Advertisement

ಕಾವಳಮೂಡೂರು: ಕಾಂಗ್ರೆಸ್- ಬಿಜೆಪಿ ಕಾರ್ಯಕರ್ತರ ಹೊಯ್ ಕೈ

01:36 PM Jul 14, 2021 | Team Udayavani |

ಪುಂಜಾಲಕಟ್ಟೆ: ಭಿನ್ನ ಉದ್ದೇಶಗಳಿಗೆ ಪ್ರತಿಭಟನೆ ನಡೆಸಲು ಜಮಾಯಿಸಿದ್ದ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆದು ಪರಸ್ಪರ ಹೊಯ್ ಕೈ ನಡೆದ ಘಟನೆ ಕಾವಳಕಟ್ಟೆಯಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದಿದೆ.

Advertisement

 ಘಟನೆಯ ವಿವರ: ಕಾವಳಮೂಡೂರು ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ  ಸಂಘದ ಆವರಣದಲ್ಲಿ  ಕಾರ್ಯಕರ್ತರು ಪ್ರತಿಭಟನೆಗೆ ಸಿದ್ದತೆ ನಡೆಸಿದ್ದರು.

ಇದೇ ವೇಳೆ ಕಾಂಗ್ರೆಸ್ ಕಾರ್ಯಕರ್ತರು  ಪಕ್ಕದಲ್ಲಿರುವ ಕಾವಳಮೂಡೂರು ಗ್ರಾ.ಪಂ. ಮುಂಭಾಗದಲ್ಲಿ ಗ್ರಾ.ಪಂ.ನಿಂದ ನೀರು ಹಾಗೂ ಮನೆ ತೆರಿಗೆ ಯನ್ನು ಏಕಾಏಕಿ ಏರಿಕೆಯನ್ನು   ವಿರೋಧಿಸಿ ಪ್ರತಿಭಟನೆ ಗೆ ಮುಂದಾಗಿದ್ದರು.

ಈ ಹಂತದಲಲ್ಲಿ ಅರ್.ಟಿ.ಐ .ಕಾರ್ಯಕರ್ತ ಪದ್ಮನಾಭ ಮಯ್ಯ ಪ್ರತಿಭಟನೆ ಯಲ್ಲಿ ಕಾಣಿಸಿಕೊಂಡಿದ್ದು ಕಾಂಗ್ರೆಸ್ ಕಾರ್ಯಕರ್ತರು ಪ್ರಶ್ನಿಸಿದಾಗ ಬಿಜೆಪಿ ಕಾರ್ಯಕರ್ತರು ಆಕ್ಷೇಪಿಸಿದರು. ಈ ಸಂದರ್ಭದಲ್ಲಿ ಉಭಯ ಪಕ್ಷದ ಕಾರ್ಯಕರ್ತರ ನಡುವೆ ನೂಕಾಟ,  ಪರಸ್ಪರ ತಳ್ಳಾಟ ನಡೆಯಿತು.

ಇದನ್ನೂ ಓದಿ: ಕೊಟ್ಟ ಹಣ, ಬಂಗಾರ ಕೇಳಿದಕ್ಕೆ ಸ್ನೇಹಿತನ ಅಪಹರಣ, ಕೊಲೆ

Advertisement

ಇದೇ ವೇಳೆ ಆರ್.ಟಿ.ಐ.ಕಾರ್ಯಕರ್ತ ಪದ್ಮನಾಭ ಮಯ್ಯ ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ಪ್ರತಿಭಟನೆ  ರೂಪ ಬದಲಾಯಿತು. ಉಭಯ ಪಕ್ಷದ ಕಾರ್ಯಕರ್ತರು ಧಿಕ್ಕಾರ ಕೂಗಿದರು.

ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾದ ಹಿನ್ನೆಲೆಯಲ್ಲಿ ಪುಂಜಾಲಕಟ್ಟೆ ಎಸ್.ಐ.ಸೌಮ್ಯಾ  ಅವರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಉಭಯ ಪಕ್ಷದ ನಾಯಕ ರ ನಡುವೆ ಆರೋಪ ಪ್ರತ್ಯಾರೋಪಗಳು ನಡೆಯಿತು.

ಈ ಸಂದರ್ಭದಲ್ಲಿ ಸ್ಥಳದಲ್ಲಿ  ಜಮಾಯಿಸಿದ್ದ  ಕಾರ್ಯಕರ್ತರ ನ್ನು ಪೊಲೀಸರು ಲಾಠಿ ಬೀಸಿ ಚದುರಿಸಿದರು.

ಆರ್.ಟಿ.ಐ ಕಾರ್ಯಕರ್ತ ಪದ್ಮನಾಭ ಮಯ್ಯ ಅವರು ಪುಂಜಾಲಕಟ್ಟೆ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾದರೆ, ಕಾಂಗ್ರೆಸ್ ಕಾರ್ಯ ಕರ್ತರಾದ  ಸದಾನಂದ ಶೆಟ್ಟಿ, ಬಿ.ಆರ್.ಅಂಚನ್  ಅವರು ಬಂಟ್ವಾಳ ಸರಕಾರಿ ಆಸ್ಪತ್ರೆಯ ಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ.

ಪುಂಜಾಲಕಟ್ಟೆ ಪೋಲೀಸರು ಆಸ್ಪತ್ರೆಯಲ್ಲಿ ದಾಖಲಾದವರ ಹೇಳಿಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.ಸುದ್ದಿ ತಿಳಿದು   ಡಿ.ವೈ.ಎಸ್.ಪಿ.ವೆಲೆಂಟೈನ್ ಡಿ.ಸೋಜ, ಬೆಳ್ತಂಗಡಿ ವೃತ್ತ ನಿರೀಕ್ಷಕ ಶಿವಕುಮಾರ್ ಸ್ಥಳಕ್ಕಾಗಮಿಸಿ ಕಾವಳಮೂಡೂರು ಸೊಸೈಟಿ ಆಧ್ಯಕ್ಷ  ಪದ್ಮಶೇಖರ್ ಜೈನ್ , ಜಿಲ್ಲಾ ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ ಸುದರ್ಶನ ಬಜ ಅವರಿಂದ ಮಾಹಿತಿ ಪಡೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next