Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಪ್ರೀತಂಗೌಡ ಗಿಮಿಕ್ ಮಾಡುತ್ತಿದ್ದಾರೆ. ಬಿಜೆಪಿ ರ್ಯಾಲಿಗೆ ಸೇರಿದವರು ಬಂದ ಜನ ಅಲ್ಲ ತಂದ ಜನ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಕ್ಷೇತ್ರದ ಹೊರಗಿನಿಂದ ಕರೆತಂದ ಜನರನ್ನು ಸೇರಿಸಿ ನಗೆಪಾಟಲಿಗೆ ಗುರಿಯಾಗಿದ್ದಾರೆ ಎಂದು ದೂರಿದರು.
Related Articles
Advertisement
ಅಭಿವೃದ್ಧಿಗೆ ಶ್ರಮಿಸುವೆ: ಜಿಲ್ಲೆಯ ಅಭಿವೃದ್ಧಿಗೆ ಕಾಂಗ್ರೆಸ್ ತನ್ನದೆ ಕೆಲಸ ಮಾಡಿದೆ. ಒಬ್ಬ ಯುವಕನ ಕೈಹಿಡಿಯಬೇಕು ಎನ್ನುವ ಕಾರಣಕ್ಕೆ ಜನತೆ ಆಶೀರ್ವದಿಸುವರು ಎಂಬ ವಿಶ್ವಾಸವಿದೆ ಎಂದರು. ಹಾಸನ ನಗರದ ಹಸಿರೀಕರಣ, ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸುವುದು, ಮೂಲ ಸೌಕರ್ಯ, ನಿರುದ್ಯೋಗಿಗಳಿಗೆ ಉದ್ಯೋಗ ಹಾಗೂ ಐಟಿಬಿಟಿ ಕಂಪನಿಗಳನ್ನು ತರಲು ಪ್ರಯತ್ನಿಸುತ್ತೇನೆ ಎಂದು ಬನವಾಸೆ ರಂಗಸ್ವಾಮಿ ಆವರು ಹೇಳಿದರು.
ಜನತೆಯ ಆಶೀರ್ವಾದ ಹಾಗೂ ಕಾರ್ಯಕರ್ತರ ಸಹಕಾರದಿಂದ ಕಾಂಗ್ರೆಸ್ ಗುರುತಿಸಿ ಟಿಕೆಟ್ ಘೋಷಿಸಿದೆ. ಇದಕ್ಕೆ ಕಾರಣರಾದ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಹಾಸನ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಕಯ್ಯೂಂ, ಜಿಲ್ಲಾ ಕಾಂಗ್ರೆಸ್ ಎಸ್ಸಿ, ಎಸ್ಟಿ ವಿಭಾಗದ ಅಧ್ಯಕ್ಷ ಮಲ್ಲಿಗೆವಾಳು ದೇವಪ್ಪ, ಹಾಸನ ನಗರಸಭೆ ಮಾಜಿ ಸದಸ್ಯ ಹೊಸಕೊಪ್ಪಲು ರವಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
400 ಕೋಟಿ ಲೂಟಿ: ಗಂಭೀರ ಆರೋಪ : ಹಾಸನ ನಗರದಲ್ಲಿ ಕೇವಲ ಬಾರ್‌ಗಳನ್ನು ತೆರೆದಿದ್ದೇ ಶಾಸಕರ ಸಾಧನೆಯಾಗಿದೆ. ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಹೊಸ ಬಡಾವಣೆ ನಿರ್ಮಾಣದಲ್ಲಿ 400 ಕೋಟಿ ಲೂಟಿ ಆಗಿದೆ. ಸಿಎ ನಿವೇಶನಗಳನ್ನು ವಸತಿ ನಿವೇಶನಗಳನ್ನಾಗಿ ಪರಿವರ್ತಿಸಿ ದಂಧೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ನಡೆಯದ ಭ್ರಷ್ಟಾಚಾರ ಹಾಸನದಲ್ಲಿ ನಡೆದಿವೆ. ಧರ್ಮ, ಧರ್ಮ ಜಾತಿಗಳ ನಡುವೆ ವೈಷಮ್ಯವನ್ನು ಪ್ರೀತಂಗೌಡ ಸೃಷ್ಟಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಬನವಾಸೆ ರಂಗಸ್ವಾಮಿ ಆರೋಪಿಸಿದರು.