Advertisement

ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ಕಾಂಗ್ರೆಸ್‌ ಭಿಕ್ಷಾ ಯಾತ್ರೆ

01:01 PM Mar 02, 2020 | Suhan S |

ಅಥಣಿ: ನೆರೆ ಸಂತ್ರಸ್ತರ ಕಣ್ಣೀರು ಒರೆಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಅಥಣಿ ತಾಲೂಕಿನ ಇದುವರೆಗೂ ಯಾವುದೇ ಒಂದು ಗ್ರಾಮಕ್ಕೂ ಪರಿಹಾರ ಬಂದಿಲ್ಲ ಎಂದು ಕ್ರಾಂಗೆಸ್‌ ಮುಖಂಡ ಗಜಾನನ ಮಂಗಸೂಳಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ಸ್ಥಳೀಯ ಕಾಂಗ್ರೆಸ್‌ನಿಂದ ನಡೆದ ಭಿಕ್ಷಾ ಯಾತ್ರೆ ಅಭಿಯಾನದಲ್ಲಿ ಮಾತನಾಡಿದ ಅವರು, ಪ್ರವಾಹಕ್ಕೆ ಸಿಲುಕಿದ ಜನರ ಬದುಕು ಬೀದಿ  ಪಾಲಾಗಿದೆ. ಅದರಲ್ಲೂ ಕೆಲ ಜನರು ಪ್ರಾಣವನ್ನು ಬಿಟ್ಟಿದ್ದಾರೆ. ಅದರಲ್ಲೂ ತಾಲೂಕಿನ ತೀರ್ಥ ಗ್ರಾಮದ ಬಸವರಾಜ ಕಾಂಬಳೆ ಎಂಬ ಬಾಲಕ ಮೃತಪಟ್ಟಿದ್ದು, ಅವನ ತಾಯಿ ವಿಧವೆ. ಸುಮಾರು 4 ತಿಂಗಳಾಯಿತು. ಆ ಬಾಲಕ ಡಿಎನ್‌ಎ ಪರಿಶೀಲನೆಯಾಗಿ. ಆದರೂ ಸಹ ಆ ಕುಟುಂಬಕ್ಕೆ 5 ಲಕ್ಷ ರೂ. ಅನುದಾನ ಬಂದಿಲ್ಲ. ಇನ್ನಾದರೂ ಆ ಕುಟುಂಬ ಸೇರಿದಂತೆ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಹಣ ವತರಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದರು.

ಅಥಣಿ ಬ್ಲಾಕ್‌ ಅಧ್ಯಕ್ಷ ಸಿದ್ಧಾರ್ಥ ಶಿಂಗೆ ಮಾತನಾಡಿ, ಸರ್ಕಾರವು ಆರ್ಥಿಕ ಹಾಗೂ ನೈತಿಕವಾಗಿ ದಿವಾಳಿಯಾಗಿದೆ. ಆಪರೇಶನ್‌ ಕಮಲದ ಮುಖಾಂತರ ತಾಲೂಕಿನ ಇಬ್ಬರೂ ಶಾಸಕರನ್ನ ತಮ್ಮತ್ತ ಸೆಳೆದುಕೊಂಡು ಉಪಚುನಾವಣೆಯಲ್ಲಿ ಸುಳ್ಳು ಭರವಸೆ ಕೊಟ್ಟು ಗೆದ್ದಿದ್ದಾರೆ. ಈಗ ಆ ಯಾವುದೇ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು. ನಂತರ ಅಥಣಿ ಪಟ್ಟಣದ ಅಂಬೇಡ್ಕರ್‌ ವೃತ್ತದಿಂದ ಎಂ.ಜಿ. ಮಾರ್ಕೆಟ್‌ ಸೇರಿ ಹಲವು ಮುಖ್ಯರಸ್ತೆಗಳಲ್ಲಿ ಸಂಚರಿಸಿ ಭಿಕ್ಷಾ ಟನೆ ಮಾಡಲಾಯಿತು. ಸಂಗ್ರಹಗೊಂಡ ಹಣವನ್ನ ಮೃತ ಬಾಲಕ ಬಸವರಾಜ ಕಾಂಬಳೆ ತಾಯಿಗೆ ವಿತರಿಸಲಾಯಿತು.

ಈ ವೇಳೆ ತೆಲಸಂಗ ಬ್ಲಾಕ್‌ ಅಧ್ಯಕ್ಷ ಶ್ರೀಕಾಂತ ಪೂಜಾರಿ, ಮುಖಂಡರಾದ ಸುನೀಲ ಸಂಕ, ರಮೇಶ ಸಿಂದಗಿ, ದರೇಪ್ಪ ಠಕ್ಕಣ್ಣವರ್‌, ನೀಶಾಂತ ದಳವಾಯಿ, ರಾಜು ಜಮಖಂಡಿಕರ, ಸಂಜಯ ಕಾಂಬಳೆ, ರೇಖಾ ಪಾಟೀಲ, ಸುನೀತಾ ಐಹೊಳೆ, ಅಪ್ಪಾಸಾಬ ಅಲಿಬಾದಿ ಸೇರಿದಂತೆ ನೂರಾರು ಕಾರ್ಯಕತ್ರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next