Advertisement

ವೀಕ್ಷಕರ ಎದುರು ಕಾಂಗ್ರೆಸ್‌ ಕಾರ್ಯಕರ್ತರ ಅಸಮಾಧಾನ

04:45 PM May 21, 2017 | Team Udayavani |

ಕಲಬುರಗಿ: ಎಐಸಿಸಿ ಕಾರ್ಯದರ್ಶಿ ಹಾಗೂ ಹೈದ್ರಾಬಾದ್‌ ಕರ್ನಾಟಕ ಭಾಗದ ಪಕ್ಷದ ಉಸ್ತುವಾರಿ ಡಾ| ಸಾಕೆ ಶೈಲ್ಜಾನಾಥ ಅವರು ಶನಿವಾರ ಪಕ್ಷದ ಕಚೇರಿಯಲ್ಲಿ ಅಭಿಪ್ರಾಯ ಕೇಳುವ ಸಂದರ್ಭದಲ್ಲಿ ಕಾರ್ಯಕರ್ತರ ನಡುವೆ ವಾದ-ವಿವಾದ ನಡೆದು ಕೈ-ಕೈ ತೋರಿಸಿದ ಘಟನೆ ನಡೆದಿದೆ. 

Advertisement

ಕಾರ್ಯಕರ್ತರೊಬ್ಬರು ಅಭಿಪ್ರಾಯ ವ್ಯಕ್ತಪಡಿಸುವ ಸಂದರ್ಭದಲ್ಲಿ ಮತ್ತೂಬ್ಬರು ತಡೆದು ಅದಕ್ಕೆ ಬ್ರೇಕ್‌ ಹಾಕುವ ಜತೆಗೆ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರ ಕಾರ್ಯವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು. 

ಇದಕ್ಕೆಲ್ಲ ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ, ಐಟಿಬಿಟಿ ಹಾಗೂ ಪ್ರವಾಸೋದ್ಯಮ ಖಾತೆ ಸಚಿವ ಪ್ರಿಯಾಂಕ್‌ ಖರ್ಗೆ, ಶಾಸಕರಾದ ಖಮರುಲ್‌ ಇಸ್ಲಾಂ, ಇಕ್ಬಾಲ್‌ ಅಹ್ಮದ ಸರಡಗಿ ಮುಂತಾದವರು ಸಾಕ್ಷಿಯಾದರು. ಅಲ್ಪಸಂಖ್ಯಾತರನ್ನು ಪಕ್ಷದಲ್ಲಿ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ.

ಪಕ್ಷದ ಜಿಲ್ಲಾಧ್ಯಕ್ಷರು ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ಎಲ್ಲರನ್ನು ವಿಶ್ವಾಸದಿಂದ ತೆಗೆದುಕೊಂಡು ಹೋಗುತ್ತಿಲ್ಲ ಎಂದು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಶಾಸಕರಾದ ಖಮರುಲ್‌ ಇಸ್ಲಾಂ ಹಾಗೂ ಇಕ್ಬಾಲ್‌ ಅಹ್ಮದ್‌ ಸರಡಗಿ ಧ್ವನಿಗೂಡಿಸಿದರು. 

ಚಿತ್ತಾಪುರ ಕ್ಷೇತ್ರದಲ್ಲಿ ಹಾಗೂ ಪಕ್ಷದಲ್ಲಿ ಅಲ್ಪಸಂಖ್ಯಾತರ ಪ್ರಾತಿನಿಧ್ಯ ಕುರಿತು ಕಾರ್ಯಕರ್ತರೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಕೆಲ ಕಾರ್ಯಕರ್ತರು ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದರು. ವೈಯಕ್ತಿಕವಾಗಿ ಹೇಳಬೇಡಿ. ಪಕ್ಷದ ಬಲವರ್ಧನೆಗೆ ಸಲಹೆ ನೀಡಿ. ಇಲ್ಲ ಸಲ್ಲದು ಹೇಳಬೇಡಿ ಎಂದರು.

Advertisement

ಈ ಸಂದರ್ಭದಲ್ಲಿ ಗೊಂದಲ ಉಂಟಾಯಿತು. ಒಂದು ಹಂತದಲ್ಲಿ ಕೈ-ಕೈ ತೋರಿಸಿದ ಘಟನೆಯೂ ನಡೆದು ಸಭೆಯಲ್ಲಿ ಗದ್ಧಲ ಉಂಟಾಯಿತು. ನಂತರ ಉಸ್ತುವಾರಿ ಡಾ| ಸಾಕೆ ಶೈಲ್ಜಾನಾಥ ಪಕ್ಷದ ವಿವಿಧ ಘಟಕಗಳ ಕಾರ್ಯಕರ್ತರ ಹಾಗೂ ಕಾರ್ಯಕರ್ತರ ಅಭಿಪ್ರಾಯವನ್ನು ಪಕ್ಷದ ಜಿಲ್ಲಾಧ್ಯಕ್ಷರ ಕೊಠಡಿಯಲ್ಲಿ ಮುಂದಾದರು. 

ಈ ಸಂದರ್ಭದಲ್ಲೂ ಕಾರ್ಯಕರ್ತರ ನಡುವೆ ನೂಕು ನುಗ್ಗಲು ಉಂಟಾಯಿತು. ಅದರ ನಡುವೆ ಅಭಿಪ್ರಾಯ ಸಂಗ್ರಹಿಸಿದರು. ರವಿವಾರ  ಬೆಳಗ್ಗೆಯೂ ವಿವಿಧ ಘಟಕಗಳ ಅಭಿಪ್ರಾಯ ಪಡೆಯುವ ಸಭೆ ನಡೆಯಲಿದೆ. 

ಸಚಿವರ ವಿವರಣೆ: ಮಾಧ್ಯಮ ಪ್ರತಿನಿಧಿಗಳಿಗೆ ವಿವರಣೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ, ಕಲಬುರಗಿ ವಿಭಾಗದ ಉಸ್ತುವಾರಿಗಳಾಗಿರುವ ಡಾ| ಸಾಕೆ ಶೈಲ್ಜಾನಾಥ ಕಲಬುರಗಿಗೆ ಆಗಮಿಸಿ, ಪಕ್ಷದ ಸಂಘಟನೆ ದೃಷ್ಟಿಯಲ್ಲಿ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದಾರೆ.

ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಕಾರ್ಯಕರ್ತರೆಲ್ಲರೂ ಒಗ್ಗಟ್ಟಿನಿಂದ ಇದ್ದಾರೆ. ಸುಮ್ಮನೆ ಕೆಲವರು ಬಂದು ಇಲ್ಲದ ಸಲ್ಲದು ನಿಟ್ಟಿನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ತುಸು ಗೊಂದಲ ಉಂಟಾಯಿತು ಎಂದು ತಿಳಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next