Advertisement

Padmaraj ಅವರಿಂದ ಕೋಮು ಸಾಮರಸ್ಯ ಮರು ಸ್ಥಾಪನೆ: ರಮಾನಾಥ ರೈ ವಿಶ್ವಾಸ

12:47 AM Apr 23, 2024 | Team Udayavani |

ಬಂಟ್ವಾಳ: ಹಲವು ದಶಕಗಳಿಂದ ಜನಸೇವೆಯ ಮೂಲಕ ಜಿಲ್ಲೆಯ ಜನತೆಯ ಮನ ಗೆದ್ದಿರುವ ಪದ್ಮರಾಜ್‌ ಆರ್‌. ಪೂಜಾರಿ ಅವರು ಸರ್ವ ಧರ್ಮದ ಬಂಧುಗಳ ಪ್ರೀತಿ, ವಿಶ್ವಾಸವನ್ನು ಗಳಿಸಿದ್ದು ಮುಂದೆ ಸಂಸದರಾಗಿ ಆಯ್ಕೆಯಾದ ಬಳಿಕ ಜಿಲ್ಲೆಯಲ್ಲಿ ಕೋಮು ಸಾಮರಸ್ಯವನ್ನು ಮರುಸ್ಥಾಪಿಸುವ ಕಾರ್ಯ ಮಾಡಲಿದ್ದಾರೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.

Advertisement

ಅವರು ಸೋಮವಾರ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಬರೀ ಸುಳ್ಳು ಹೇಳುತ್ತಾ ಅಧಿಕಾರಕ್ಕೆ ಬಂದ ಬಿಜೆಪಿಯು ಹೇಳಿದ ಯಾವ ಕೆಲಸವನ್ನೂ ಮಾಡಿಲ್ಲ. ಇದೀಗ ಜಿಲ್ಲೆಯಾದ್ಯಂತ ಕಾಂಗ್ರೆಸ್‌ ಪರ ಅಲೆ ಕಂಡುಬಂದಿದ್ದು, ಎಲ್ಲೆಡೆಯೂ ಜನ ಕಾಂಗ್ರೆಸ್‌ಗೆ ಮತ ಹಾಕುವ ಭರವಸೆ ನೀಡುತ್ತಿದ್ದಾರೆ. ಕಾಂಗ್ರೆಸ್‌ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳಿಂದ ಜನ ಕಾಂಗ್ರೆಸ್‌ ಕುರಿತು ಹೆಮ್ಮೆ ಪಡುವಂತಾಗಿದೆ ಎಂದರು.

33 ವರ್ಷಗಳ ಬಳಿಕ ವಿಜಯ ಪತಾಕೆ
ಕಾಂಗ್ರೆಸ್‌ ಅಭ್ಯರ್ಥಿ ಪದ್ಮರಾಜ್‌ ಆರ್‌. ಪೂಜಾರಿ ಅವರು ಮಾತನಾಡಿ, ಕಾಂಗ್ರೆಸ್‌ನ ಪ್ರತೀ ಕಾರ್ಯಕರ್ತರು ಕೂಡ ಮನೆ ಮನೆಗೆ ತೆರಳಿ ಮತದಾರರ ಪ್ರೀತಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ದ.ಕ. ಕ್ಷೇತ್ರದಲ್ಲಿ 33 ವರ್ಷಗಳ ಬಳಿಕ ಕಾಂಗ್ರೆಸ್‌ ವಿಜಯ ಪತಾಕೆ ಹಾರಿಸುವುದು ಶತಸಿದ್ಧವಾಗಿದೆ. ಇದೀಗ ಬಿಜೆಪಿಯವರು ಕೊನೆಯ ಅಸ್ತ್ರವಾಗಿ ಅಪಪ್ರಚಾರ ಆರಂಭಿಸಿದ್ದು ಮನೆ ಮನೆಗೆ ತೆರಳಿ ಆಣೆ ಪ್ರಮಾಣದ ಕಾರ್ಯ ಮಾಡುತ್ತಿದ್ದಾರೆ ಎಂದರು.

ಕಾಂಗ್ರೆಸ್‌ ಕಾರ್ಯಕರ್ತರು ಯಾವುದೇ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳದೆ ಎಚ್ಚರ ವಹಿಸಬೇಕು. ಮುಂದಿನ ಮೂರು ದಿನಗಳ ಕಾಲ ನೀವು ನಿದ್ರೆಯನ್ನೂ ಮಾಡದೆ ಕೆಲಸ ಮಾಡಿದರೆ ಮುಂದೆ 5 ವರ್ಷಗಳ ಕಾಲ ನಿಮ್ಮ ಕಾವಲುಗಾರನಾಗಿ ಸಂಸತ್ತಿನಲ್ಲಿ ಕೆಲಸ ಮಾಡುತ್ತೇನೆ ಎಂದರು.

Advertisement

ಕಾಂಗ್ರೆಸ್‌ ವಾರ್‌ರೂಮ್‌ ಮುಖ್ಯಸ್ಥ ಅಶ್ವನಿಕುಮಾರ್‌ ರೈ, ಕೆಪಿಸಿಸಿ ಸದಸ್ಯರಾದ ಪಿಯೂಸ್‌ ಎಲ್‌. ರಾಡ್ರಿಗಸ್‌, ಚಂದ್ರಪ್ರಕಾಶ್‌ ಶೆಟ್ಟಿ ತುಂಬೆ, ಜಿ.ಪಂ. ಮಾಜಿ ಸದಸ್ಯ ಬಿ. ಪದ್ಮಶೇಖರ್‌ ಜೈನ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಬೇಬಿ ಕುಂದರ್‌, ಸುದೀಪ್‌ ಕುಮಾರ್‌ ಶೆಟ್ಟಿ, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷರಾದ ಜಯಂತಿ ವಿ. ಪೂಜಾರಿ, ಲವಿನಾ ವಿಲ್ಮಾ ಮೊರಾಸ್‌, ಯುವ ಕಾಂಗ್ರೆಸ್‌ ಅಧ್ಯಕ್ಷರಾದ ಇಬ್ರಾಹಿಂ ನವಾಜ್‌, ಸುರೇಶ್‌ ಜೋರಾ, ಪ್ರಮುಖರಾದ ಬಿ.ಎಚ್‌. ಖಾದರ್‌, ಅಬ್ಟಾಸ್‌ ಆಲಿ, ಸುಭಾಶ್ಚಂದ್ರ ಶೆಟ್ಟಿ, ಜಗದೀಶ್‌ ಕೊಯಿಲ, ಮಾಯಿಲಪ್ಪ ಸಾಲ್ಯಾನ್‌, ಚಿತ್ತರಂಜನ್‌ ಶೆಟ್ಟಿ ಬೊಂಡಾಲ, ಮಲ್ಲಿಕಾ ವಿ.ಶೆಟ್ಟಿ, ಸುದರ್ಶನ್‌ ಜೈನ್‌ u ಹಾಜರಿದ್ದರು.

ಅಭಿವೃದ್ಧಿ ಮುಂದಿಟ್ಟು ಮತ ಪ್ರಚಾರ
ಕಾಂಗ್ರೆಸ್‌ ಪಕ್ಷವು ಎಂದಿಗೂ ಜಾತಿ, ಧರ್ಮದ ವಿಚಾರದಲ್ಲಿ ಚುನಾವಣೆ ಎದುರಿಸಿಲ್ಲ, ನಾವು ಅಭಿವೃದ್ಧಿಯನ್ನು ಜನತೆಯ ಮುಂದಿಟ್ಟು ಮತವನ್ನು ಕೇಳುತ್ತಾ ಬಂದಿದ್ದೇವೆ. ಬಿಜೆಪಿಯವರು ನಮ್ಮ ದೇಶಪ್ರೇಮದ ಕುರಿತು ಪ್ರಶ್ನೆ ಮಾಡುತ್ತಿದ್ದು, ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟ ಪಕ್ಷ ಎಂಬ ಹೆಗ್ಗಳಿಕೆ ನಮಗಿದೆ. ಹೀಗಾಗಿ ಕಾಂಗ್ರೆಸ್‌ ಕಾರ್ಯಕರ್ತರಿಗೆ ಯಾರಿಂದಲೂ ದೇಶಾಭಿಮಾನದ ಪಾಠ ಕೇಳಿಸಿಕೊಳ್ಳುವ ಅನಿವಾರ್ಯ ಬಂದಿಲ್ಲ ಎಂದು ಪದ್ಮರಾಜ್‌ ಅವರು ಬಿಜೆಪಿಗೆ ಟಾಂಗ್‌ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next