Advertisement

ಕಾಂಗ್ರೆಸ್‌ ಕಾರ್ಯಕರ್ತರು ಬಿಜೆಪಿಗೆ ಬರಲಿ: ಕೆವಿ ಆಹ್ವಾನ

01:00 PM Mar 10, 2022 | Team Udayavani |

ಸಿಂಧನೂರು: ರಾಷ್ಟ್ರೀಯ ಪಕ್ಷವೆಂದು ಹೇಳಿಕೊಳ್ಳುವ ಕಾಂಗ್ರೆಸ್‌ನಲ್ಲಿ ರಾಜ್ಯ ಮಟ್ಟದಲ್ಲೂ ಗುಂಪುಗಾರಿಕೆ. ಸ್ಥಳೀಯ ಮಟ್ಟದಲ್ಲಿ ಜಗಳ ಆರಂಭವಾಗಿದೆ. ಇದರಿಂದ ಗೊಂದಲಕ್ಕೆ ಸಿಲುಕಿರುವ “ಕೈ’ ಕಾರ್ಯಕರ್ತರು ಬಿಜೆಪಿಗೆ ಬಂದರೆ ಸ್ವಾಗತಿಸಲಾಗುವುದು ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹೇಳಿದರು.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಸಿಂಧನೂರು ಕಾಂಗ್ರೆಸ್‌ ಜಗಳ ಈಗಾಗಲೇ ತಾರಕಕ್ಕೇರಿದೆ. ಬಣದ ಜಗಳದಲ್ಲಿ ಕಾರ್ಯಕರ್ತರು ಗೊಂದಲ್ಲಿರುವುದಾಗಿ ಹೇಳುತ್ತಿದ್ದಾರೆ. ಅಂಥವರಿಗೆ ನಮ್ಮ ಮುಕ್ತ ಆಹ್ವಾನವಿದೆ. ಸುಂದರ ಸಿಂಧನೂರು ತಾಲೂಕು ನಿರ್ಮಾಣದ ನಿಟ್ಟಿನಲ್ಲಿ ನಮ್ಮೊಂದಿಗೆ ಕೈ ಜೋಡಿಸಬಹುದು. ತಾಲೂಕಿನ ಹಿತವನ್ನು ಬಯಸುವ ಕಾರ್ಯಕರ್ತರು ಅಲ್ಲಿದ್ದುಕೊಂಡು ಕಿತ್ತಾಟ ನೋಡುವ ಬದಲು, ನಮ್ಮಲ್ಲಿಗೆ ಬರಬಹುದು ಎಂದರು.

ಡಿಕೆಶಿಗೆ, ಸಿದ್ದುಗೆ ಹೊಂದಾಣಿಕೆಯಿಲ್ಲ

ಸಿಂಧನೂರಿನಲ್ಲಿ ಹೇಗೆ ಹೊಂದಾಣಿಕೆ ಯಿಲ್ಲವೋ, ರಾಜ್ಯಮಟ್ಟದಲ್ಲೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಬಣಗಳಿವೆ. ಅಲ್ಲಿಯೂ ಪಕ್ಷ ಸರಿಯಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕಾರ್ಯಕರ್ತರಿಗೆ ಬಿಜೆಪಿಯೇ ಪರಿಹಾರ ಎಂದರು.

ನಿರ್ಧಾರ ಸ್ಪಷ್ಟಪಡಿಸಲಿ

Advertisement

ಕೊಪ್ಪಳ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಶಿವರಾಜ್‌ ತಂಗಡಗಿ ಅವರು ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ವಿರೋಧ ವ್ಯಕಪಡಿಸಿದ್ದಾರೆ. ಇದು ಅವರೊಬ್ಬರ ತೀರ್ಮಾನವೋ? ಇಲ್ಲವೇ ಕಾಂಗ್ರೆಸ್‌ ಪಕ್ಷದ ನಿರ್ಧಾರವೋ? ಎಂಬುದನ್ನು ಬಹಿರಂಗಪಡಿಸಬೇಕು. ಈ ಬಗ್ಗೆ ರಾಯಚೂರು, ಬಳ್ಳಾರಿ ಜಿಲ್ಲೆಯ ನಾಯಕರು ತಮ್ಮ ನಿಲುವು ಬಹಿರಂಗಪಡಿಸಬೇಕು. 33 ಟಿಎಂಸಿ ಅಡಿ ನೀರು ಸದ್ಬಳಕೆ ಮಾಡಿಕೊಳ್ಳುವ ಬೃಹತ್‌ ಯೋಜನೆಗೆ ವಿರೋಧ ಸಲ್ಲದು ಎಂದರು.

ಪೂಜಪ್ಪ ಪೂಜಾರಿ, ಎಂ.ದೊಡ್ಡ ಬಸವರಾಜ್‌, ವೆಂಕಣ್ಣ ತಿಪ್ಪನಹಟ್ಟಿ, ಸಂಜಯ್‌ ಜೈನ್‌, ಮಹೆಬೂಬ್‌ ಮಂತ್ರಿ, ನಾಗೋಜಿರಾವ್‌ ಮರಾಠ, ಶ್ರೀನಿವಾಸ್‌ ಗೋಮರ್ಸಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next