Advertisement

ಕಾಂಗ್ರೆಸ್‌-ಬಿಜೆಪಿ “ನಿರುದ್ಯೋಗ’ಸಮರ

12:30 AM Feb 01, 2019 | |

ಹೊಸದಿಲ್ಲಿ: ದೇಶದಲ್ಲಿನ ನಿರುದ್ಯೋಗ ಸಮಸ್ಯೆಗೆ ಸಂಬಂಧಿಸಿದ ಸರ್ವೆಯೊಂದರ ವರದಿ ಸೋರಿಕೆಯಾಗಿರುವುದು ಈಗ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು “ಹಿಟ್ಲರ್‌’ ಎಂದು ಕರೆದರೆ, ರಾಹುಲ್‌ ಗಾಂಧಿಯವರನ್ನು “ಮುಸೊಲೋನಿ’ ಎಂದು ಬಿಜೆಪಿ ಜರೆದಿದೆ. ಈ ಮೂಲಕ ಇತಿಹಾಸದ ಕುಖ್ಯಾತ ಸರ್ವಾಧಿ ಕಾರಿಗಳ ಹೆಸರುಗಳನ್ನು ಬಳಸಿಕೊಂಡು ವಾಕ್ಸಮರ ನಡೆಸಲಾಗಿದೆ. 

Advertisement

ನ್ಯಾಶನಲ್‌ ಸ್ಯಾಂಪಲ್‌ ಸರ್ವೆ ಕಚೇರಿಯು 2017ರ ಜುಲೈಯಿಂದ 2018ರ ಜೂನ್‌ ವರೆಗೆ ನಡೆಸಿದ ಸಮೀಕ್ಷೆಯ ವರದಿಯನ್ನು ಸರಕಾರ ಬಹಿರಂಗ ಪಡಿಸಿರಲಿಲ್ಲ. ಆದರೆ ಗುರುವಾರ ವರದಿಯ ಮಾಹಿತಿಯು ಸೋರಿಕೆಯಾಗಿದ್ದು, ದೇಶದ ನಿರುದ್ಯೋಗ ಪ್ರಮಾಣವು 45 ವರ್ಷಗಳಲ್ಲೇ ಅತ್ಯಧಿಕ ಮಟ್ಟಕ್ಕೇರಿದ್ದು, ಇದು ಶೇ.6.1ರಷ್ಟಿದೆ. ಅಲ್ಲದೆ, 2017- 18ರಲ್ಲೇ 6.5 ಕೋಟಿ ಯುವಕರು ನಿರುದ್ಯೋಗಿಗಳಾಗಿದ್ದಾರೆ ಎಂಬ ವಿಚಾರವನ್ನು ಬಹಿರಂಗಪಡಿಸಿದೆ. “ಬ್ಯುಸಿನೆಸ್‌ ಸ್ಟಾಂಡರ್ಡ್‌’ ಈ ಬಗ್ಗೆ ವರದಿ ಪ್ರಕಟಿಸಿದೆ. ಈ ವರದಿಯನ್ನು ಇನ್ನೂ ಬಹಿರಂಗ ಪಡಿಸದಿರುವುದನ್ನು ವಿರೋಧಿಸಿ ಸೋಮವಾರವಷ್ಟೇ ಎನ್‌ಎಸ್‌ಸಿಯಇಬ್ಬರು ಸದಸ್ಯರು ರಾಜೀನಾಮೆ ನೀಡಿದ್ದರು.ಇದಾದ ಬಳಿಕ ಈ ವಿಷಯವು ಹೆಚ್ಚಿನ ಗಮನ ಸೆಳೆದಿತ್ತು. 

ಬಿಜೆಪಿ -ಕಾಂಗ್ರೆಸ್‌ ವಾಕ್ಸಮರ
ಈ ವರದಿ ಸೋರಿಕೆಯಾಗುತ್ತಿದ್ದಂತೆ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹರಿಹಾಯ್ದಿದ್ದಾರೆ. ದಬ್ಟಾಳಿಕೆಯ (ಹಿಟ್ಲರ್‌) ನಾಯಕ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದಿದ್ದರು. ಆದರೆ, ಈಗ ಸೋರಿಕೆಗೊಂಡ ವರದಿಯು ರಾಷ್ಟ್ರೀಯ ವಿಪತ್ತನ್ನು ಬಹಿರಂಗಪಡಿಸಿದೆ ಎಂದು ಪರೋಕ್ಷವಾಗಿ ಪ್ರಧಾನಿ ಮೋದಿ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ರಾಹುಲ್‌ ಗಾಂಧಿಯವರು ಮುಸೊಲೋನಿಯಂತೆ ದೂರದೃಷ್ಟಿಯಿ ಲ್ಲದ ವ್ಯಕ್ತಿ. ಅವರಿಗೆ ಯಾವ ವಿಚಾರವೂ ಸರಿಯಾಗಿ ಗೊತ್ತಿಲ್ಲ. ಇಪಿಎಫ್ಒ ಬಿಡುಗಡೆ ಮಾಡಿದ್ದ ದತ್ತಾಂಶವು ಉದ್ಯೋಗ ಸೃಷ್ಟಿಯಲ್ಲಿ ಹೆಚ್ಚಳವಾಗಿದೆ ಎಂದು ಹೇಳಿದೆ. ಸರಿಯಾದ ಉದ್ಯೋಗವಿಲ್ಲದ ಮತ್ತು ಸಂಪೂರ್ಣ ನಿರುದ್ಯೋಗಿಯಾಗಿರುವ ವ್ಯಕ್ತಿ ಮಾತ್ರವೇ ಇಂಥ ಸುಳ್ಳು ಸುದ್ದಿಗಳನ್ನು ಹರಡಿಸಲು ಸಾಧ್ಯ ಎಂದು ಟ್ವೀಟ್‌ ಮಾಡಿದೆ.

ವರದಿ ಪರಿಶೀಲಿಸಿಲ್ಲ
ಸೋರಿಕೆಯಾಗಿರುವ ವರದಿಯನ್ನು ಯಾರೂ ಪರಿಶೀಲಿಸಿಲ್ಲ. ಇದೊಂದು ಅಧಿಕೃತ ವರದಿಯೂ ಅಲ್ಲ ಎಂದು ನೀತಿ ಆಯೋಗ ಹೇಳಿದೆ. ಈ ಸಂಬಂಧ ಸ್ಪಷ್ಟನೆ ನೀಡಿರುವ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್‌ ಕುಮಾರ್‌, ಈ ವರದಿಯನ್ನು ಬಳಸಿಕೊಳ್ಳುವುದೂ ಸರಿಯಲ್ಲ ಎಂದಿದ್ದಾರೆ. ಈಗ ಮಾಹಿತಿ ಸಂಗ್ರಹ ವಿಧಾನವೇ ಬದಲಾಗಿದೆ. ಇಂಥ ರೀತಿಯಲ್ಲಿ  ಪರಿಶೀಲನೆ ಮಾಡದ ವರದಿ ಬಗ್ಗೆ ಮಾತನಾಡುವುದು ತಪ್ಪಾಗುತ್ತದೆ ಎಂದು ಹೇಳಿದ್ದಾರೆ. 

ವರದಿಯಲ್ಲೇನಿದೆ?
2017-18ರಲ್ಲಿ  ಭಾರತದ ನಿರುದ್ಯೋಗ ಪ್ರಮಾಣವು 45 ವರ್ಷಗಳಲ್ಲೇ ಅತ್ಯಧಿಕ ಮಟ್ಟಕ್ಕೇರಿದೆ.
1972-73ರ ಬಳಿಕ ನಿರುದ್ಯೋಗದ ಪ್ರಮಾಣವು ಶೇ.6.1ಕ್ಕೆ  ತಲುಪಿರುವುದು ಇದೇ ಮೊದಲು.
ನಗರಪ್ರದೇಶಗಳಲ್ಲಿ  ನಿರುದ್ಯೋಗವು ಶೇ.7.8ರಷ್ಟಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ  ಶೇ.5.3ರಷ್ಟಿದೆ

Advertisement
Advertisement

Udayavani is now on Telegram. Click here to join our channel and stay updated with the latest news.

Next