ಬೆಂಗಳೂರು: ಇಡೀ ದೇಶವನ್ನೇ ತುದಿಗಾಲಲ್ಲಿ ನಿಲ್ಲಿಸಿದ್ದ ಗುಜರಾತ್ ಚುನಾವಣಾ ಫಲಿತಾಂಶದಲ್ಲಿ ನಿರೀಕ್ಷಿಸಿದಂತೆ ಬಿಜೆಪಿ ಜಯಗಳಿಸಿದ್ದು ರಾಜ್ಯ ಕಾಂಗ್ರೆಸ್ ನಲ್ಲಿ ತಳಮಳಕ್ಕೆ ಕಾರಣವಾಗಿದೆ. ಗುಂಡ್ಲುಪೇಟೆ ಮತ್ತು ನಂಜನಗೂಡು ಉಪ ಚುನಾವಣೆ ಗೆದ್ದ ವಿಶ್ವಾಸದಲ್ಲಿಯೇ 2018ರ ಚುನಾವಣೆಗೆ ಸಿದಟಛಿತೆ ಮಾಡಿಕೊಳ್ಳುತ್ತಿರಾಜ್ಯ ಕಾಂಗ್ರೆಸ್ ನಾಯಕರಿಗೆ ಗುಜರಾತ್ ಚುನಾವಣೆ ಫಲಿತಾಂಶ ಬರ ಸಿಡಿಲಿನಂತೆ ಬಂದೆರಗಿದೆ.
ಗುಜರಾತ್ ಚುನಾವಣೆಗೂ ರಾಜ್ಯದ ಚುನಾವಣೆಗೆ ಯಾವುದೇ ಸಂಬಂಧವಿಲ್ಲ ಎಂದು ರಾಜ್ಯ ಕಾಂಗ್ರೆಸ್ ನಾಯಕರು
ಹೇಳಿಕೊಳ್ಳುತ್ತಿದ್ದರೂ ಅದರ ಆಂತರಿಕ ಪರಿಣಾಮದ ಬಗ್ಗೆ ಅರಿತಿರುವ ನಾಯಕರು ಈಗಿನಿಂದಲೇ ತಮ್ಮ ಚುನಾವಣಾ ತಂತ್ರವನ್ನು ಬಲಗೊಳಿಸಲು ನಿರ್ಧರಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ ಸೇರಿ ರಾಜ್ಯ ನಾಯಕರಿಗೆ ದೂರವಾಣಿ ಮೂಲಕ ಪಕ್ಷದ ಚಟುವಟಿಕೆಗಳನ್ನು ಚುರುಕುಗೊಳಿಸುವಂತೆ ಸೂಚಿಸಿದ್ದಾರೆ. ಅದರ ಪರಿಣಾಮ ರಾಜ್ಯ ಚುನಾವಣೆ ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್ ಚುನಾವಣಾ ಸಮಿತಿ ಸಭೆ ಕರೆದು ಮುಂದಿನ ಪ್ರಚಾರ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದೇ 21 ರಿಂದ ಪರಮೇಶ್ವರ್ ನೇತೃತ್ವದಲ್ಲಿ ಪ್ರಚಾರ ಆರಂಭಿಸುತ್ತಿರುವ ಆಡಳಿತ ಪಕ್ಷದಲ್ಲಿ ಸಿಎಂ ಹಾಗೂ ತಮ್ಮ ನಡುವಿನ ಆಂತರಿಕ ಭಿನ್ನಾಭಿಪ್ರಾಯ ಉಲ್ಬಣಗೊಳ್ಳದಂತೆ ಎಚ್ಚರಿಕೆಯಿಂದ ಮುನ್ನಡೆಯುವ ಸಂದಿಗಟಛಿ ಪರಿಸ್ಥಿತಿ ನಿರ್ಮಾಣವಾಗಿದೆ.
ಇದುವರೆಗೂ ನಡೆದ ಪಕ್ಷದ ಆಂತರಿಕ ಸಮೀಕ್ಷೆಗಳಲ್ಲಿ ಸ್ಪಷ್ಟ ಬಹುಮತ ಪಡೆಯದಿದ್ದರೂ ಬಿಜೆಪಿಗಿಂತ ಹೆಚ್ಚಿನ ಸ್ಥಾನ ಗೆಲ್ಲುತ್ತದೆ ಎಂಬ ವಿಶ್ವಾಸದಲ್ಲಿ ಆಡಳಿತ ಪಕ್ಷದ ನಾಯಕರಿದ್ದರು. ಆದರೆ, ಗುಜರಾತ್ ಚುನಾವಣೆ ಫಲಿತಾಂಶ ರಾಜ್ಯದ ಮತದಾರರ ಮೇಲೂ ಪರಿಣಾಮ ಬೀರುವುದನ್ನು ಅಲ್ಲ ಗಳೆಯುವಂತಿಲ್ಲ.
ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಅಗಮಿಸಿದರೆ, ರಾಜಕೀಯ ಚಿತ್ರಣ ಬದಲಾಗುವ ಲಕ್ಷಣ ಹೆಚ್ಚಿದೆ. ಅಲ್ಲದೇ ಗುಜರಾತ್ ಚುನಾವಣೆ ಫಲಿತಾಂಶ ನೋಡಿ ಪಕ್ಷಾಂತರ ಮಾಡಲು ನಿರ್ಧರಿಸಿರುವ ಅನೇಕ ಕೈ ನಾಯಕರು ಮುಂದಿನ ದಿನಗಳಲ್ಲಿ ಬಿಜೆಪಿ ಕಡೆಗೆ ಹೆಜ್ಜೆ ಹಾಕುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಆ ರೀತಿಯ ಸಾಮೂಹಿಕ ವಲಸೆ ಹೋಗುವುದನ್ನೂ ತಡೆಯುವ ಬಗ್ಗೆ ಕೈ ನಾಯಕರನ್ನು ಆತಂಕಕ್ಕೀಡು ಮಾಡುವಂತಿದೆ. ಸಿಎಂ ಸಿದ್ದರಾಮಯ್ಯ ಕೂಡ ಮತ್ತೆ ತಾವೇ ಅಧಿಕಾರಕ್ಕೆ ಬರುವ ಹುಮ್ಮಸ್ಸಿನಿಂದ ಪಕ್ಷದ ಮನವಿ ಲೆಕ್ಕಿಸದೇ ಸರ್ಕಾರಿ ಯಾತ್ರೆ ಕೈಗೊಂಡಿದ್ದು, ಇನ್ನು ಮುಂದೆ ಬಿಜೆಪಿಯ ಕುರಿತ ಅವರ ಮಾತಿನ ವರಸೆ ಬದಲಾಗುವ ಸಾಧ್ಯತೆ ಹೆಚ್ಚಿದೆ. ಅಲ್ಲದೆ ಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಹೋದರೆ ಮತದಾರನ ಮುನಿಸಿಗೆ ಕಾರಣವಾಗುವ ಸಾಧ್ಯತೆಯನ್ನು ಅರಿತು ಮುನ್ನಡೆಯುವ ಬಗ್ಗೆ ಆಲೋಚಿಸುವಂತಿದೆ.
– ಶಂಕರ್ ಪಾಗೋಜಿ