ಉಳ್ಳಾಲ: ಪೆರ್ಮನ್ನೂರು ಚರ್ಚ್ ಶತಮಾನೋತ್ಸವ ಸಂಭ್ರಮ ಕೇವಲ ಒಂದು ಸಮಾಜಕ್ಕೆ ಸೀಮಿತವಾಗದೆ ಎಲ್ಲ ಸಮುದಾಯದವರು ಭಾಗವಹಿಸಿದ್ದರಿಂದ ಸಮಾಜಕ್ಕೆ ಉತ್ತಮ ಸಂದೇಶ ದೊರೆತಂತಾಗಿದೆ ಎಂದು ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ರೈ| ರೆ| ಡಾ| ಅಲೋಶಿಯಸ್ ಪಾವ್ಲ್ ಡಿ’ಸೋಜಾ ಅಭಿಪ್ರಾಯಪಟ್ಟರು.
ಅವರು ಪೆರ್ಮನ್ನೂರಿನ ಸಂತ ಸೆಬಾಸ್ಟಿಯನ್ನರ ಧರ್ಮಕೇಂದ್ರದ ಶತಮಾನೋತ್ಸವ ಸಮಾರಂಭದ ಸಮಾರೋಪಕಾರ್ಯಕ್ರಮದಲ್ಲಿ ರವಿವಾರ ಆಶೀರ್ವಚನ ನೀಡಿದರು. ಪ್ರವಚನಕಾರರರಾಗಿದ್ದ ಗುಲ್ಬರ್ಗ ಧರ್ಮಪ್ರಾಂತದ ಧರ್ಮಾಧ್ಯಕ್ಷ ರೈ| ರೆ| ಡಾ| ರಾಬರ್ಟ್ ಮಿರಾಂದ ಮಾತನಾಡಿ, ಸಮಾಜದ ಏಳಿಗೆಗಾಗಿ ದುಡಿಯು ತ್ತಿರುವ ಪೆರ್ಮನ್ನೂರು ಧರ್ಮಕೇಂದ್ರ ಇತರ ಧರ್ಮಕೇಂದ್ರಗಳಿಗೆ ಮಾದರಿ ಎಂದರು.
ಬೆಳ್ತಂಗಡಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ರೈ| ರೆ| ಡಾ| ಲಾರೆನ್ಸ್ ಮುಕ್ಕುಯಿ ಸಂದೇಶ ನೀಡಿದರು. ಮುಖ್ಯ ಅತಿಥಿ ಮಾಜಿ ಸಚಿವ ಆಸ್ಕರ್ ಫೆರ್ನಾಂಡಿಸ್, ಸಚಿವ ಯು.ಟಿ. ಖಾದರ್ ಮಾತನಾಡಿದರು. ಶಾಸಕ ಜೆ.ಆರ್. ಲೋಬೋ, ಮುಖ್ಯ ಸಚೇತಕ ಐವನ್ ಡಿ’ಸೋಜಾ, ಉಳ್ಳಾಲ ನಗರಸಭಾ ಅಧ್ಯಕ್ಷ ಹುಸೈನ್ ಕುಂಞಿಮೋನು, ಪೌರಾಯುಕ್ತೆ ವಾಣಿ ವಿ. ಆಳ್ವ, ಮಂಗಳೂರು ಧರ್ಮಪ್ರಾಂತದ ಚಾನ್ಸಲರ್ ವಂ| ಹೆನ್ರಿ ಸಿಕ್ವೇರಾ, ಕಲ್ಯಾಣಪುರ ಧರ್ಮಕೇಂದ್ರದ ರೆಕ್ಟರ್ ವಂ| ಸ್ಟಾ ನಿ ಬಿ. ಲೋಬೋ, ಜೆಪ್ಪುವಿನ ಸೈಂಟ್ ಜೋಸೆಫ್ ವಾಝ್ ಹೋಮ್‌ನ ವಂ| ಹೆರಾಲ್ಡ್ ಸಿ. ಡಿ’ಸೋಜಾ, ದೇಲಂತಬೆಟ್ಟು ಧರ್ಮಕೇಂದ್ರದ ವಂ| ಪೀಟರ್ ಸೆರಾವೋ, ಬೆಥನಿ ಸಿಸ್ಟರ್ನ ಸುಪೀರಿಯರ್ ಜನರಲ್ ಭಗಿನಿ ಎಂ. ರೋಸ್ ಸೆಲಿನ್ ಬಿಎಸ್, ಅರ್ಸುಲೇನ್ ಸಿಸ್ಟರ್ನ ಸುಪೀರಿಯರ್ ಜನರಲ್ ಭಗಿನಿ ಸುಶೀಲಾ ಸಿಕ್ವೇರಾ ಯುಎಫ್‌ಎಸ್, ಮಂಗಳೂರು ಧರ್ಮಪ್ರಾಂತ ಪಾಲನಾ ಮಂಡಳಿ ಕಾರ್ಯದರ್ಶಿ ಎಂ.ಪಿ. ನೊರೋನ್ಹ, ದಕ್ಷಿಣ ವಿಭಾಗದ ಕಾರ್ಯದರ್ಶಿ ಲ್ಯಾನ್ಸಿ ರಾಡ್ರಿಗಸ್, ದಾಯಿj ವರ್ಲ್ಡ್ ಮೀಡಿಯಾ ಪ್ರೈ.ಲಿ. ಆಡಳಿತ ನಿರ್ದೇಶಕ ವಾಲ್ಟರ್ ನಂದಳಿಕೆ, ಎಸಿಪಿ ವೆಲೆಂಟೈನ್ ಡಿ’ಸೋಜಾ, ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ರೋಯ್ ಕ್ಯಾಸ್ಟಲಿನೋ, ಮಾಂಡ್ ಸೋಬಾಣ್ ಮಂಗಳೂರು ಅಧ್ಯಕ್ಷ ಲೂಯಿಸ್ ಜೆ. ಪಿಂಟೋ, ಉದ್ಯಮಿಗಳಾದ ಅವಿಲ್ ಡಿ’ಸೋಜಾ, ಕುಂಪಲ, ಆಸ್ಕರ್ ಲಿಯೋ ಡಿ’ಸೋಜಾ ರಾಣಿಪುರ, ಉಳ್ಳಾಲ ನಗರಸಭಾ ಉಪಾಧ್ಯಕ್ಷೆ ಚಿತ್ರಕಲಾ ಚಂದ್ರಕಾಂತ್, ಕೌನ್ಸಿಲರ್‌ಗಳಾದ ಬಾಝಿಲ್ ಡಿ’ಸೋಜಾ ರಝಿಯಾ ಇಬ್ರಾಹಿಂ, ಜಾನೆಟ್ ಶಾಂತಿ ಡಿ’ಸೋಜಾ, ನ್ಯಾಯವಾದಿ ರೋಶನ್ ಡಿ’ಸೋಜಾ ಮುಡಿಪು, ಸೌಹಾರ್ದ ಸಮಿತಿ ಸಂಚಾಲಕ ಸುರೇಶ್ ಭಟ್ನಗರ, ಚರ್ಚ್ ಪಾಲನಾ ಪರಿಷತ್ ಉಪಾಧ್ಯಕ್ಷ ಮೆಲ್ವಿನ್ ಸಿ. ಡಿ’ಸೋಜಾ, ಶತಮಾನೋತ್ಸವ ಸಮಿತಿ ಕಾರ್ಯದರ್ಶಿ ಜೋಸ್ಲಿನ್ ಡಿ’ಸೋಜಾ, ಪ್ರಾಂಶುಪಾಲ ವಂ| ಎಡ್ಮಿನ್ ಮಸ್ಕರೇನಸ್, ಶತಮಾನೋತ್ಸವ ಸಮಿತಿಯ ಸಂಯೋಜಕ ಡೆಮೆಟ್ರಿಯಸ್ ಜಿ. ಡಿ’ಸೋಜಾ, ಸಹಾಯಕ ಧರ್ಮಗುರುಗಳಾದ ವಂ| ಸ್ಟಾ éನಿ ಪಿಂಟೊ, ವಂ| ಲೈಝಿಲ್ ಡಿ’ಸೋಜಾ, ನಿರ್ಮಲ ಕಾನ್ವೆಂಟ್ ಉಳ್ಳಾಲ ಇದರ ಧರ್ಮಗುರು ವಂ| ಫೆಲಿಕ್ಸ್ ನೊರೋನ್ಹ ಮೊದಲಾದವರು ಉಪಸ್ಥಿತರಿದ್ದರು.
ಸಮ್ಮಾನ: ಈ ಸಂದರ್ಭದಲ್ಲಿ ಧರ್ಮಕೇಂದ್ರದ ಧರ್ಮಗುರು ಡಾ| ಜೆ. ಬಿ. ಸಲ್ದಾನ ಅವರನ್ನು ಸಮ್ಮಾನಿಸಲಾಯಿತು. ಶತಮಾನೋತ್ಸವದ ಅಂಗವಾಗಿ ಚರ್ಚ್‌ನ ಸಮಾಜಕಾರ್ಯದ ಭಾಗವಾದ ಸಮಾಜದ ಅಶಕ್ತರಿಗೆ ಮನೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಫಾ| ರೂಪೇಶ್ ಮಾಡ್ತ ಮತ್ತು ಸಿಂತಿಯಾ ಡಿ’ ಸೋಜಾ ಕಾರ್ಯಕ್ರಮ ನಿರ್ವಹಿಸಿದರು. ಚರ್ಚ್ ಪಾಲನಾ ಪರಿಷತ್ ಕಾರ್ಯದರ್ಶಿ ರೊನಾಲ್ಡ್ ಫೆರ್ನಾಂಡಿಸ್ ವಂದಿಸಿದರು.