Advertisement

ಕ್ಷೇತ್ರ ಅಭಿವೃದ್ಧಿಗೆ ನೀಲನಕ್ಷೆ ಸಿದ್ಧ: ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಕೃಷ್ಣ

11:23 AM May 02, 2023 | Team Udayavani |

ಬೆಂಗಳೂರು: “ಅಧಿಕಾರದಲ್ಲಿ ಇಲ್ಲದಿದ್ದರೂ ಕಳೆದ ಐದು ವರ್ಷಗಳು ನೀವೇ ನಮ್ಮ ಶಾಸಕರಂತೆ ಕೆಲಸ ಮಾಡಿದ್ದೀರಿ. ಕೋವಿಡ್‌ ಸಂದರ್ಭದಲ್ಲಿ ನಮ್ಮಂತಹ ನೂರಾರು ಕುಟುಂಬಗಳಿಗೆ ನೆರವಾಗಿದ್ದೀರಿ. ಈ ಬಾರಿ ಅಧಿಕೃತವಾಗಿಯೇ ಶಾಸಕರಾಗಿ ಕೆಲಸ ಮಾಡುವಂತಾಗಬೇಕು…’ – ಗೋವಿಂದರಾಜನಗರದಲ್ಲಿ ಸೋಮವಾರ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಕೃಷ್ಣ ವಿವಿಧೆಡೆ ಮತ ಯಾಚನೆ ನಡೆಸಿದ ವೇಳೆ ಮತದಾರರು ಹಾರೈಸಿದ್ದು ಹೀಗೆ.

Advertisement

ನಗರದ ಮಾರುತಿಮಂದಿರ, ಅಗ್ರಹಾರ ದಾಸರಹಳ್ಳಿ, ಪ್ರಶಾಂತನಗರ, ಭಾರತೀಯ ಕ್ರೀಡಾ ಪ್ರಾಧಿಕಾರ ಸೇರಿದಂತೆ ಹಲವಾರು ಬಡಾವಣೆಗಳಲ್ಲಿ ಪ್ರಿಯಕೃಷ್ಣ ಅಬ್ಬರದ ಪ್ರಚಾರ ನಡೆಸಿದರು. ಈ ವೇಳೆ ಬಹುತೇಕ ಮತದಾರರು, “ಕಳೆದ ಐದು ವರ್ಷಗಳು ನೀವೇ ನಮ್ಮ ಶಾಸಕರಂತೆ ಪ್ರತಿಯೊಂದು ಸಮಸ್ಯೆಗಳಿಗೆ ಸ್ಪಂದಿಸಿದ್ದೀರಿ. ಈ ಸಲ ಅಧಿಕೃತವಾಗಿ ಶಾಸಕರಾಗಿ ಕ್ಷೇತ್ರದ ಸೇವೆ ಮಾಡಬೇಕು. ಆ ಮೂಲಕ ಅಭಿವೃದ್ಧಿಗೆ ನಾಂದಿ ಹಾಡಬೇಕು’ ಎಂದು ಆಶಿಸಿದರು.

ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು, ಹಿರಿಯ ನಾಗರಿಕರ ಸಂಘ-ಸಂಸ್ಥೆಗಳೊಂದಿಗೆ ಪ್ರಿಯಕೃಷ್ಣ ಸಮಾಲೋಚನೆ ನಡೆಸಿ, ಸಲಹೆ- ಅಹವಾಲು ಸ್ವೀಕರಿಸಿದರು.

ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನೀಲನಕ್ಷೆ ಹಾಕಿಕೊಳ್ಳಲಾಗಿದೆ. ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ, ಆ ಎಲ್ಲ ಕನಸುಗಳನ್ನು ಈಡೇರಿಸುವ ಮೂಲಕ ಮಾದರಿ ಕ್ಷೇತ್ರವನ್ನಾಗಿ ಮಾಡಲಾಗುವುದು’ ಎಂದು ಹೇಳಿದರು.

“ಸರ್ಕಾರದ ಎರಡೂ ಎಂಜಿನ್‌ಗಳು ಕೆಟ್ಟುನಿಂತಿದ್ದು, ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಐದು ವರ್ಷಗಳಲ್ಲಿನ ಶೇ.40 ಕಮಿಷನ್‌, ಭ್ರಷ್ಟಾಚಾರ ಸೇರಿದಂತೆ ಹಗರಣಗಳೇ ಸರ್ಕಾರದ ಸಾಧನೆಯಾಗಿದೆ. ಇದು ಪುನರಾವರ್ತನೆಯಾಗದಿರಲು ಮತದಾರರು “ಕೈ’ ಬಲಪಡಿಸಬೇಕು’ ಎಂದು ಪ್ರಿಯಕೃಷ್ಣ ಮನವಿ ಮಾಡಿದರು.

Advertisement

ಮಳೆ ಮತ್ತು ಬಿಸಿಲಿನ ನಡುವೆಯೂ ಪಾರ್ಕ್‌ಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿ ಮತಯಾಚನೆ ನಡೆಸಿದರು. ಮಾಜಿ ಮೇಯರ್‌ ಶಾಂತಕುಮಾರಿ ಸೇರಿದಂತೆ ಸ್ಥಳೀಯ ಕಾಂಗ್ರೆಸ್‌ ಮುಖಂಡರು ಸಾಥ್‌ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next