Advertisement

ನಾಳೆ 15 ಕ್ಷೇತ್ರಗಳಿಗೆ ಕಾಂಗ್ರೆಸ್‌ ಅಭ್ಯರ್ಥಿಗಳು ಅಂತಿಮ?

11:51 PM Mar 13, 2024 | Team Udayavani |

ಬೆಂಗಳೂರು: ದಿಲ್ಲಿಯಲ್ಲಿ ಕಾಂಗ್ರೆಸ್‌ ಚುನಾವಣ ಸಮಿತಿ ಸಭೆ ಶುಕ್ರವಾರ ನಡೆಯಲಿದ್ದು, ಜಿದ್ದಾಜಿದ್ದಿನ ಕ್ಷೇತ್ರಗಳು ಸಹಿತ 15 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸುವ ಸಾಧ್ಯತೆಗಳಿವೆ.

Advertisement

ಬೆಳಗಾವಿ, ಚಿಕ್ಕೋಡಿ ಸಹಿತ ಹಲವು ಕ್ಷೇತ್ರಗಳಿಗೆ ಎರಡನೇ ಪಟ್ಟಿಯಲ್ಲಿ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸುವ ನಿರೀಕ್ಷೆ ಇದೆ. ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಶುಕ್ರವಾರ ದಿಲ್ಲಿಗೆ ತೆರಳಲಿದ್ದಾರೆ. ಹೆಚ್ಚು-ಕಡಿಮೆ ಅಂದೇ ಪಟ್ಟಿ ಬಿಡುಗಡೆಗೊಂಡರೂ ಅಚ್ಚರಿ ಇಲ್ಲ ಎನ್ನಲಾಗಿದೆ.

ಈಗಾಗಲೇ ಸುರ್ಜೇವಾಲ ನೇತೃತ್ವದಲ್ಲಿ ಈಚೆಗೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಅಳೆದು-ತೂಗಿ 10-15 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಶಿಫಾರಸು ಮಾಡ ಲಾಗಿದೆ. ಈ ಪೈಕಿ ತುಸು ಗೊಂದಲ ಇರುವ ಹಾಗೂ ಪ್ರತಿಪಕ್ಷ ಬಿಜೆಪಿ 9 ಕಡೆ ಹಾಲಿ ಸಂಸದರ ಬದಲಿಗೆ ಹೊಸ ಮುಖಗಳನ್ನು ಕಣಕ್ಕಿಳಿಸಲು ನಿರ್ಧರಿಸಿರುವುದರಿಂದ ಈಗ ಕಾಂಗ್ರೆಸ್‌ ಲೆಕ್ಕಾಚಾರ ಬದಲಾಗಿದೆ. ಹಾಗಾಗಿ, ಅಂತಹ ಕ್ಷೇತ್ರಗಳ ಬಗ್ಗೆ ಕಾಂಗ್ರೆಸ್‌ ಸಾಕಷ್ಟು ಅಳೆದುತೂಗಿ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಸಾಧ್ಯತೆಗಳಿವೆ.

ಗುರುವಾರ (ಮಾರ್ಚ್‌ 14) ಕೂಡ ಚುನಾವಣ ಸಮಿತಿ ಸಭೆ ನಡೆಯಲಿದೆ. ಅಂದು ರಾಜ್ಯದ ಅಭ್ಯರ್ಥಿಗಳ ಬಗ್ಗೆ ಯಾವುದೇ ಪ್ರಸ್ತಾವ ಆಗುವುದಿಲ್ಲ. ಮರುದಿನ ಅಂದರೆ ಮಾರ್ಚ್‌ 15ಕ್ಕೆ ಕರ್ನಾಟಕದ ಚರ್ಚೆ ನಡೆಯಲಿದೆ. ಅಲ್ಲಿ 10-15 ಅಭ್ಯರ್ಥಿಗಳ ಹೆಸರು ಅಂತಿಮಗೊಳ್ಳುವ ಸಾಧ್ಯತೆ ಇದೆ. ಇದಾಗಿ ಎರಡು- ಮೂರು ದಿನಗಳಲ್ಲೇ ಮೂರನೇ ಮತ್ತು ಕೊನೆಯ ಹಂತದ ಪಟ್ಟಿ ಬಿಡುಗಡೆ ಆಗುವ ನಿರೀಕ್ಷೆ ಇದೆ ಎಂದು ಕಾಂಗ್ರೆಸ್‌ ನಾಯಕರೊಬ್ಬರು ಮಾಹಿತಿ ನೀಡಿದರು.

ಸಂಭಾವ್ಯ ಅಭ್ಯರ್ಥಿಗಳು
ಕ್ಷೇತ್ರ ಸಂಭಾವ್ಯ ಅಭ್ಯರ್ಥಿಗಳು
ಧಾರವಾಡ- ಲೋಹಿತ್‌ ನಾಯ್ಕರ್‌/ ರಜತ ಉಳ್ಳಾಗಡ್ಡಿಮಠ
ಕಲಬುರಗಿ- ರಾಧಾಕೃಷ್ಣ ದೊಡ್ಡಮನಿ
ಚಿತ್ರದುರ್ಗ (ಮೀಸಲು)- ಬಿ.ಎನ್‌. ಚಂದ್ರಪ್ಪ
ಕೋಲಾರ (ಮೀಸಲು)- ಕೆ.ಎಚ್‌. ಮುನಿಯಪ್ಪ
ಬೆಳಗಾವಿ- ಮೃಣಾಲ್‌ ಹೆಬ್ಬಾಳ್ಕರ್‌
ಚಿಕ್ಕೋಡಿ- ಪ್ರಿಯಾಂಕಾ ಜಾರಕಿಹೊಳಿ
ಬಾಗಲಕೋಟೆ -ಸಂಯುಕ್ತ ಪಾಟೀಲ್‌/ ವೀಣಾ ಕಾಶಪ್ಪನವರ್‌
ಬೆಂಗಳೂರು ದಕ್ಷಿಣ- ಸೌಮ್ಯಾ ರೆಡ್ಡಿ
ಬೆಂಗಳೂರು ಕೇಂದ್ರ- ಮನ್ಸೂರ್‌ಖಾನ್‌/ ಬಿ.ಕೆ.ಹರಿಪ್ರಸಾದ್‌
ಬೆಂಗಳೂರು ಉತ್ತರ- ಪ್ರೊ| ರಾಜೀವ್‌ ಗೌಡ
ದಾವಣಗೆರೆ- ಪ್ರಭಾ ಮಲ್ಲಿಕಾರ್ಜುನ
ಚಾಮರಾಜನಗರ- ದರ್ಶನ್‌ ಧ್ರುವನಾರಾಯಣ
ಉತ್ತರ ಕನ್ನಡ- ಅಂಜಲಿ ನಿಂಬಾಳ್ಕರ್‌
ಬೀದರ್‌- ರಾಜಶೇಖರ ಪಾಟೀಲ್‌ ಹುಮ್ನಾಬಾದ್‌
ಮೈಸೂರು- ಲಕ್ಷ್ಮಣ/ಡಾ| ಯತೀಂದ್ರ
ಚಿಕ್ಕಬಳ್ಳಾಪುರ- ರಕ್ಷಾ ರಾಮಯ್ಯ

Advertisement
Advertisement

Udayavani is now on Telegram. Click here to join our channel and stay updated with the latest news.

Next