Advertisement
1974 ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರವು ಕಚ್ಚಥೀವು ದ್ವೀಪವನ್ನು ಶ್ರೀಲಂಕಾಕ್ಕೆ ಹೇಗೆ ಹಸ್ತಾಂತರಿಸಿತು ಎಂಬುದನ್ನು ಆರ್‌ಟಿಐ ವರದಿ ಬಹಿರಂಗಪಡಿಸಿದ ಬೆನ್ನಲ್ಲೇ ಪ್ರಧಾನಿ ವಾಗ್ದಾಳಿ ನಡೆಸಿದ್ದಾರೆ.
Related Articles
Advertisement
‘ಕಾಂಗ್ರೆಸ್‌ಗೆ ಕಪಾಳ ಮೋಕ್ಷ ! ಅವರು ಸ್ವಇಚ್ಛೆಯಿಂದ ಕಚ್ಚಥೀವುವನ್ನು ಬಿಟ್ಟುಕೊಟ್ಟರು ಮತ್ತು ಅದರ ಬಗ್ಗೆ ಪಶ್ಚಾತ್ತಾಪ ಪಡಲಿಲ್ಲ. ಕೆಲವೊಮ್ಮೆ ಕಾಂಗ್ರೆಸ್ ಸಂಸದರೊಬ್ಬರು ರಾಷ್ಟ್ರವನ್ನು ವಿಭಜಿಸುವ ಬಗ್ಗೆ ಮಾತನಾಡುತ್ತಾರೆ. ಕೆಲವೊಮ್ಮೆ ಅವರು ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಅವಹೇಳನ ಮಾಡುತ್ತಾರೆ. ಇದು ಅವರು ಭಾರತದ ಏಕತೆ ಮತ್ತು ಸಮಗ್ರತೆಗೆ ವಿರುದ್ಧವಾಗಿರುವುದನ್ನು ತೋರಿಸುತ್ತದೆ. ಅವರು ನಮ್ಮ ರಾಷ್ಟ್ರವನ್ನು ವಿಭಜಿಸಲು ಅಥವಾ ಒಡೆಯಲು ಮಾತ್ರ ಬಯಸುತ್ತಾರೆ” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಎಕ್ಸ್ ಪೋಸ್ಟ್ ಮಾಡಿದ್ದಾರೆ.
ಡಿಎಂಕೆ ತಿರುಗೇಟು
ಪ್ರಧಾನಿ ನರೇಂದ್ರ ಮೋದಿಯವರಿಗೆ ಡಿಎಂಕೆ ತಿರುಗೇಟು ನೀಡಿದ್ದು,ಹತ್ತು ವರ್ಷಗಳ ಸಾಧನೆಗಳ ಬಗ್ಗೆ ಪ್ರಚಾರ ಮಾಡಲು ಹೆದರಿದ ಬಿಜೆಪಿಯು ಪ್ರತಿಪಕ್ಷಗಳ ಜತೆ ದೂಷಣೆ ಆಟ ಆಡುವುದರಲ್ಲಿ ನಿರತವಾಗಿದೆ. ಈ ವಿಷಯವು ದುಃಖದಾಯಕ ಮತ್ತು ಕಳೆದುಹೋದ ವಿಚಾರದಲ್ಲಿ ಮಾಡುವ ರಾಜಕೀಯ ಪ್ರಚಾರ ಎಂದು ಡಿಎಂಕೆ ವಕ್ತಾರ ಮನುರಾಜ್ ಎಸ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಆರ್‌ಟಿಐ ಮಾಹಿತಿಯಲ್ಲಿ ಏನಿದೆ?
1948ರವರೆಗೆ ಕಚ್ಚಥೀವು ದ್ವೀಪವು ರಾಮ ನಾಡಿನ ರಾಜಮನೆತನದ ಒಡೆತನದಲ್ಲಿತ್ತು.
ಜಮೀನ್ದಾರಿ ಪದ್ಧತಿ ಕೊನೆಗೊಂಡ ಬಳಿಕ ಅದು ಮದ್ರಾಸ್ ಸರಕಾರದ ಅಧೀನಕ್ಕೆ ಬಂದಿತ್ತು.
ಅನಂತರ ಶ್ರೀಲಂಕಾವು ತನ್ನ ವ್ಯಾಪ್ತಿ ಹೆಚ್ಚಿಸಿಕೊಳ್ಳುವುದಕ್ಕಾಗಿ ದ್ವೀಪ ತನ್ನದೆಂದು ತಗಾದೆ ತೆಗೆಯಿತು
1961ರ ಮೇ10ರಂದು ನಮಗೆ ದ್ವೀಪ ಬಿಟ್ಟುಕೊಡಲು ಹಿಂಜರಿಕೆಯು ಇಲ್ಲವೆಂದು ಆಗಿನ ಪ್ರಧಾನಿ ನೆಹರೂ ಸಹಿ ಮಾಡಿದರು
1968ರಲ್ಲಿ ಶ್ರೀಲಂಕಾವು ತನ್ನ ನಕ್ಷೆಯಲ್ಲಿ ದ್ವೀಪ ತನ್ನದೆಂದು ನಮೂದಿಸಿತು
ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಸಂಸತ್‌ನಲ್ಲಿ ವಿಪಕ್ಷಗಲ್ಲಿ ಈ ವಿಚಾರ ಪ್ರಸ್ತಾವಿಸಿದವು
ಉಭಯ ರಾಷ್ಟ್ರಗಳು ದ್ವೀಪದ ಮೇಲೆ ಸಮಾನ ಹಕ್ಕುಗಳನ್ನು ಪ್ರತಿಪಾದಿಸುವ ಒಪ್ಪಂದ ಮಾಡಿಕೊಂಡಿದೆ ಎಂದ ಸರಕಾರ
1973ರಲ್ಲಿ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಸಭೆ, 1974ರಲ್ಲಿ ದ್ವೀಪವನ್ನು ಲಂಕೆಗೆ ಬಿಟ್ಟುಕೊಟ್ಟ ಭಾರತ