Advertisement
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಿಕೆ-ಭಾಗಮಂಡಲ ಮುಖ್ಯ ರಸ್ತೆಯು ಅಂತರರಾಜ್ಯ ರಸ್ತೆಯಾಗಿದೆ. ಭಾಗಮಂಡಲದಿಂದ ಕರಿಕೆ ಗ್ರಾಮದ ಮೂಲಕ ಕೇರಳಕ್ಕೆ ಹೋಗುವ ರಸ್ತೆಯು 30 ಕಿ.ಮೀ. ಉದ್ದಕ್ಕೂ ಅತ್ಯಂತ ಶೋಚನೀಯ ಸ್ಥಿತಿಯಲ್ಲಿದ್ದು, ರಸ್ತೆಯನ್ನು ಅಭಿವೃದ್ಧಿಪಡಿಸುವಂತೆ ಈ ಮೊದಲು ಮಾಡಿದ ಮನವಿ ಮತ್ತು ಪ್ರತಿಭಟನೆಗಳಿಗೆ ಜಿಲ್ಲಾಡಳಿತದಿಂದ ಯಾವುದೇ ಸ್ಪಂದನೆ ದೊರೆಯದ ಕಾರಣ ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಲಾಗಿದೆ ಎಂದರು.
Related Articles
Advertisement
ಕರಿಕೆ ರಸ್ತೆ ಎಲ್ಲಿದೆ, ಹೇಗಿದೆ ಎಂದೇ ತಿಳಿಯದ ಕೊಡಗಿನ ಸಂಸದರು ಎಲ್ಲೋ ಕುಳಿತು ಪಾಣತ್ತೂರು-ಕರಿಕೆ-ಭಾಗಮಂಡಲ ರಸ್ತೆ ರಾಷ್ಟ್ರೀಯ ಹೆದ್ದಾರಿಗಳ ಸಂಪರ್ಕ ರಸ್ತೆಯಾಗಿ ಅಭಿವೃದ್ಧಿಯಾಗಲಿದೆ ಎಂದು ಹೇಳಿಕೆ ನೀಡುತ್ತಿದ್ದಾರೆಯೇ ಹೊರತು ಕನಿಷ್ಠ ರಸ್ತೆ ದುರಸ್ತಿ ಕಾರ್ಯ ಕೂಡ ನಡೆದಿಲ್ಲವೆಂದು ಟೀಕಿಸಿದರು.
ಕಾಞಂಗಾಡ್‌ನಿಂದ ಪಾಣತ್ತೂರ್‌ವರೆಗೆ ಡಿಪಿಆರ್ ಸರ್ವೆ ನಡೆದಿದ್ದು, ಕರಿಕೆಯಿಂದ-ಮಡಿಕೇರಿವರೆಗೆ ಸರ್ವೆಯೇ ನಡೆದಿಲ್ಲ. ಇದಕ್ಕೆ ಸಂಸದರ ಅಸಡ್ಡೆಯೇ ಕಾರಣವೆಂದು ಆರೋಪಿಸಿದರು.
ಕಳೆದ 16 ವರ್ಷಗಳಿಂದ ಕೆ.ಜಿ.ಬೋಪಯ್ಯ ಅವರು ಈ ಭಾಗದ ಶಾಸಕರಾಗಿದ್ದರೂ ರಸ್ತೆ ಅಭಿವೃದ್ಧಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ರಸ್ತೆ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸದೆ ಶಾಸಕರು ಗ್ರಾಮವನ್ನು ಪ್ರವೇಶಿಸಿದರೆ ಕಪ್ಪು ಬಾವುಟ ಪ್ರದರ್ಶಿಸಿ ಅಸಮಾಧಾನ ವ್ಯಕ್ತಪಡಿಸುವುದಾಗಿ ಎನ್.ಬಾಲಚಂದ್ರ ನಾಯರ್ ತಿಳಿಸಿದರು.
ಅಚ್ಛೇ ದಿನ್ ಬಂದಿಲ್ಲಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ.ಎಸ್.ರಮಾನಾಥ್ ಮಾತನಾಡಿ ಕಳೆದ 16 ವರ್ಷಗಳಿಂದ ಶಾಸಕರಾಗಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕೆ.ಜಿ.ಬೋಪಯ್ಯ ಅವರು ಕರಿಕೆ ಗ್ರಾಮವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದರು. ಶಾಸಕರಿಗೆ ಅಚ್ಛೇ ದಿನ್ ಬಂದಿದೆ, ಆದರೆ, ಕರಿಕೆ ಜನರಿಗೆ ಯಾವಾಗ ಅಚ್ಛೇ ದಿನ್ ಬರುತ್ತದೆ ಎಂಬುವುದನ್ನು ಶಾಸಕರೇ ಹೇಳಬೇಕೆಂದು ಅಸಮಾಧಾನ ವ್ಯಕ್ತಪಡಿಸಿದರು. ಕರಿಕೆ ರಸ್ತೆಯು ಇಂಜಿನಿಯರ್‌ಗಳಿಗೆ ಆದಾಯ ಗಳಿಕೆಗೆ ಸುಗ್ಗಿ ಬೇಸಾಯದ ರಸ್ತೆಯಂತಾಗಿದ್ದು, ವರ್ಷಕ್ಕೆ ಮೂರು ಬಾರಿ ದುರಸ್ತಿ ಕಾರ್ಯದ ನಾಟಕವಾಡಲಾಗುತ್ತಿದೆ. ಆಗದಿರುವ ಕಾಮಗಾರಿಗಳಿಗೆ ಕೂಡ ಬಿಲ್ ಮಾಡಿರುವ ಪ್ರಕರಣಗಳು ಕಂಡು ಬಂದಿದೆ ಎಂದು ರಮಾನಾಥ್ ಆರೋಪಿಸಿದರು ಆರೋಪಿಸಿದರು. ಈ ಭಾಗದ ಎಲ್ಲಾ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನಗಳು ಮಾತ್ರವಲ್ಲದೆ ಪಾದಾಚಾರಿಗಳಿಗೂ ಸಂಚರಿಸಲು ಸಾಧ್ಯವಾಗುತ್ತಿಲ್ಲವೆಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕರಿಕೆ ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಡಿ.ದೇವರಾಜು, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಜೆ.ಶರಣ್ ಕುಮಾರ್ ಹಾಗೂ ಗ್ರಾ.ಪಂ ಮಾಜಿ ಸದಸ್ಯ ಬಿ.ಕೆ.ಪುರುಷೋತ್ತಮ ಉಪಸ್ಥಿತರಿದ್ದರು.