Advertisement

ಒತ್ತಡಕ್ಕೆ ಮಣಿದ ಕಾಂಗ್ರೆಸ್‌: ಕೇರಳ ಕಾಂಗ್ರೆಸ್‌ಗೆ ರಾಜ್ಯಸಭಾ ಸ್ಥಾನ

12:19 PM Jun 09, 2018 | udayavani editorial |

ಕೋಟ್ಟಯಂ : ಹಲವು ದಿನಗಳ ಸಭೆ, ಚರ್ಚೆಯ ಬಳಿಕ ಕೇರಳ ಕಾಂಗ್ರೆಸ್‌ ಎಂ ನಿನ್ನೆ ಶುಕ್ರವಾರ ತಡರಾತ್ರಿ ತನ್ನ ನಾಯಕ ಜೋಸ್‌ ಕೆ ಮಾಣಿ ಅವರನ್ನು ಕಾಂಗ್ರೆಸ್‌ ನೇತೃತ್ವದ ಯುನೈಟೆಡ್‌ ಡೆಮೋಕ್ರಾಟಿಕ್‌ ಫ್ರಂಟ್‌ (ಯುಡಿಎಫ್)ನ ರಾಜ್ಯಸಭಾ ಚುನಾವಣಾ ಅಭ್ಯರ್ಥಿ ಎಂದು ಪ್ರಕಟಿಸಿದೆ.

Advertisement

ಕೇರಳ ಕಾಂಗ್ರೆಸ್‌ ಎಂ ಪಕ್ಷದ ಎರಡನೇ ಕ್ರಮಾಂಕದ ನಾಯಕರಾಗಿರುವ ಪಿ ಜೆ ಜೋಸೆಫ್ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ “ಜೋಸ್‌ ಕೆ ಮಾಣಿ ಅವರನ್ನು ರಾಜ್ಯಸಭಾ ಸ್ಥಾನಕ್ಕೆ ತನ್ನ ಅಭ್ಯರ್ಥಿಯಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದೆ’ ಎಂದು ಹೇಳಿದರು.

ಕೋಟ್ಟಯಂ ಸಮೀಪದ ಪಾಲಾ ಎಂಬಲ್ಲಿ ನಿನ್ನೆ ಶುಕ್ರವಾರ ತಡರಾತ್ರಿ ನಡೆದಿದ್ದ ಕೇರಳ ಕಾಂಗ್ರೆಸ್‌ ಎಂ ನಾಯಕರ ಸಭೆಯಲ್ಲಿ ಜೋಸ್‌ ಕೆ ಮಾಣಿ ಅವರನ್ನು ಮೇಲ್ಮನೆ ಅಭ್ಯರ್ಥಿಯಾಗಿ ನಿಲ್ಲಿಸುವ ನಿರ್ಧಾರವನ್ನು ಕೈಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next