Advertisement
ಕಪ್ಪು ಸೈನಿಕ ನೊಣವು ಒಂದು ಕೀಟವಾಗಿದ್ದು ಪ್ಲಾಸ್ಟಿಕ್, ಗಾಜು ಹೊರತುಪಡಿಸಿ ಹಣ್ಣು , ತರಕಾರಿ, ಮಾಂಸ ಸೇರಿದಂತೆ ಯಾವುದೇ ಕೃಷಿ ಸಂಬಂಧಿಸಿದ ಹಸಿ ಹಾಗೂ ಒಣ ತ್ಯಾಜ್ಯವನ್ನು ಸಂಪೂರ್ಣವಾಗಿ ಭಕ್ಷಿಸಿ ಕರಗಿಸುವ ಮೂಲಕ ಕನಿಷ್ಠ 2 ತಿಂಗಳಲ್ಲಿ ಸಂಪೂರ್ಣ ಗೊಬ್ಬರವಾಗಿಸುವ ವಿಶೇಷ ಶಕ್ತಿ ಹೊಂದಿದೆ. ಮನೆ, ಹೋಟೆಲ್, ರೆಸ್ಟೋರೆಂಟ್, ಅಪಾರ್ಟ್‌ಮೆಂಟ್, ಪುರಸಭೆ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಘನ ತ್ಯಾಜ್ಯ, ಆಹಾರ ಪದಾರ್ಥ ಸೇರಿದಂತೆ ಎಲ್ಲ ವಿಧದ ತ್ಯಾಜ್ಯದ ಮುಕ್ತಿಗೆ ಈ ಕಪ್ಪು ಸೈನಿಕ ಹುಳ ನೆರವಾಗಲಿದೆ.ಮನುಷ್ಯನಿಗೆ ಯಾವುದೇ ರೋಗ ಹರಡದ ಮಾರಕವಲ್ಲದ ಈ ಜೀವಿ ತ್ಯಾಜ್ಯಗಳ ಜೈವಿಕ ವಿಘಟನೆಗೆ ಬ್ಯಾಕ್ಟೀರಿಯಾ ಮಾದರಿಯಲ್ಲಿ ಕೆಲಸ ಮಾಡಲಿದೆ. ಗರಿಷ್ಠ 36 ರಿಂದ 56 ದಿನಗಳವರೆಗೆ ಬದುಕುವ ಈ ಹುಳು 1 ಟನ್ ತಾಜ್ಯದಿಂದ ಕನಿಷ್ಠ 200 ಕೆಜಿ ಗೊಬ್ಬರ ಉತ್ಪಾದಿಸುವ ಸಾಮರ್ಥಯ ಹೊಂದಿದೆ. ಜತೆಗೆ, ಕೋಳಿ, ಜಲಚರ ಪ್ರಾಣಿಗಳಿಗೂ ಆಹಾರ ವಾಗಲಿದೆ.
Related Articles
Advertisement
ಬ್ಲಾಕ್ ಸೋಲ್ಜರ್ ಫ್ಲೈ ಯಾವುದೇ ರೋಗಾಣು ಪಸರಿಸುವುದಿಲ್ಲ. ರಸ್ತೆ ಬದಿಗಳಲ್ಲಿ ಎಸೆದಿರುವ ತ್ಯಾಜ್ಯದ ವಾಸನೆ ತಡೆಯಲಿದೆ. ಚೆನ್ನೈ, ತಮಿಳುನಾಡು, ಕೇರಳ ಸೇರಿದಂತೆ ಮೊದಲಾದ ಕಡೆಗಳಲ್ಲಿ ನೊಣಗಳನ್ನು ಬಳಸಿ ಗೊಬ್ಬರ ಉತ್ಪಾದಿಸಲಾಗುತ್ತಿದೆ. ಹಲವು ಪೋಷಕಾಂಶವುಳ್ಳ ಗೊಬ್ಬರ ಹಣ್ಣು, ತರಕಾರಿ ಸೇರಿದಂತೆ ಹಲವು ವಿಧದ ಮಿಶ್ರಬೆಳೆಗೆ ಪೂರಕವಾಗಿದೆ. ರಾಜ್ಯದಲ್ಲಿಯೂ ರೈತರಿಂದ ಬೇಡಿಕೆ ಇದೆ. ● ಡಾ.ಮಹೇಶ್ ಯಂಡಿಗೆರೆ, ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಬ್ಯೂರೋದ ಪ್ರಧಾನ ವಿಜ್ಞಾನಿ
ಬೆಳೆಸುವುದು ಹೇಗೆ?
ಕಪ್ಪು ಸೈನಿಕ ನೊಣವು ಹನಿ ನೀರು ಕುಡಿದು ಬದು ಕುವ ಸಾಮರ್ಥ್ಯ ಹೊಂದಿದೆ. ಆರಂಭಿಕ ವಾಗಿ ಅವುಗಳನ್ನು ತಂದು ತ್ಯಾಜ್ಯ ತುಂಬಿದ ದೊಡ್ಡದಾದ ತೊಟ್ಟಿ, ಡ್ರಮ್‌ಗಳಲ್ಲಿ ಬಿಡಬೇಕು. ಲಾರ್ವಾ ಹಂತ ದಲ್ಲಿ ಬೆಳೆದು ತ್ಯಾಜ್ಯವನ್ನು ಹೆಚ್ಚಾಗಿ ವಿಘಟಿಸಿ ಗೊಬ್ಬರವಾಗಿಲಿಸದೆ. ಪ್ರತಿ ನೊಣ ಗಳಿಗೆ 5 ರಿಂದ 6 ರೂ. ದರದಲ್ಲಿ ಮಾರಾಟ ಮಾಡಲಾಗುತ್ತಿದ್ದು ಕಡಿಮೆ ಖರ್ಚಿನಲ್ಲಿ ಆದಾಯ ಗಳಿಸಲು ಸಾಧ್ಯವಿದೆ.