Advertisement
ಈಗಾಗಲೇ ಸುನೀಲ ಕನಗೋಳು ನೇತೃತ್ವದ ತಂಡವು ಸುಮಾರು ಎರಡು ತಿಂಗಳ ಹಿಂದೆಯೇ ಕ್ಷೇತ್ರಗಳಿಗೆ ಖುದ್ದು ತೆರಳಿ ಹಲವು ಮಾದರಿ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಸಮೀಕ್ಷೆ ನಡೆಸಿ, ಗ್ರೌಂಡ್ ರಿಪೋರ್ಟ್ ನೀಡಿತ್ತು. ಇದರ ಬೆನ್ನಲ್ಲೇ ಸ್ವತಃ ಎಐಸಿಸಿ ಪ್ರತ್ಯೇಕ ಸಮೀಕ್ಷೆ ನಡೆಸಿ ವರದಿ ತರಿಸಿಕೊಂಡು ತುಲನೆ ಮಾಡಿದೆ. ಈ ನಡುವೆ ಜಿಲ್ಲಾ ಉಸ್ತುವಾರಿಗಳು ಪಕ್ಷದ ಸೂಚನೆ ಮೇರೆಗೆ ವರದಿ ನೀಡಿದ್ದರು. ಅದರಲ್ಲಿ ಮೂರು-ನಾಲ್ಕು ಸಂಭವನೀಯ ಅಭ್ಯರ್ಥಿಗಳನ್ನು ಉಲ್ಲೇಖೀಸಲಾಗಿತ್ತು. ಮತ್ತೂಂದೆಡೆ ಸರಕಾರವೇ ಗುಪ್ತದಳದಿಂದಲೂ ಗೌಪ್ಯ ವರದಿ ತರಿಸಿಕೊಂಡಿದೆ ಎನ್ನಲಾಗಿದೆ.
Related Articles
Advertisement
ಆರೇಳು ಕಡೆ ಕಗ್ಗಂಟುಈ ಮಧ್ಯೆ 28 ಲೋಕಸಭಾ ಕ್ಷೇತ್ರಗಳ ಪೈಕಿ 10 ರಿಂದ 12 ಕ್ಷೇತ್ರಗಳಲ್ಲಿ ತಲಾ ಬಹುತೇಕ ಓರ್ವ ಅಭ್ಯರ್ಥಿ ಹೆಸರು ಶಿಫಾರಸು ಮಾಡಲು ಸಿಎಂ-ಡಿಸಿಎಂ ಹಾಗೂ ರಣದೀಪ್‌ಸಿಂಗ್ ಸುಜೇìವಾಲ ನಡುವೆ ಒಮ್ಮತ ಮೂಡಿದೆ. ಆದರೆ, ತುಮಕೂರು, ಚಾಮರಾಜನಗರ, ಮೈಸೂರು-ಕೊಡಗು ಸೇರಿ ಆರೇಳು ಕ್ಷೇತ್ರಗಳ ವಿಚಾರದಲ್ಲಿ ಇಬ್ಬರೂ ನಾಯಕರ ನಡುವೆ (ಸಿಎಂ-ಡಿಸಿಎಂ) ಒಮ್ಮತ ಮೂಡದ್ದರಿಂದ ಕಗ್ಗಂಟಾಗಿ ಕೂತಿದೆ ಎಂದು ಮೂಲಗಳು ತಿಳಿಸಿವೆ. ಉಳಿದಂತೆ 10 ರಿಂದ 14 ಕ್ಷೇತ್ರಗಳಲ್ಲಿ ಇಬ್ಬರು ಸಂಭವನೀಯ ಅಭ್ಯರ್ಥಿಗಳನ್ನು ಹೈಕಮಾಂಡ್‌ಗೆ ಶಿಫಾರಸು ಮಾಡಲು ಉದ್ದೇಶಿಸಲಾಗಿದೆ. ಈ ಪಟ್ಟಿಯಲ್ಲಿ ಸಚಿವರ ಹೆಸರುಗಳೂ ಸೇರಿವೆ. ಆದರೆ, ಇನ್ಮುಂದೆ ನಡೆಸಲಾಗುವ ಸಮೀಕ್ಷೆ ವರದಿಯನ್ನೂ ಆಧರಿಸಿ ಅಭ್ಯರ್ಥಿಗಳ ಅಂತಿಮ ಪಟ್ಟಿ ಸಿದ್ಧಗೊಳ್ಳಲಿದೆ. ಹೆಚ್ಚು-ಕಡಿಮೆ ಮಾಸಾಂತ್ಯಕ್ಕೆ ಮೊದಲ ಹಂತದಲ್ಲಿ ಕನಿಷ್ಠ ಅರ್ಧದಷ್ಟು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವ ಲೆಕ್ಕಾಚಾರವೂ ಇದೆ ಎನ್ನಲಾಗಿದೆ. ಆದಷ್ಟು ಶೀಘ್ರ ಪಟ್ಟಿ ಅಂತಿಮ: ಡಿಕೆಶಿ
28 ಕ್ಷೇತ್ರಗಳ ಪೈಕಿ ಕನಿಷ್ಠ ಶೇ. 50ರಷ್ಟು ಅಭ್ಯರ್ಥಿಗಳಾದರೂ ಚುನಾವಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಸೂಚನೆ ನೀಡಬೇಕಿದ್ದು, ಈ ಹಿನ್ನೆಲೆಯಲ್ಲಿ ಆದಷ್ಟು ಬೇಗ ಪಟ್ಟಿ ಅಂತಿಮಗೊಳಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು. ಈ ತಿಂಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಲಿದೆಯೇ ಎಂದು ಸುದ್ದಿಗಾರರು ಕೇಳಿದಾಗ, ಆದಷ್ಟು ಬೇಗ ಪಟ್ಟಿ ಅಂತಿಮಗೊಳಿಸಬೇಕು.ಶೇ. 50ರಷ್ಟು ಅಭ್ಯರ್ಥಿಗಳಿಗಾದರೂ ಕೆಲಸ ಆರಂಭಿಸಲು ನಾವು ಸೂಚನೆ ನೀಡಬೇಕಿದೆ’ ಎಂದರು.