ಬೆಂಗಳೂರು: ಈಶ್ವರಪ್ಪ ಡಿಸ್ಮಿಸ್ ಮಾಡಲು ಒಂದು ದಿನ ಅವಕಾಶ ಕೊಟ್ಟಿದ್ದೆವು, ನಾವು ಅಹೋರಾತ್ರಿ ಧರಣಿ ಮುಂದುವರೆಸಿದ್ದೇವೆ ಎಂದು ಗುರುವಾರ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಪೀಕರ್, ಈಶ್ವರಪ್ಪ ಅವರನ್ನು ಡಿಸ್ಮಿಸ್ ಮಾಡಿಲ್ಲ. ಅವರು ಸಂವಿಧಾನ ರಕ್ಷಕರು. ಸಿಎಂ ಕೂಡ ಮಾಡಿಲ್ಲ. ಇದರ ಅರ್ಧ RSS ಹಿಡನ್ ಅಜೆಂಡಾವನ್ನು, ಈಶ್ವರಪ್ಪ ಮೂಲಕ ಹೇಳಿಸಿದ್ದಾರೆ ಎಂದರು.
ರಾಷ್ಟ್ರದ ಹೆಮ್ಮೆ, ಸ್ವಾತಂತ್ರ್ಯ ಪ್ರತೀಕ, ತ್ರಿವರ್ಣ ಧ್ವಜ ಹಿಡಿದಾಗ ಉತ್ಸಾಹ ಧೈರ್ಯ ಬರುತ್ತಿತ್ತು. ಯಾರೇ ದ್ರೋಹ ಮಾಡಿದರೂ ಆರ್ಟಿಕಲ್ 2 ಸ್ಪಷ್ಟವಾಗಿ ಹೇಳಿದೆ ಶಿಕ್ಷೆ ಎಂದು. ಇಂದು ಅವರ ಮೇಲೆ ಕೇಸ್ ಹಾಕಿಲ್ಲ. ನಡ್ಡಾ ಅವರು ನಮ್ಮ ತ್ರಿವರ್ಣ ಧ್ವಜ ಬದಲು, ಬಿಜೆಪಿ ಧ್ವಜ ಹಾರಿಸಿದ್ದರು. ನಾವು ಮೊದಲಿನಿಂದಲೂ ರಾಷ್ಟ್ರ ಪ್ರೇಮಿಗಳು ಎಂದರು.
ಇದನ್ನೂ ಓದಿ:ನ್ಯಾಯ ಕೊಡಿ, ನ್ಯಾಯ ಕೊಡಿ ಸ್ಪೀಕರ್ ಅವರೇ ನ್ಯಾಯ ಕೊಡಿ: ಚಪ್ಪಾಳೆ ಪ್ರತಿಭಟನೆ
ಸಂವಿಧಾನದ ಮೇಲೆ ಅವರಿಗೆ ಗೌರವ ಇಲ್ಲ. ಈಶ್ವರಪ್ಪ ಮಾಡಿರುವುದು ಅಕ್ಷಮ್ಯ ಅಪರಾಧ. ನಮ್ಮ ದೇಶದ ಪ್ರಧಾನಿ, ರಾಷ್ಟ್ರಪತಿ ಹೋದಾಗ ಹಾರಿಸ್ತಾರೆ. ಗಣ್ಯ ವ್ಯಕ್ತಿ ಸತ್ತಾಗ ಕೂಡ ಗೌರವಾರ್ಥವಾಗಿ ಹೊದಿಸ್ತಾರೆ. ಈಶ್ವರಪ್ಪ ಸಮರ್ಥನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾವು ಅಹೋರಾತ್ರಿ ಧರಣಿ ತೀರ್ಮಾನ ಮಾಡಿದ್ದೇವೆ, ಅವರು ಸದನ ಮೊಟಕು ಮಾಡಿದರೂ, ಹಗಲು ರಾತ್ರಿ ಧರಣಿ ಮಾಡುತ್ತೇವೆ. ತಾರ್ಕಿಕ ಅಂತ್ಯದವರೆಗೂ ಧರಣಿ ಮುಂದುವರೆಸುತ್ತೇವೆ ಎಂದು ಆಕ್ರೋಶ ಹೊರಹಾಕಿದರು.