Advertisement
ಸದ್ಯ ಗುಜರಾತ್ ವಿಧಾನಸಭೆಯಲ್ಲಿ ಬಜೆಟ್ ಅಧಿವೇಶನ ನಡೆಯುತ್ತಿದ್ದು, ಪ್ರಶ್ನೋತ್ತರ ವೇಳೆಯಲ್ಲಿ ಜಾಮ್‌ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿಕ್ರಮ್ ಮಾಡಮ್ ಅವರು ಮಧ್ಯಪ್ರವೇಶಿಸಿ ಮಾತನಾಡಲು ಮುಂದಾದರು. ಅದಕ್ಕೆ ಸ್ಪೀಕರ್ ರಾಜೇಂದ್ರ ತಿವಾರಿ ಆಕ್ಷೇಪ ವ್ಯಕ್ತಪಡಿಸಿದರು. ಅದಕ್ಕೆ ಕಾಂಗ್ರೆಸ್‌ನ ವಿರ್ಜಿ ಥುಮ್ಮರ್ ಆಕ್ಷೇಪಿಸಿ ಗದ್ದಲವೆಬ್ಬಿಸಿದರು.ಅಮರೇಶ್ ಧರ್ ಜತೆಗೆ ಸದನ ಬಾವಿಗೆ ಬಂದು ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದರು. ಇದರಿಂದ ಕ್ರುದ್ಧಗೊಂಡ ಸ್ಪೀಕರ್ ರಾಜೇಂದ್ರ ತಿವಾರಿ ಅವರನ್ನು ಬುಧವಾರ ಮಟ್ಟಿಗೆ ಸಸ್ಪೆಂಡ್ ಮಾಡಿದರು. ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್ ಶಾಸಕ ಪ್ರತಾಪ್ ಧುದತ್ ಬಿಜೆಪಿ ಶಾಸಕರತ್ತ ನುಗ್ಗಿದರು. ಇದೇ ಸಂದರ್ಭದಲ್ಲಿ ಸಸ್ಪೆಂಡ್ ಆದ ಕಾಂಗ್ರೆಸ್ ಶಾಸಕ ಅಮರೀಶ್ ಧರ್ ಮೈಕ್ರೋಫೋನ್ ಬಳಿ ಇದ್ದ ರಾಡ್ ಅನ್ನು ಕಿತ್ತುಕೊಂಡು ಆಡಳಿತ ಪಕ್ಷದ ಶಾಸಕ ಪಾಂಚಾಲ್‌ಗೆ ಹಲ್ಲೆ ಮಾಡಿದ್ದಾರೆ. ಇದರಿಂದಾಗಿ ಸದನವೇ ಕೋಲಾಹಲದಲ್ಲಿ ಮುಳುಗಿತು. ಘಟನೆ ನಡೆದ ಕೂಡಲೇ ಬಿಜೆಪಿ ಶಾಸಕರು ಪಾಂಚಾಲ್‌ರ ರಕ್ಷಣೆಗೆ ಧಾವಿಸಿದರು. ಸ್ಪೀಕರ್ ಅಧಿವೇಶನವನ್ನು ಹತ್ತು ನಿಮಿಷಗಳ ಕಾಲ ಮುಂದೂಡಿದರು. Advertisement
ಗುಜರಾತ್ ವಿಧಾನಸಭೆಯಲ್ಲಿ ಬಿಜೆಪಿ-ಕೈ ಶಾಸಕರ ಮಾರಾಮಾರಿ
07:30 AM Mar 15, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.