Advertisement

ಶರಣಬಸವ ವಿವಿಗೆ ಅಭಿನಂದನೆ ಮಹಾಪೂರ

09:55 AM Sep 04, 2017 | Team Udayavani |

ಕಲಬುರಗಿ: ಶರಣಬಸವೇಶ್ವರ ವಿದ್ಯಾವರ್ಧಕ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಲು ಹಾಗೂ ಈ ಸಂಘದಡಿ ಶರಣಬಸವ ವಿಶ್ವವಿದ್ಯಾಲಯ ಸ್ಥಾಪನೆಯಾಗಲು ಸಂಸ್ಥೆಯ ಸಿಬ್ಬಂದಿಗಳ ಶ್ರಮವೂ ಅಡಗಿದೆ ಎಂದು ಶರಣಬಸವ ವಿವಿ ಕುಲಾಧಿಪತಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪೂಜ್ಯ ಡಾ| ಶರಣಬಸವಪ್ಪ ಅಪ್ಪ ಹೇಳಿದರು.

Advertisement

ಸಂಸ್ಥೆಯ ದೊಡ್ಡಪ್ಪ ಅಪ್ಪ ಸಭಾ ಮಂಟಪದಲ್ಲಿ ರವಿವಾರ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಪ್ರೋ| ಬಿ.ರಾಮರೆಡ್ಡಿ ಹಾಗೂ ಅಭಿಮಾನಿಗಳು ಹಮ್ಮಿಕೊಂಡಿದ್ದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಪ್ರತಿ ಯಶಸ್ಸಿನ ಹಿಂದೆಯೂ ಹಲವು ಜನರ ಶ್ರಮ ಅಡಗಿರುತ್ತದೆ. ಅದೇ ರೀತಿ ಶರಣಬಸವೇಶ್ವರ ವಿಶ್ವ ವಿದ್ಯಾಲಯ ಸ್ಥಾಪನೆ ಶ್ರೇಯಸ್ಸು ತಮ್ಮದಲ್ಲದೇ ವಿದ್ಯಾಸಂಸ್ಥೆಯ ಎಲ್ಲ ಸಿಬ್ಬಂದಿಗೂ ಸಲ್ಲುತ್ತದೆ. ಯಾವುದೇ ಒಂದು ದೊಡ್ಡ ಸಾಧನೆ ಹಾಗೂ ಮಹತ್ಕಾರ್ಯ ಆಗಬೇಕಾದರೆ ಒಬ್ಬಿಬ್ಬರಿಂದ ಸಾಧ್ಯವಿಲ್ಲ. ತಾವು ನೆಪಮಾತ್ರಕ್ಕೆ, ಇದರ ಹಿಂದೆ ಸಂಸ್ಥೆಯ ಸಾವಿರಾರು ಸಿಬ್ಬಂದಿಯ ಸತತ ಕಠಿಣ ಪರಿಶ್ರಮ ಅಡಗಿದೆ. ಇದೆ ಹಿನ್ನೆಲೆಯಲ್ಲಿಯೇ ಹೈದ್ರಾಬಾದ ಕರ್ನಾಟಕ ಭಾಗದ ಮೊದಲ ಖಾಸಗಿ ವಿಶ್ವವಿದ್ಯಾಲಯ ಸ್ಥಾಪನೆ ಸಾಧ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಾನ್ನಿಧ್ಯ ವಹಿಸಿದ್ದ ಶ್ರೀಶೈಲ ಸಾರಂಗ ಮಠದ ಜಗದ್ಗುರು ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಹಿಂದುಳಿದ ಈ ಭಾಗದಲ್ಲಿ ಪೂಜ್ಯ ಅಪ್ಪಾಜಿ ಶಿಕ್ಷಣ ಕ್ರಾಂತಿಯನ್ನೇ ಮಾಡಿದ್ದಾರೆ. ಕಲಬುರಗಿ ಎಂದ ತಕ್ಷಣ ಶರಣಬಸವ ಸಂಸ್ಥೆ ಎನ್ನುವ ಮಟ್ಟಿಗೆ ಬೆಳೆಸಿದ್ದಾರೆ. ಡಾ| ಅಪ್ಪ ಶೈಕ್ಷಣಿಕ ಸಾಧನೆಗಾಗಿ ಹಲವು ಆಯಾಮಗಳಿಂದ ಶ್ರಮಿಸಿರುವುದು ಸಾಮಾನ್ಯವಾದುದ್ದಲ್ಲ. ಅಪ್ಪಾಜಿ ಈ ಭಾಗದ ಬಗ್ಗೆ ಹೊಂದಿರುವ ಕಾಳಜಿಯ ಫಲವಾಗಿಯೇ ಇಂದು ಶರಣಬಸವ ಖಾಸಗಿ ವಿಶ್ವವಿದ್ಯಾಲಯ ಸ್ಥಾಪನೆಯಾಗಿದೆ ಎಂದು ನುಡಿದರು.

ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಪ್ರೋ|ಬಿ.ರಾಮರೆಡ್ಡಿ ಮಾತನಾಡಿ, ಹೈಕದಲ್ಲಿ ಪ್ರಥಮ ಖಾಸಗಿ ವಿಶ್ವವಿದ್ಯಾಲಯ ಸ್ಥಾಪಿಸಲು ಕಾರಣರಾದ ಅಪ್ಪ 50 ವರ್ಷದಿಂದ ನನ್ನ ಕುಟುಂಬಕ್ಕೆ ಅನ್ನದಾತರಾಗಿದ್ದಾರೆ. ಅವರ ಋಣ ತೀರಿಸಲು ಈ ಜನ್ಮದಲ್ಲಿ ಆಗುವುದಿಲ್ಲ. ಅಪ್ಪಾಜಿ
ಅವರಿಗೆ ನಾನು ಸಲ್ಲಿಸುತ್ತಿರುವ ಅಭಿನಂದನೆ ಅಳಿಲು ಸೇವೆ ಇದ್ದಂತೆ ಎಂದರು.

Advertisement

ವಿವಿ ಪ್ರಥಮ ಕುಲಪತಿ ಡಾ| ನಿರಂಜನ ನಿಷ್ಠಿ ಅವರನ್ನು ಸನ್ಮಾನಿಸಲಾಯಿತು. ಶಾಸಕ ಡಾ| ಉಮೇಶ ಜಾಧವ್‌, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಹಿರಿಯ ಉದ್ಯಮಿ ಎಸ್‌.ಎಸ್‌
.ಪಾಟೀಲ ಕಡಗಂಚಿ, ತೊಗರಿ ಮಂಡಳಿ ಅಧ್ಯಕ್ಷ ಭಾಗಣಗೌಡ ಪಾಟೀಲ ಸಂಕನೂರ, ಶಿವಶರಣಪ್ಪ ಸೀರಿ ಹಾಗೂ ಉಪನ್ಯಾಸಕರು, ಸಿಬ್ಬಂದಿ ಹಾಜರಿದ್ದರು. ಡಾ| ಶಿವರಾಜ ಶಾಸ್ತ್ರೀ ಹೇರೂರ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next