Advertisement

ನನ್ನ ಪರ ಕಾಂಗ್ರೆಸ್‌ ಕಾರ್ಯಕರ್ತರು ಚುನಾವಣೆಯಲ್ಲಿ ಕೆಲಸ ಮಾಡಿದ್ರು : ಮಂಜು

10:33 AM Apr 20, 2019 | keerthan |

ಹಾಸನ: ಶಾಸಕ ಪ್ರೀತಂ ಜೆ.ಗೌಡ ಅವರು ನನ್ನ ವಿರುದ್ಧ ಮಾತನಾಡಿದ್ದು ನಿಜ. ಅದು ಚುನಾವಣೆಗೆ ಮೊದಲು. ಇದನ್ನು ಪ್ರೀತಂ ಜೆ.ಗೌಡ ಅವರೇ ಖಚಿತಪಡಿಸಿದರು ಎಂದು ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ,
ಮಾಜಿ ಸಚಿವ ಎ.ಮಂಜು ಸ್ಪಷ್ಟಪಡಿಸಿದರು.

Advertisement

ಎ.ಮಂಜು ಅವರನ್ನು ಸೋಲಿಸುವ ಸಂಬಂಧ ಪಕ್ಷದ ಕಾರ್ಯಕರ್ತ ರೊಬ್ಬರೊಂದಿಗೆ ಪ್ರೀತಂ ಜೆ.ಗೌಡ ಅವರು ನಡೆಸಿದ ಫೋನ್‌ ಸಂಭಾಷಣೆಯ ಆಡಿಯೋ ಕಳೆದ ವಾರ ವೈರಲ್‌ ಆಗಿತ್ತು. ಎ.ಮಂಜು ಗೆದ್ದರೆ ಅವರೇ ನಾಯಕರಾಗಿ ಮೆರೀತಾರೆ ಎಂದು ಪ್ರೀತಂ ಜೆ. ಗೌಡ ಅವರು ಎ.ಮಂಜು ಅವರ ವಿರುದ್ಧ ಮಾತನಾಡಿದ್ದರು.

ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಎ.ಮಂಜು ಅವರು, ನಾನು
ಬಿಜೆಪಿ ಅಭ್ಯರ್ಥಿಯಾಗುವ ಮೊದಲು ಪ್ರೀತಂ ಜೆ.ಗೌಡ ಮಾತನಾಡಿದ್ದ ಆಡಿಯೋ ವೈರಲ್‌ ಆಗಿತ್ತು. ಆನಂತರ ಪ್ರೀತಂ ಜೆ.ಗೌಡ ಅವರೇ ನನ್ನ ಬಳಿ ಬಂದು ಅದು ಹಳೆಯ ಸಂಭಾಷಣೆ ಎಂದು ಹೇಳಿದ್ದರು. ಆನಂತರ ಪ್ರೀತಂ ಜೆ.ಗೌಡ ಅವರು ನನ್ನ ಪರವಾಗಿ ಕೆಲಸ ಮಾಡಿದ್ದಾರೆ. ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಪ್ರೀತಂಗೌಡ ಶಾಸಕ. ವಿಧಾನ ಸಭಾ ಚುನಾವಣೆ ಬಂದರೂ ನಾನು ಅರಕಲ ಗೂಡು ಕ್ಷೇತ್ರದವನು. ಪ್ರೀತಂ ಜೆ.ಗೌಡ ಹಾಸನ ಕ್ಷೇತ್ರದವರು. ನಾನು ಅವರಿಗೆ ಪ್ರತಿಸ್ಪರ್ಧಿಯಲ್ಲ. ಹಾಗಾಗಿ ಅವರು
ನನ್ನ ವಿರುದ್ಧ ಮಾತ ನಾಡೋಲ್ಲ ಎಂದರು.

ಕಾಂಗ್ರೆಸ್‌ ಕಾರ್ಯಕರ್ತರ ನೆರವು: ಈ ಚುನಾವಣೆಯಲ್ಲಿ ನನ್ನ ಪರವಾಗಿ ಬಹುಪಾಲು ಕಾಂಗ್ರೆಸ್‌ ಕಾರ್ಯಕರ್ತರು ಕೆಲಸ ಮಾಡಿದ್ದಾರೆ. ವಿಶೇಷವಾಗಿ ಪರಿಶಿಷ್ಟ ಸಮುದಾಯದವರು ನನಗೆ ಬೆಂಬಲ ನೀಡಿದ್ದಾರೆ. ಬಿಜೆಪಿಯವರು
ಹಗಲಿರಳು ಕೆಲಸ ಮಾಡಿದ್ದಾರೆ. ಹಾಗಾಗಿ ನನಗೆ ಈ ಚುನಾವಣೆಯಲ್ಲಿ ಬಹುದೊಡ್ಡ ಶಕ್ತಿ ಬಂದಿತು. ನನ್ನ ಪರವಾಗಿ ಕೆಲಸ ಮಾಡಿದ ಎಲ್ಲರಿಗೂ ಧನ್ಯವಾದ. ಬಿಜೆಪಿ ಮತ್ತು ಕಾಂಗ್ರೆಸ್‌ ಸೇರಿ ಕುಟುಂಬ ರಾಜಕಾರಣದ ವಿರುದ್ಧ
ಹೋರಾಟ ನಡೆಸಿದ್ದು, ಜೆಡಿಎಸ್‌ನ್ನು ಮಣಿಸಿ ನಾನು ಸಂಸತ್‌ ಪ್ರವೇಶ ಮಾಡುವ ವಿಶ್ವಾಸವಿದೆ ಎಂದು ಎ.ಮಂಜು ಅವರು ಹೇಳಿದರು.

ಕಡೂರಿನಲ್ಲಿ ಕಡಿಮೆ ಮತದಾನ: 2014 ರ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ವಿರುದ್ಧ ಸ್ಪರ್ಧಿಸಿದ್ದ ನನಗೆ ಕಡೂರು ವಿಧಾನಸಭಾ ಚುನಾವಣೆ ಯಲ್ಲಿ ಸುಮಾರು 17 ಸಾವಿರ ಬಹುಮತ
ಬಂದಿತ್ತು. ಈ ಬಾರಿ ಆ ಕ್ಷೇತ್ರದಲ್ಲಿ ಮತದಾನ ಞಕಡಿಮೆ ಯಾಗಿದೆ. ಅದಕ್ಕೆ ಕಾರಣ ಅಲ್ಲಿ ನನ್ನ ಪರವಾಗಿ ಹೋರಾಟ ಮಾಡುತ್ತಿದ್ದ ಲಿಂಗಾಯತ ಸಮುದಾಯದ ಮುಖಂಡ ಶಿವಕುಮಾರ್‌ ಅವರು ಚುನಾವಣೆಗೆ 2 ದಿನ ಮೊದಲು ನಿಧನರಾದರು. ಆದರೂ ಆ ಕ್ಷೇತ್ರದಲ್ಲಿ ನನಗೆ ಈ ಬಾರಿಯೂ ಬಹುಮತ ಬರಲಿದೆ ಎಂದರು

Advertisement

ಗೌಡ್ರು ಹಾಸನದಿಂದ ಸ್ಪರ್ಧಿಸಬೇಕಿತ್ತು: ಮಾಜಿ ಪ್ರಧಾನಿ ದೇವೇಗೌಡರು ಹಾಸನ ಜಿಲ್ಲೆ ಯಲ್ಲಿ ರಾಜಕಾರಣ ಮಾಡಿ ಉನ್ನತ ಸ್ಥಾನಕ್ಕೇರಿರುವ ದೇವೇಗೌಡರು ಹಾಸನ ಲೋಕಸಭಾ ಕ್ಷೇತ್ರ ದಿಂದ 5 ಬಾರಿ ಗೆದ್ದಿದ್ದರು. ಅವರ ವಯೋಮಾನದ ದೃಷ್ಟಿಯಿಂದ ಅವರಿಗೆ ಇದು ಕೊನೆಯ ಚುನಾವಣೆ. ಹಾಗಾಗಿ ಈ ಬಾರಿ ಹಾಸನ ಲೋಕಸಭಾ ಕ್ಷೇತ್ರದಿಂದಲೇ ಅವರು ನಿಂತು ಗೆಲ್ಲಬೇಕಾಗಿತ್ತು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next