ಧಂಡುಕಾ (ಗುಜರಾತ್)/ಮುಂಬಯಿ: ಗುಜರಾತ್ ವಿಧಾನಸಭೆ ಚುನಾವಣೆಯ ಮೊದಲ ಹಂತಕ್ಕೆ ಎರಡು ದಿನಗಳು ಬಾಕಿ ಇರುವಾಗಲೇ ಪ್ರಚಾರದ ಅಬ್ಬರ ಬಿರು ಸಾಗಿದೆ. ಅಯೋಧ್ಯೆಯ ರಾಮ ಮಂದಿರ ವಿಚಾರಣೆ ಮತ್ತು ಚುನಾವಣೆಗೆ ಸಂಬಂಧ ಏಕೆ ಕಲ್ಪಿಸುತ್ತೀರಿ ಎಂದು ಕೇಳುವ ಮೂಲಕ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜತೆಗೆ ಸಿಬಲ್ ಸುಪ್ರೀಂ ಕೋರ್ಟಲ್ಲಿ ಮಾಡಿದ ಮನವಿಯಿಂದ ದೂರ ಸರಿದ ಸುನ್ನಿ ವಕ್ಫ್ ಬೋರ್ಡ್‌ನ ನಿಲುವನ್ನು ಮೋದಿ ಶ್ಲಾ ಸಿದ್ದಾರೆ.
ಆದರೆ, ಇದಕ್ಕೆ ಪ್ರತಿಕ್ರಿಯಿಸಿರುವ ಸಿಬಲ್, “ನಾನು ಸುಪ್ರೀಂ ಕೋರ್ಟ್‌ನಲ್ಲಿ ಸುನ್ನಿ ವಕ್ಫ್ ಬೋರ್ಡ್ ಅನ್ನು ಪ್ರತಿನಿಧಿಸಿಯೇ ಇಲ್ಲ. ಪ್ರಧಾನಿ ಮತ್ತು ಅಮಿತ್ ಶಾ ಅವರು ತಮ್ಮ ಮಾಹಿತಿ ಮೂಲವನ್ನು ಅರಿತುಕೊಂಡರೆ ಒಳ್ಳೆಯದು’ ಎಂದಿದ್ದಾರೆ.
ಗುಜರಾತ್ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಡಿ. 9ಕ್ಕೆ ನಡೆಯಲಿರುವಂತೆಯೇ ಧಂಡುಕಾದಲ್ಲಿ ಬುಧವಾರ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಮೋದಿ, ಸುಪ್ರೀಂಕೋರ್ಟ್ ನಲ್ಲಿ 2019ರ ಚುನಾವಣೆ ಬಳಿಕ ರಾಮ ಮಂದಿರ ವಿಚಾರಣೆ ಆರಂಭಿಸುವಂತೆ ಕಾಂಗ್ರೆಸ್ ನಾಯಕ, ಮುಸ್ಲಿಂ ಸಂಘಟನೆಗಳ ಪರ ವಕೀಲ ಕಪಿಲ್ ಸಿಬಲ್ ಮಾಡಿದ ಮನವಿಯನ್ನು ಟೀಕಿಸಿದ್ದಾರೆ. ಸಿಬಲ್ ಮುಸ್ಲಿಮರ ಪರ ವಾದ ಮಾಡುವುದಕ್ಕೆ ಆಕ್ಷೇಪವಿಲ್ಲ. ಆದರೆ ಪ್ರಕರಣದ ವಿಚಾರಣೆ ಮತ್ತು ಚುನಾವಣೆಗಳಿಗೆ ಸಂಬಂಧ ಏಕೆ ಕಲ್ಪಿಸುತ್ತೀರಿ ಎಂದು ಪ್ರಶ್ನಿಸಿದ್ದಾರೆ.
“ಸುಪ್ರೀಂ ಕೋರ್ಟಲ್ಲಿ ಮಂಗಳವಾರ ಸಿಬಲ್, ಬಾಬರಿ ಮಸೀದಿ ಧ್ವಂಸ ಪ್ರಕ ರಣದ ವಿರುದ್ಧ ವಾದಿಸುತ್ತಿದ್ದರು. ವಾದಿಸು ವುದಕ್ಕೆ ನನ್ನ ಅಭ್ಯಂತರವಿಲ್ಲ. ಆದರೆ, ವಿಚಾರಣೆಯನ್ನು 2019ರ ಅನಂತರ ನಡೆಸಿ ಎಂದು ಪ್ರತಿಪಾದಿಸಿದ್ದು ಸರಿಯಲ್ಲ. ಈಗ ಕಾಂಗ್ರೆಸ್ ರಾಮ ಮಂದಿರ ಮತ್ತು ಚುನಾವಣೆ ಜತೆಗೆ ಸಂಬಂಧ ಕಲ್ಪಿಸುತ್ತಿದೆ. ಅವರಿಗೆ ದೇಶದ ಬಗ್ಗೆ ಚಿಂತೆ ಇಲ್ಲ’ ಎಂದಿ ದ್ದಾರೆ ಪ್ರಧಾನಿ. ಚುನಾವಣೆಗಾಗಿ ಮಂದಿರ ಪ್ರಕರಣದ ವಿಚಾರಣೆಯನ್ನೇ ನಿಲ್ಲಿಸಲು ಬಯಸುತ್ತೀರಾ ಎಂದು ಕಾಂಗ್ರೆಸ್ ನಾಯಕ ರನ್ನು ನೇರವಾಗಿ ಪ್ರಶ್ನಿಸಿದ್ದಾರೆ. ಪ್ರಕರಣದಿಂದ ಲಾಭ ಪಡೆಯಲೋಸುಗವೇ ಕಾಂಗ್ರೆಸ್ ವಿಚಾರಣೆ ಮುಂದೂಡಲು ಯತ್ನಿಸುತ್ತಿದೆ ಎನ್ನುವುದನ್ನು ನಾವು ತಿಳಿದುಕೊಳ್ಳಬೇಕಾಗಿದೆ ಎಂದು ಲೇವಡಿ ಮಾಡಿದ್ದಾರೆ ಮೋದಿ.
ಸಿಬಲ್ ವಿರುದ್ಧ ವಾಗ್ಧಾಳಿ ಮುಂದು ವರಿಸಿದ ಪ್ರಧಾನಿ ಲಕ್ನೋದ ಅಖೀಲ ಭಾರತ ಸುನ್ನಿ ವಕ್ಫ್ ಮಂಡಳಿ ಸಿಬಲ್ ನಿಲುವಿನಿಂದ ದೂರ ಸರಿದ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ನಿಗದಿತ ಕಾಲಮಿತಿಯಲ್ಲಿ ವಿವಾದ ಪರಿಹಾರವನ್ನು ಎಲ್ಲರೂ ಬಯಸಿದ್ದಾರೆ. ಅದನ್ನೇ ಮಂಡಳಿ ಪುಷ್ಟೀಕರಿಸಿದೆ ಎಂದಿದ್ದಾರೆ. ಇದೇ ವೇಳೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಬೇಕು ಎಂದೂ ಪ್ರತಿಪಾದಿಸಿದ್ದಾರೆ.
ಶಿಶು ಮರಣ, ಅಪೌಷ್ಟಿಕತೆ ಹೆಚ್ಚೇಕೆ?: ಈ ನಡುವೆ ಸರಣಿ ಟ್ವೀಟ್ ಮಾಡಿ ಪ್ರಧಾನಿಯವರನ್ನು ಪ್ರಶ್ನಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಗುಜರಾತ್‌ನಲ್ಲಿ ಶಿಶು ಮರಣ ಪ್ರಮಾಣ ಹೆಚ್ಚೇಕೆ? ಅಪೌಷ್ಟಿಕತೆಯ ಪ್ರಮಾಣ ಏಕೆ ಏರುತ್ತಿದೆ ಎಂದು ಕೇಳಿದ್ದಾರೆ. ಏಳು ದಿನಗಳಿಂದ ಪ್ರತಿ ದಿನ ಒಂದೊಂದು ವಿಚಾರವನ್ನೆತ್ತಿ ಪ್ರಶ್ನಿಸುತ್ತಿರುವ ರಾಹುಲ್ ಬುಧವಾರ ಅಪೌಷ್ಟಿಕತೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಗುಜರಾತ್‌ನ ಶೇ.39 ಮಂದಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ವೈದ್ಯರ ಕೊರತೆ ನಡುವೆ ವೈದ್ಯಕೀಯ ವೆಚ್ಚ ಕೂಡ ಏರುತ್ತಿದೆ. ಭುಜ್‌ನಲ್ಲಿರುವ ಸರ್ಕಾರಿ ಆಸ್ಪತ್ರೆಯನ್ನು “ಸ್ನೇಹಿತ’ರೊಬ್ಬರಿಗೆ 99 ವರ್ಷ ಕಾಲ ಗುತ್ತಿಗೆ ನೀಡಲಾಗಿದೆ. 22 ವರ್ಷಗಳ ಕಾಲದ ಆಡಳಿತದ ಬಗ್ಗೆ ಬಿಜೆಪಿಯಿಂದ ಗುಜರಾತ್ ಜನತೆ ಉತ್ತರ ಬಯಸಿದ್ದಾರೆ ಎಂದು ಹೇಳಿದ್ದಾರೆ ರಾಹುಲ್.
ಮೋದಿಯಂತಲ್ಲ; ನಾನೊಬ್ಬ ಮನುಷ್ಯ: “ನಾನು ನರೇಂದ್ರ ಭಾಯಿಯಂತೆ ಅಲ್ಲ. ಮನುಷ್ಯ ನಾಗಿರುವ ನನ್ನಿಂದ ಕೆಲವೊಂದು ತಪ್ಪುಗಳೂ ಆಗುತ್ತವೆ. ಇದರಿಂದಾ ಗಿಯೇ ಜೀವನ ಹೆಚ್ಚು ಆಸಕ್ತಿದಾಯಕವಾಗಿ ರುತ್ತದೆ. ಬಿಜೆಪಿ ನಾಯಕರು ನನ್ನ ತಪ್ಪನ್ನು ಎತ್ತಿತೋರಿಸಿದ್ದಕ್ಕೆ ಧನ್ಯವಾದ.’ ಹೀಗೆಂದು ರಾಹುಲ್ ಗಾಂಧಿ ಬುಧವಾರ ಟ್ವೀಟ್ ಮಾಡಿದ್ದಾರೆ. ಗುಜರಾತ್ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಟ್ವಿಟರ್‌ನಲ್ಲಿ “ಬಿಜೆಪಿಗೆ ದಿನಕ್ಕೊಂದು ಪ್ರಶ್ನೆ’ ಎಂಬ ಸರಣಿಯಲ್ಲಿ ಬೆಲೆಯೇರಿಕೆ ಬಗ್ಗೆ ರಾಹುಲ್ ಮಾಡಿದ್ದ ಸಾಂಖೀÂಕ ಮಾಹಿತಿಯ ವಿವರಣೆ ತಪ್ಪಾಗಿತ್ತು. ಅದಕ್ಕೆ ಟ್ವೀಟಿಗರಿಂದ ಮತ್ತು ಬಿಜೆಪಿ ನಾಯಕರಿಂದ ಪ್ರಬಲ ಟೀಕೆ ವ್ಯಕ್ತವಾಗಿತ್ತು. ಅದಕ್ಕಾಗಿ ರಾಹುಲ್ ಗಾಂಧಿ ಸ್ಪಷ್ಟನೆ ನೀಡಿದ್ದಾರೆ.