್ರಯಾಣಿಸಲು ಧಾವಿಸುತ್ತಿದ್ದಾರೆ ”ಎಂದು ಹೇಳಿದರು.

200 ಯೂನಿಟ್ ಉಚಿತ ವಿದ್ಯುತ್ ನೀಡುವ ‘ಗೃಹ ಜ್ಯೋತಿ’ ಯೋಜನೆಗೆ ಸಂಬಂಧಿಸಿ, ಸರಾಸರಿ ವಿದ್ಯುತ್ ಬಳಕೆಯನ್ನು ಪರಿಗಣನೆಗೆ ತೆಗೆದುಕೊಳ್ಳುವುದಾಗಿ ಪಕ್ಷವು ಪ್ರಣಾಳಿಕೆಯಲ್ಲಿಯೇ ಹೇಳಬೇಕಿತ್ತು ಎಂದರು. ಕುಟುಂಬದ ಯಜಮಾನಿಗೆ 2,000 ರೂ.ಗಳನ್ನು ನೀಡುತ್ತಿರುವ ‘ಗೃಹ ಲಕ್ಷ್ಮೀ’ ಯೋಜನೆಯು ಅತ್ತೆ- ಸೊಸೆಯರನ್ನು ಪರಸ್ಪರ ಎತ್ತಿಕಟ್ಟಲಾಗಿದೆ ಎಂದರು.

Advertisement

ಸಿದ್ದರಾಮಯ್ಯ ತಿರುಗೇಟು
ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ”ವಿರೋಧ ಪಕ್ಷದ ನಾಯಕನನ್ನು ನೇಮಿಸುವಲ್ಲಿ ವಿಫಲವಾಗಿರುವ ಬಿಜೆಪಿಯು ಭರವಸೆಗಳ ವೈಫಲ್ಯದ ಬಗ್ಗೆ ಮಾತನಾಡುತ್ತಿದೆ. ಅಶೋಕ್ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ವಿರೋಧಿಸುತ್ತಿದ್ದಾರೆಂದು ತೋರುತ್ತದೆ. ನೀವು ಎದ್ದು ನಿಂತು ಗಲಾಟೆ ಮಾಡಿದರೂ ನಾವು ಹೆದರುವುದಿಲ್ಲ” ಎಂದರು.

ಪ್ರತಿಭಟನೆ

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದ ಐದು ‘ಗ್ಯಾರಂಟಿ’ಗಳನ್ನು ಅನುಷ್ಠಾನಗೊಳಿಸದ ಆರೋಪದಲ್ಲಿ ಬಿಜೆಪಿ ವಿಧಾನಸಭೆಯೊಳಗೆ ನಡೆಸುತ್ತಿದ್ದ ಪ್ರತಿಭಟನೆಯನ್ನು ಸ್ಪೀಕರ್ ಯು.ಟಿ. ಖಾದರ್ ಅವರು ಶೂನ್ಯ ವೇಳೆಯ ನಂತರ ಸಮಸ್ಯೆಯನ್ನು ಪ್ರಸ್ತಾಪಿಸಲು ಸಮಯ ನೀಡಿದ ನಂತರ ಹಿಂತೆಗೆದುಕೊಂಡಿದೆ.

ಅನುಷ್ಠಾನದ” ಕುರಿತು ಚರ್ಚೆಗೆ ಕೋರಿ ಮುಂದೂಡಿಕೆ ನಿರ್ಣಯವನ್ನು ಮಂಡಿಸಲು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸ್ಪೀಕರ್ ಅವಕಾಶ ನೀಡದ ಹಿನ್ನೆಲೆಯಲ್ಲಿ ಮಂಗಳವಾರ ಕಲಾಪಕ್ಕೆ ಅಡ್ಡಿ ಉಂಟಾಗಿ ಕೋಲಾಹಲಕ್ಕೆ ಕಾರಣವಾಗಿತ್ತು. ಈ ವಿಷಯದ ಬಗ್ಗೆ ಚರ್ಚೆ ನಡೆಸಬೇಕು ಎಂಬ ತಮ್ಮ ಬೇಡಿಕೆಗೆ ಬಿಜೆಪಿ ಸದಸ್ಯರು ಪಟ್ಟು ಹಿಡಿದರು.

Advertisement

Udayavani is now on Telegram. Click here to join our channel and stay updated with the latest news.

Next