Advertisement

Congress ಅಭ್ಯರ್ಥಿ ಡಾ| ಪ್ರಭಾ ಮಲ್ಲಿಕಾರ್ಜುನ್ 44.53 ಕೋಟಿ ಆಸ್ತಿ ಒಡತಿ

06:04 PM Apr 12, 2024 | Team Udayavani |

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಗಣಿ, ಭೂವಿಜ್ಞಾನ ಮತ್ತು ತೋಟಗಾರಿಕೆ ಇಲಾಖೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಪತ್ನಿ ಡಾ| ಪ್ರಭಾ ಮಲ್ಲಿಕಾರ್ಜುನ್ 44.53 ಕೋಟಿ ಆಸ್ತಿ ಒಡತಿಯಾಗಿದ್ದಾರೆ. 97.28 ಲಕ್ಷ ಸಾಲ ಅವರ ಹೆಸರಲ್ಲಿದೆ.

Advertisement

ಡಾ| ಪ್ರಭಾ ಮಲ್ಲಿಕಾರ್ಜುನ್ ಅವರಲ್ಲಿ67,566 ರೂಪಾಯಿ ನಗದು, ವಿವಿಧ ಬ್ಯಾಂಕ್‌ಗಳಲ್ಲಿ 13,76,105 ರೂಪಾಯಿ ಠೇವಣಿ ಹೊಂದಿದ್ದಾರೆ. ಷೇರು, ಡಿಬೆಂಚರ್ ಇತರೆಡೆ 2,65,20,500 ರೂಪಾಯಿ ಬಂಡವಾಳ ಹೂಡಿಕೆ ಮಾಡಿದ್ದಾರೆ. 1.80 ಕೋಟಿ ಮೌಲ್ಯದ 3189.528 ಗ್ರಾಂ ಚಿನ್ನ, ಇತರೆ 5.976 ಗ್ರಾಂ ಆಭರಣಗಳಿವೆ. ಆದರೆ, ಬೆಳ್ಳಿ ಆಭರಣ ಯಾವುದೂ ಇಲ್ಲ. 10,23,009 ರೂಪಾಯಿ ಮೌಲ್ಯದ ಇತರೆ ಆಸ್ತಿಗಳು ಅವರ ಹೆಸರಲ್ಲಿ ಇವೆ. ಡಾ| ಪ್ರಭಾ ಮಲ್ಲಿಕಾರ್ಜುನ್ ಹೆಸರಲ್ಲಿ 1.54 ಕೋಟಿ ಮೌಲ್ಯದ 47.11ಎಕರೆ ಕೃಷಿ ಭೂಮಿ ಇದೆ.16.1 ಲಕ್ಷ ಮೌಲ್ಯದ 11050 ಚದರ ಅಡಿಯಷ್ಟು ಕೃಷಿಯೇತರ ಭೂಮಿ ಸಹ ಇದೆ. 21.4 ಲಕ್ಷ ಮೌಲ್ಯದ 34484 ಚದುರ ಅಡಿ ಮನೆಯ ಜತೆಗೆ 2500 ಚದುರ ಅಡಿ ಬಿಲ್ಡ್ ಏರಿಯಾ ಡಾ| ಪ್ರಭಾ ಮಲ್ಲಿಕಾರ್ಜುನ್ ಹೆಸರಲ್ಲಿದೆ.

ವೈಯಕ್ತಿಕವಾಗಿ ಯಾವುದೇ ಆಸ್ತಿ ಇಲ್ಲ ಎಂದು ಪ್ರಮಾಣಪತ್ರ ಸಲ್ಲಿಸಿರುವ ಅವರು ಅವಿಭಕ್ತ ಕುಟುಂಬದ ಹಿನ್ನೆಲೆ ಯಲ್ಲಿ ತಮಗೆ2018-19 ರಲ್ಲಿ 6,05,320, 2019-20 ರಲ್ಲಿ6,48,080, 2020-21ರಲ್ಲಿ 7,18,300, 2021-22 ರಲ್ಲಿ7,18,300, 2021-22 ರಲ್ಲಿ8,40,600 ರೂಪಾಯಿ ಆಸ್ತಿ ದೊರೆತಿದೆ. ಒಟ್ಟು 44,53,14,286 ರೂಪಾಯಿ ಮೌಲ್ಯದ ಚರ ಮತ್ತು ಸ್ಥಿರಾಸ್ತಿಯ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next