Advertisement

ರಾಜ್ಯದಲ್ಲಿ ಇರೋದು ಬಿಜೆಪಿ ಸರ್ಕಾರವಲ್ಲ‌, ಕಾಂಗ್ರೇಸ್ –ಬಿಜೆಪಿ ಸರಕಾರ : ಡಿಕೆಶಿ ವ್ಯಂಗ್ಯ

04:48 PM Jan 25, 2021 | Team Udayavani |

ಮೈಸೂರು: ನಮ್ಮ ಸದಸ್ಯರನ್ನು ಕರೆದುಕೊಂಡು ಹೋಗಿ ಸರ್ಕಾರ ರಚಿಸಿದ್ದಾರೆ. ಆದ್ದರಿಂದ ರಾಜ್ಯದಲ್ಲಿ ಇರೋದು ಬಿಜೆಪಿ ಸರ್ಕಾರವಲ್ಲ‌. ಕಾಂಗ್ರೆಸ್- ಬಿಜೆಪಿ ಸರ್ಕಾರ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

Advertisement

ನಮ್ಮವರನ್ನು ಕರೆದುಕೊಂಡು ಹೋಗಿ ಗಿಫ್ಟ್ ಕೊಟ್ಟಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರ ಸುಭದ್ರವಾಗಿದೆ. ಎಲ್ಲರೂ ಅತ್ಯಂತ ಒಗ್ಗಟ್ಟಿನಿಂದ ಸಹಕಾರ ಕೊಡುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಲೇವಡಿ‌ ಮಾಡಿದರು.

ಈ ಸರ್ಕಾರ ಬಲಿಷ್ಠವಾಗಿದೆ. ಬಹಳಷ್ಟು ಸಂಖ್ಯಾ ಬಲವಿದೆ. ಸರ್ಕಾರದಲ್ಲಿರುವವರು ಎಲ್ಲರೂ ತುಂಬಾ ಒಗ್ಗಟ್ಟಾಗಿದ್ದಾರೆ. ಸರ್ಕಾರದಲ್ಲಿ ಏನೇನು ಗೊಂದಲವಿಲ್ಲ. ಇನ್ನು ಮುಖ್ಯಮಂತ್ರಿಗಳೋ ಬಹಳ ದೊಡ್ಡವರು ಎಂದು ಸರ್ಕಾರದ ಸಂಪುಟ ಪುನರಚನೆ ಹಾಗೂ ಖಾತೆ ಹಂಚಿಕೆ‌ ಗೊಂದಲದ ಬಗ್ಗೆ ಲೇವಡಿ ಮಾಡಿದರು.

ಟ್ರ್ಯಾಕ್ಟರ್‌ ಜಾಥಾ ಕುರಿತು ಮಾತನಾಡಿ, ಜಾಥಾ ತೆರಳುತ್ತಿರುವ ಟ್ರ್ಯಾಕ್ಟರ್‌ಗಳನ್ನು ಪೊಲೀಸರು ಜಪ್ತಿ ಮಾಡಿದರೆ ಅದನ್ನು ಬಿಡಿಸಿಕೊಳ್ಳಲು ನಾವು ಹೋಗುತ್ತೇವೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

ಇದನ್ನೂ ಓದಿ:ಮೂವರು ಸಚಿವರ ಖಾತೆಗಳಲ್ಲಿ ಮತ್ತೆ ಬದಲಾವಣೆ : ಸುಧಾಕರ್ ಗೆ ಮತ್ತೆ ವೈದ್ಯಕೀಯ ಶಿಕ್ಷಣ

Advertisement

ಮೈಸೂರಿನಲ್ಲಿ ಮಾತನಾಡಿದ ಅವರು, ಅನ್ನದಾತರಿಲ್ಲದೆ ನಾವ್ಯಾರೂ ಇರುವುದಿಲ್ಲ. ರೈತರ ಪ್ರತಿಭಟನೆಗೆ ನಮ್ಮ ಸಂಪೂರ್ಣ ಹಕ್ಕಿದೆ. ಹೆದರಿಸಿ ರೈತರ ಬಾಯಿ ಮುಚ್ಚಿಸಬಾರದು. ಹಾಗೊಂದುವೇಳೆ ಅವರನ್ನು ಹೆದರಿಸಿದರೆ ನಾವು ರೈತರ ಬೆಂಬಲಕ್ಕೆ ನಿಲ್ಲುತ್ತೇವೆ. ಬಂಧಿಸಿದರೆ ಜೈಲ್‌ ಬರೋ ಚಳವಳಿ ಮಾಡುತ್ತೇವೆ ಎಂದು ಅವರು ತಿಳಿಸಿದರು.

ಒಂದು ವೇಳೆ ಕಾಂಗ್ರೆಸ್‌ ಪಕ್ಷವೇ ಆಡಳಿತದಲ್ಲಿದ್ದರೆ ರೈತರ ಪ್ರತಿಭಟನೆಗೆ ಅವಕಾಶ ಸಿಗುತ್ತಿತ್ತು. ಆಗಲೂ ನಾವು ರೈತರಿಗೆ ಬೆಂಬಲ ಕೊಡುತ್ತಿದ್ದೆವು ಎಂದು ಅವರು ಹೇಳಿದರು.

ಪೊಲೀಸರೇ ನೀವು ಸರ್ಕಾರದ ಕೈಗೊಂಬೆಯಾಬೇಡಿ. ಎಲ್ಲರಿಗೂ ಒಂದೆ ನ್ಯಾಯ ಕೊಡಿ. ಸುಪ್ರೀಂಕೋರ್ಟ್ ಸಹ ಪ್ರತಿಭಟನೆ ಮಾಡಬೇಡಿ ಎಂದು ಹೇಳಿಲ್ಲ. ನಾಳೆ ರಜಾ ಇದೆ ಯಾವ ಟ್ರಾಫಿಕ್ ಸಮಸ್ಯೆ ಆಗೋಲ್ಲ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next