ನವ ದೆಹಲಿ : ಭಾರತ ಹಾಗೂ ಚೀನಾ ಗಡಿ ವಿವಾಧಗಳಿಗೆ ಸಂಬಂಧಪಟ್ಟಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಿನ್ನೆ(ಸೋಮವಾರ, ಆಗಸ್ಟ್ 2) ಮೋದಿ ಹಾಗೂ ಮತ್ತವರ ಗುಲಾಮರು ದೇಶ ಸಾವಿರಾರು ಕಿಲೋಮೀಟರ್ ನಷ್ಟು ಭೂಮಿಯನ್ನು ಚೀನಾಕ್ಕೆ ಬಿಟ್ಟುಕೊಟ್ಟಿದ್ದಾರೆ ಎಂಬ ಹೇಳಿಕೆಗೆ ಇಂದು(ಆಗಸ್ಟ್ 03) ಬಿಜೆಪಿ ತಿರುಗೇಟು ನೀಡಿದೆ.
ರಾಹುಲ್ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿದ ಬಿಜೆಪಿ ನಾಯಕಿ ನೂಪುರ ಶರ್ಮಾ, ಕಾಂಗ್ರೆಸ್ ಪಕ್ಷ ಬೀಜಿಂಗ್ ನ ವಕ್ತಾರನಂತೆ ವರ್ತಿಸುತ್ತಿದೆ. ಮಾತ್ರವಲ್ಲದೇ, ಚೀನಾದ ಕಮ್ಯುನಿಷ್ಟ್ ಪಕ್ಷದಿಂದ ಫಂಡ್ ಪಡೆದಂತೆ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ : ತರಕಾರಿ ಮಾರುವವರ ರೀತಿ…30-40 ಲಕ್ಷ ಬಂಡವಾಳ ಹಾಕೋ ಲಾರಿ ಮಾಲೀಕ ಯಾಕೆ ಯೋಚಿಸಲ್ಲ?
ರಾಹುಲ್ ಗಾಂಧಿಯವರಿಗೆ ಜ್ಞಾನದ ಕೊರತೆಯಿದೆ. ಕಾಂಗ್ರೆಸ್ ಆಡಳಿತದಲ್ಲಿ 43,000 ಚದರ ಕಿಲೋಮೀಟರ್ ಭೂಮಿಯನ್ನು ಚೀನಾಗೆ ಹಸ್ತಾಂತರಿಸಲಾಗಿತ್ತು. ಯಾರು ‘ಹಿಂದಿ-ಚಿನಿ, ಭಾಯ್-ಭಾಯಿ ( ಭಾರತೀಯರು ಮತ್ತು ಚೀನಿಯರು ಸಹೋದರರಂತೆ)? ಎಂದು ಹೇಳಿದ್ದು ನೆನಪಿಲ್ಲವೇ..? “ಕಾಂಗ್ರೆಸ್ ಪಕ್ಷವು ಚೀನಾದ ಕಮ್ಯುನಿಸ್ಟ್ ಪಕ್ಷದಿಂದ ದೇಣಿಗೆ ಪಡೆಯುತ್ತದೆ. ಹಾಗಾಗಿ ಹೀಗೆ ಸುಖಾಸುಮ್ಮನೆ ಬಿಜೆಪಿ ವಿರುದ್ಧ ತಿರುಗಿ ಬೀಳುತ್ತಿದೆ ಎಂದು ಅವರು ಕಿಡಿ ಕಾರಿದ್ದಾರೆ.
ಕಾಂಗ್ರೆಸ್ ಪಕ್ಷ ಕೋಟ್ಯಾಂತರ ರೂಪಾಯಿಗಳನ್ನು ಚೀನಾ ಸರಕಾರದಿಂದ ಪಡೆದಿದೆ. ರಾಜೀವ್ ಗಾಂಧಿ ಅಧಿಕಾರದಲ್ಲಿದ್ದಾಗ, ಕಾಂಗ್ರೆಸ್ ಪಕ್ಷ ಚೀನಾದ ಕಮ್ಯುನಿಷ್ಟ್ ಪಕ್ಷದಿಂದ ಫಂಡ್ ಪಡೆಯುತ್ತಿತ್ತು. ಕಾಂಗ್ರೆಸ್ ಪಕ್ಷ ದೇಶಕ್ಕಾಗಿ ದುಡಿಯುತ್ತಿದೆಯೋ ಅಥವಾ ಭಾರತದಲ್ಲಿದ್ದು, ಚೀನಕ್ಕಾಗಿ ಕೆಲಸ ಮಾಡುತ್ತಿದೆಯೋ ಎನ್ನುವುದು ಅರ್ಥವಾಗುತ್ತಿಲ್ಲ ಎಂದಿದ್ದಾರೆ.
ರಾಹುಲ್ ಗಾಂಧಿ, ನಿನ್ನೆ ಕೇಂದ್ರ ಸರ್ಕಾರದ ವಿರುದ್ಧ, ದೇಶದ ಸಾವಿರಾರು ಕಿಲೋಮೀಟರ್ ಭೂಮಿಯನ್ನು ಚೀನಾಗೆ ಬಿಟ್ಟುಕೊಟ್ಟಿದೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ : ರಾಜ್ಯಸಭಾ ಸ್ಥಾನದ ಆಫರ್ ರಿಜೆಕ್ಟ್ ಮಾಡಿದರೆ ನಟ ಸೋನು ಸೂದ್ ?