Advertisement

ಸಿಎಂ ಬದಲಾಯಿಸದಿದ್ದಲ್ಲಿ ಕಾಂಗ್ರೆಸ್‌ ಸೋಲು ಖಚಿತ: ಪೂಜಾರಿ ಭವಿಷ್ಯ

11:15 AM Mar 15, 2017 | Harsha Rao |

ಮಂಗಳೂರು: ಡಾ| ಜಿ. ಪರಮೇಶ್ವರ್‌ ಅವರನ್ನು ಮುಖ್ಯಮಂತ್ರಿ ಮಾಡುವುದಕ್ಕೆ ಇನ್ನೂ ಸಮಯ ಮೀರಿಲ್ಲ. ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿದಲ್ಲಿ ರಾಜ್ಯದಲ್ಲಿ ಮುಂಬರುವ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಸೋಲುವುದು ಖಚಿತ ಎಂದು ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್‌ನ ಹಿರಿಯ ನಾಯಕ ಬಿ. ಜನಾರ್ದನ ಪೂಜಾರಿ ಭವಿಷ್ಯ ನುಡಿದಿದ್ದಾರೆ.

Advertisement

ನಗರದ ಪ್ರಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್‌ ಸೋಲಲು ಸಿಎಂ ಸಿದ್ದರಾಮಯ್ಯ ಕಾರಣರಾಗುತ್ತಾರೆ. ಇನ್ನಾದರೂ ಎಚ್ಚೆತ್ತುಕೊಂಡು ಡಾ| ಪರಮೇಶ್ವರ್‌ ಅವರನ್ನು ಸಿಎಂ ಮಾಡುವ ಅಗತ್ಯವಿದೆ ಎಂದರು.

ಮೋದಿಯಿಂದ ಪ್ರಜಾಪ್ರಭುತ್ವ ಕೊಲೆ
ಪಂಚರಾಜ್ಯ ಚುನಾವಣೆ ಫಲಿತಾಂಶದ ಬಳಿಕ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ ಪಕ್ಷಕ್ಕೆ ಸರಕಾರ ರಚನೆಗೆ ಅವಕಾಶ ಮಾಡಿಕೊಡುವುದು ನಿಯಮ. ಆದರೆ ಪ್ರಧಾನಿ ಮೋದಿ ಅವರು ಆ ನಿಯಮ ಗಾಳಿಗೆ ತೂರುವ ಮೂಲಕ ಪ್ರಜಾಪ್ರಭುತ್ವದ ಕೊಲೆ ಮಾಡುತ್ತಿದ್ದಾರೆ ಎಂದು ಎಂದು ಅವರು ಆರೋಪಿಸಿದರು.

ಈ ಕುರಿತು ಸುಪ್ರೀಂ ಕೋರ್ಟ್‌ನಲ್ಲೂ ವಾದ ನಡೆಯುತ್ತಿದೆ. ಪ್ರಜಾಪ್ರಭುತ್ವ ಉಳಿಸಿಕೊಳ್ಳುವ ಕೆಲಸವನ್ನು ಸುಪ್ರೀಂ ಕೋರ್ಟ್‌ ಮಾಡುತ್ತದೆ ಎನ್ನುವ ವಿಶ್ವಾಸವಿದೆ. ಅದಕ್ಕೆ ಬದ್ಧರಾಗಿ ಸುಪ್ರೀಂಕೋರ್ಟ್‌ ಪ್ರಜಾಪ್ರಭುತ್ವ ಉಳಿಸುವ ಕೆಲಸ ಮಾಡಬೇಕು ಎಂದರು.
ಗೋವಾ ಹಾಗೂ ಮಣಿಪುರದಲ್ಲಿ ಏಕೈಕ ಅತಿದೊಡ್ಡ ಪಕ್ಷಕ್ಕೆ ಅವಕಾಶ ಸಿಗಬಾರದು ಎಂಬ ನಿಟ್ಟಿನಲ್ಲಿ ಪ್ರಧಾನಿ ಆಪರೇಶನ್‌ ಕಮಲಕ್ಕೆ ಮುಂದಾಗಿರುವುದು ದುರಂತ ಎಂದು ಅವರು ಇದೇ ವೇಳೆ ತಿಳಿಸಿದರು.
ಬಿಜೆಪಿಯವರು ಆಕಾಶದಲ್ಲಿ ಹಾರಾಟ
ಪಂಚರಾಜ್ಯಗಳ ಚುನಾವಣೆ ಫಲಿತಾಂಶದ ಬಳಿಕ ಬಿಜೆಪಿಯವರು ಆಕಾಶದಲ್ಲಿ ಹಾರಾಡು
ತ್ತಿದ್ದಾರೆ. ಅವರಿಗೆ ಭೂಮಿ ಕಾಣಿಸುತ್ತಿಲ್ಲ. ಈವರೆಗೆ ಯಾರೂ ಪಡೆಯದ ಸ್ಥಾನ, ಮತಗಳನ್ನು ಬಿಜೆಪಿ ಪಡೆದುಕೊಂಡಿದೆ ಎನ್ನುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದ ಅವರು, 1985ರಲ್ಲಿ ರಾಜೀವ್‌ ಗಾಂಧಿ ಅವರು 411 ಸ್ಥಾನಗಳನ್ನು ಪಡೆದಿದ್ದರೂ ಸಾಧನೆ ಎಂದು ಬೀಗಲಿಲ್ಲ. ಪ್ರಸ್ತುತ ಮೋದಿ ಅವರಿಗೆ 282 ಸ್ಥಾನ ಸಿಕ್ಕಿದ್ದರೂ ಅದನ್ನೇ ಹೇಳಿಕೊಂಡು ಹೋಗುತ್ತಿದ್ದಾರೆ ಎಂದು ಆಪಾದಿಸಿದರು.
ನೋಟ್‌ ಬ್ಯಾನ್‌ ವಿಚಾರ:
ಮೋದಿಗೆ ಸೋಲು
ಶೇ. 5ರಷ್ಟು ಮಂದಿ ನಗರವಾಸಿಗಳಾದರೆ ಉಳಿದ ಶೇ. 95ರಷ್ಟು ಮಂದಿ ಹಳ್ಳಿಗಳಲ್ಲಿ ಜೀವನ ಸಾಗಿಸುತ್ತಿದ್ದಾರೆ. ಡಿಜಿಟಲೀಕರಣ ಯಾರಿಗೂ ಬೇಡವಾಗಿದೆ ಎಂದ ಪೂಜಾರಿ, ನೋಟುಗಳನ್ನು ಅಪಮೌಲಿÂàಕರಣ ಮಾಡುವ ಮೂಲಕ ದೇಶದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಕೂಡ ಕಡಿಮೆಯಾಗಿದೆ. ದೇಶದಲ್ಲಿ ಕಳ್ಳ ನೋಟು ಮುದ್ರಣವಾಗುವುದಿಲ್ಲ ಎಂದು ಹೇಳಿದರೂ ಬಾಂಗ್ಲಾದೇಶದಿಂದ 5ರಿಂದ 6 ಲಕ್ಷ ಕೋಟಿ ರೂ. ನೋಟುಗಳು ಭಾರತಕ್ಕೆ ಹರಿದು ಬರುತ್ತಿದೆ. ಈಗ ಬ್ಯಾಂಕ್‌ನಲ್ಲಿ ನಗದು ಮಿತಿ ತೆಗೆಯುವ ಮೂಲಕ ನೀವು ಸಂಪೂರ್ಣವಾಗಿ ಸೋತು ಹೋಗಿದ್ದೀರಿ ಎಂದರು.
ಸ್ವಿಸ್‌ ಬ್ಯಾಂಕ್‌ನಿಂದ ಒಂದು ಪೈಸೆಯನ್ನೂ ತರಲು ನಿಮ್ಮಿಂದ ಸಾಧ್ಯವಾಗಿಲ್ಲ. ಅಲ್ಲಿ ಹಣ ಇಟ್ಟವರು ಬಹಳ ಖುಷಿಯಾಗಿದ್ದಾರೆ. ಮೋದಿ ಅವರಿಂದ ಇದು ಅಸಾಧ್ಯ ಎಂದು ಅಡಿಕೊಳ್ಳುತ್ತಿದ್ದಾರೆ. ಒಂದ್‌ ಬಾರಿಯಾದರೂ ಸ್ವಿಜರ್‌ಲ್ಯಾಂಡ್‌ನ‌ ಪ್ರಧಾನಿ ಜತೆಯಲ್ಲಿ ಮಾತನಾಡಿ ಈ ಕುರಿತು ಕ್ರಮ ಕೈಗೊಳ್ಳಿ ಎಂದರು. ಮಾಜಿ ಮೇಯರ್‌ ಅಜಿತ್‌ಕುಮಾರ್‌, ಕಾಂಗ್ರೆಸ್‌ ಮುಖಂಡರಾದ ಕಳ್ಳಿಗೆ ತಾರನಾಥ ಶೆಟ್ಟಿ, ಯು. ಕರುಣಾಕರ ಶೆಟ್ಟಿ, ಉಮೇಶ್ಚಂದ್ರ ಉಪಸ್ಥಿತರಿದ್ದರು.

ಮೋದಿ ಮೋಡಿಯಿಂದ ಕಾಂಗ್ರೆಸ್‌ಗೆ ಸೋಲು
ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಲು ಮೋಡಿ ಮಾಡುವ ಮೋದಿ ಭಾಷಣವೇ ಕಾರಣ. ಅವರ ಮಾತು
ಗಾರಿಕೆ ನೋಡಿ ಏನೋ ಬದಲಾವಣೆಯಾ
ಗಲಿದೆ ಎಂದು ಜನ ಮತ ಹಾಕುತ್ತಾರೆ. ಆದರೆ ಮುಂದಿನ ಸಾರ್ವತ್ರಿಕ ಚುನಾವಣೆ
ಯಲ್ಲಿ ಮೋದಿ ಸೋಲುವುದು ಖಚಿತ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಗೌರವದಿಂದ ನಡೆದುಕೊಳ್ಳಲಿ
ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಬಿಜೆಪಿ ಸೇರ್ಪಡೆ ಕುರಿತು ಮಾತನಾ
ಡಿದ ಪೂಜಾರಿ, ಎಸ್‌.ಎಂ. ಕೃಷ್ಣ ಉತ್ತಮ
ನಾಯಕ. ಅವರು ಮಾಜಿ ಕೇಂದ್ರ ಮಂತ್ರಿ
ಯಾಗಿದ್ದವರು. ಅವರನ್ನು ಗೌರವದಿಂದ ಕಾಣಬೇಕಿತ್ತು. ಮುಖ್ಯಮಂತ್ರಿ ಸಿದ್ಧ
ರಾಮಯ್ಯ ಈ ನಿಟ್ಟಿನಲ್ಲಿ ಅಲೋಚನೆ ಮಾಡಬೇಕಿತ್ತು. ಆದರೆ ಸಿಎಂ ಮನಸ್ಸಿನಲ್ಲಿ ತುಂಬಿರುವ ದುರಂಹಕಾರ ಇದೆಕ್ಕೆಲ್ಲ ಎಡೆ ಮಾಡಿಕೊಟ್ಟಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next