ಬಾಗಲಕೋಟೆ: ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರಿಗೆ ಎದೆಯೊಡ್ಡಿ ಹೋರಾಟ ಮಾಡಿದವರು ಕಾಂಗ್ರೆಸ್ಸಿಗರು. ಇಂತಹ ಪಕ್ಷಕ್ಕೆ ಇದೀಗ 136 ವರ್ಷ ಸಂದಿದ್ದು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪಕ್ಷದ ಕಾರ್ಯಕರ್ತರು ಎಂದು ಹೇಳಿಕೊಳ್ಳಲು ನಮಗೆಲ್ಲ ಹೆಮ್ಮೆ ಇದೆ ಎಂದು ಪಕ್ಷದ ಜಿಲ್ಲಾ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಹೇಳಿದರು. ಕಾಂಗ್ರೆಸ್ ಸಂಸ್ಥಾಪನಾ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಸದ್ಭಾವನಾ ನಡಿಗೆ ಕಾರ್ಯಕ್ರಮದಲ್ಲಿ ಅವರು ಅವರು ಮಾತನಾಡಿದರು.
ಮಾಜಿ ಸಚಿವ ಎಚ್.ವೈ. ಮೇಟಿ ಮಾತನಾಡಿ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ನಾಯಕತ್ವದಲ್ಲಿ ಕೈಗೆ ಕೈ ಜೋಡಿಸಿ ನವ ಕರ್ನಾಟಕವನ್ನೊಳಗೊಂಡ ನವಭಾರತವನ್ನು ನಿರ್ಮಿಸಲು ಸಂಕಲ್ಪ ಮಾಡಬೇಕು ಎಂದರು. ವಿಧಾನ ಪರಿಷತ್ ಸದಸ್ಯ ಆರ್.ಬಿ. ತಿಮ್ಮಾಪುರ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ದೇಶ ಉಳಿಸಿದ ಮತ್ತು ಸ್ವಾತಂತ್ರ್ಯ ನಂತರ ದೇಶ ಕಟ್ಟಿದ ಇತಿಹಾಸವೂ ಕಾಂಗ್ರೆಸ್ ಪಕ್ಷದಾಗಿದೆ ಎಂದು ಹೇಳಿದರು.
ಮುಖಂಡ ಎ.ಎ. ದಂಡಿಯಾ ಮಾತನಾಡಿದರು. ಮಾಜಿ ಶಾಸಕ ಜೆ.ಟಿ. ಪಾಟೀಲ, ಭೀಮಸೇನ ಚಿಮ್ಮನಕಟ್ಟಿ, ಕೆಪಿಸಿಸಿ ಸದಸ್ಯ ನಿಂಗನಗೌಡ ಪಾಟೀಲ, ಎಚ್.ಎಲ್. ರೇಶ್ಮಿ, ಮುಂಚೂಣಿ ಘಟಕಗಳ ಜಿಲ್ಲಾಧ್ಯಕ್ಷ ನಿಂಗಪ್ಪ ಗಸ್ತಿ, ಶ್ರೀಶೈಲ ಅಂಟಿನ, ರಾಜು ಮನ್ನಿಕೇರಿ, ರಕ್ಷಿತಾ ಈಟಿ, ಕಾಶಿನಾಥ ಹುಡೇದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ ಹದ್ಲಿ, ಹನಮಂತ ರಾಕುಂಪಿ, ಆನಂದ ಶಿಲ್ಪಿ, ಶಿವಾನಂದ ಉದಪುಡಿ, ಡಾ|ದೇವರಾಜ ಪಾಟೀಲ, ಸಂತೋಷ ಬಗಲಿದೇಸಾಯಿ, ಗಿರೀಶ ಅಂಕಲಗಿ, ಬ್ಲಾಕ್ ಅಧ್ಯಕ್ಷ ಹಾಜಿಸಾಬ ದಂಡಿನ, ರಾಜು ಜವಳಿ, ಮುತ್ತು ಜೋಳದ, ಶ್ರವಣ ಖಾತೇದಾರ, ರೇಣುಕಾ ನ್ಯಾಮಗೌಡ, ಸಿಕಂದರ ಅಥಣಿ, ಬಸವರಾಜ ಹೂವಿನಹಳ್ಳಿ, ಶಶಿಕಾಂತ ಪೂಜಾರ, ವೀರೇಶ ಹುಂಡೆಕಾರ, ಅಂದಾನೆಪ್ಪ ಶೆಟ್ಟರ, ವಿಜಯ ಮುಳ್ಳೂರ, ಜಮೇಲಾ ಮನಿಯಾರ ಉಪಸ್ಥಿತರಿದ್ದರು.
ಕೋವಿಡ್ ಹರಡುವಿಕೆ ತಡೆಯುವ
ಉದ್ದೇಶದಿಂದ ರಾತ್ರಿ ಕರ್ಫ್ಯೂ ಹೇರಿರುವ ರಾಜ್ಯ ಸರ್ಕಾರದ ನೀತಿಯನ್ನು ನಾಗರಾಜ ಹದ್ಲಿ ತೀವ್ರವಾಗಿ ಖಂಡಿಸಿದ್ದಾರೆ. ರಾತ್ರಿ ರಸ್ತೆಯಲ್ಲಿ ಹೆಚ್ಚು ಜನ ಇರುವುದಿಲ್ಲ. ಜನ ಸೇರುವಂತಹ ಕಾರ್ಯಕ್ರಮ ಕಡಿಮೆ ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಹೊರತು ರಾತ್ರಿಯ ಕರ್ಫ್ಯೂ ಹೇರುವುದರಿಂದ ಅಲ್ಲ. ರಾಜಕೀಯ ಸಭೆಗಳಿಗೆ ಜನರು ಸೇರುವುದಿಲ್ಲವೆ ? ರಾತ್ರಿ ಕರ್ಫ್ಯೂ ಹೇರಿ ಹೋಟೆಲ್ ಉದ್ಯಮ ಇನ್ನಿತರ ದುಡಿಯುವ ವರ್ಗಕ್ಕೆ ರಾಜ್ಯ ಸರ್ಕಾರ ಹೊಟ್ಟೆ ಮೇಲೆ ಹೊಡೆಯುುತ್ತಿದೆ. ಆದಕಾರಣ ರಾಜ್ಯ ಸರ್ಕಾರ ಮರುಚಿಂತನೆ ಮಾಡಿ ರಾತ್ರಿ ಹೇರಿರುವ ಕರ್ಫ್ಯೂ ತೆಗೆಯಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ಜನ ಬಂಡಾಯ ಏಳುವ ದಿನ ದೂರವಿಲ್ಲ ಎಂದು ಹೇಳಿದ್ದಾರೆ.