Advertisement

ಕಟ್ಟಾಯದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಪ್ರತಿಭಟನೆ

09:16 PM Jun 14, 2021 | Team Udayavani |

ಹಾಸನ: ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲಹಾಗೂ ರಸಗೊಬ್ಬರದ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ಕಾರ್ಯಕರ್ತರು ಹಾಸನ ತಾಲೂಕು ಕಟ್ಟಾಯ ಗ್ರಾಮದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.

Advertisement

ಕಟ್ಟಾಯ ಗ್ರಾಮದ ಪೆಟ್ರೋಲ್‌ ಬಂಕ್‌ ಮುಂಭಾಗಕೆಲಕಾಲ ಪ್ರತಿಭಟನೆ ನಡೆಸಿದ ಕಾರ್ಯ ಕರ್ತರು, ಕೊರೊನಾ ಆರ್ಭಟ ಮತ್ತು ಲಾಕ್‌ಡೌನ್‌ನಿಂದಾಗಿ ಜನರು ಜೀವನ ನಡೆಸುವುದೇ ದುಸ್ತರ ವಾಗಿದೆ.ಆದರೂ ಇಂತಹ ಸಂಕಷ್ಟದ ಸಮಯದಲ್ಲಿ ಕೇಂದ್ರದಲ್ಲಿಆಡಳಿತ ನಡೆಸುತ್ತಿರುವ ನರೇಂದ್ರ ಮೋದಿ ನೇತೃತ್ವದಸರ್ಕಾರ ಪದೇ, ಪದೆ ಡೀಸೆಲ್‌, ಪೆಟ್ರೋಲ್‌ ಮತ್ತುಅಡುಗೆ ಅನಿಲ ದರ ಏರಿಕೆ ಮಾಡುತ್ತಲೇ ಬಂದಿದೆ.

ಒಂದು ಲೀ.ಪೆಟ್ರೋಲ್‌ ದರ ಈಗಾಗಲೇ 100ರೂ.ದಾಟಿದೆ. ಡೀಸೆಲ್‌ ದರ 100 ರೂ. ಸನಿಹದಲ್ಲಿದೆ.ಅಡುಗೆ ಅನಿಲದ ಸಿಲಿಂಡರ್‌ ದರ 800 ರೂ.ದಾಟಿದೆಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದಪ್ರತಿಭಟನಾಕಾರರು, ತೈಲ ದರ ಇದೇ ರೀತಿ ಮುಂದುವರಿದರೆ ಮುಂದಿನ ಚುನಾವಣೆಗಳಲ್ಲಿ ದೇಶದಜನರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದುಎಚ್ಚರಿಕೆ ನೀಡಿದರು.ಕಾಂಗ್ರೆಸ್‌ ಮುಖಂಡ, ಜಿಲ್ಲಾ ವಕೀಲರ ಸಂಘದಮಾಜಿ ಅಧ್ಯಕ್ಷ ದೇವರಾಜೇಗೌಡ, ಜಿಪಂ ಮಾಜಿಸದಸ್ಯ ಮಲ್ಲಿಗೆವಾಳು ದ್ಯಾವಪ್ಪ ಅವರು ಪ್ರತಿ ಭಟನೆಯ ನೇತೃತ್ವ ವಹಿಸಿದ್ದರು. ಕಟ್ಟಾಯ ಗ್ರಾಮದಗಿರೀಶ್‌, ಲೋಹಿತ್‌, ಗೋಪಾಲ್‌, ಕಲ್ಲಳ್ಳಿ ಹರೀಶ್‌,ಗೊರೂರು ನಾಗರಾಜು, ಗೊಳೇನಹಳ್ಳಿ ಸುನೀಲ್‌,ಹರೀಶ್‌, ನಾಗರಾಜು, ರಂಗೇಗೌಡ, ಪುಟ್ಟ ಸ್ವಾಮಿ,ಅಶೋಕ್‌ ನಾಯಕರಹಳ್ಳಿ, ಸ್ವಾಮೀಗೌಡ, ಜೆ.ಡಿ.ಜಯಂತಿ, ರವಿಕುಮಾರ್‌ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next