Advertisement

ನಕ್ಸಲರ ಜತೆ ಕೈ ಜೋಡಣೆ: ಶಾ

08:33 AM Oct 06, 2018 | Team Udayavani |

ನರಹರಿಪುರ: 2013ರ ಮುಂಚೆ ಛತ್ತೀಸ್‌ಗಢದಲ್ಲಿ ಅಧಿಕಾರದಲ್ಲಿರಲು ನಕ್ಸಲರೊಂದಿಗೆ ಕಾಂಗ್ರೆಸ್‌ ಕೈಜೋಡಿಸಿತ್ತು ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಆರೋಪಿಸಿದ್ದಾರೆ. ನಕ್ಸಲ್‌ಪೀಡಿತ ಕಂಕೇರ್‌ ಜಿಲ್ಲೆಯ ನರಹರಿಪುರದಲ್ಲಿ ಬುಡಕಟ್ಟು ಸಮುದಾಯದ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಇಲ್ಲಿ  ಮಾವೋವಾದಿಗಳನ್ನು ದಮನ ಮಾಡಲಾಯಿತು ಎಂದಿದ್ದಾರೆ.

Advertisement

ಇದೇ ವೇಳೆ, ಬಿಜೆಪಿ ಆಡಳಿತದಲ್ಲಿ ದೇಶ ಮತ್ತು ಛತ್ತೀಸ್‌ಗಢ ರಾಜ್ಯಗಳಲ್ಲಿ ನಡೆದಿರುವ ಅಭಿವೃದ್ಧಿ ಕೆಲಸಗಳ ಕುರಿತು ಬಹಿರಂಗ ಚರ್ಚೆಗೆ ಬರುವಂತೆ ಕಾಂಗ್ರೆಸ್‌ಗೆ ಅಮಿತ್‌ ಶಾ ಬಹಿರಂಗ ಸವಾಲನ್ನೂ ಎಸೆದಿದ್ದಾರೆ. ಬಿಜೆಪಿ ಸದಾ ಅಭಿವೃದ್ಧಿ ರಾಜಕಾರಣ ನಡೆಸುತ್ತದೆ. ರಮಣ್‌ ಸಿಂಗ್‌ ಸರಕಾರದ 15 ವರ್ಷಗಳ ಆಡಳಿತವನ್ನು ಕಾಂಗ್ರೆಸ್‌ನ 55 ವರ್ಷಗಳ ಆಳ್ವಿಕೆ ಜೊತೆ ಹೋಲಿಕೆ ಮಾಡಿ, ಛತ್ತೀಸ್‌ಗಡದ ಅಭಿವೃದ್ಧಿಯ ಕುರಿತು ಚರ್ಚೆ ನಡೆಯಲಿ ಎಂದೂ ಅವರು ಕಾಂಗ್ರೆಸ್‌ಗೆ ಕರೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next