Advertisement

ನಿವೃತ್ತ ನೌಕರರ ಸಂಘದಿಂದ ಅಭಿನಂದನೆ

11:52 AM Jan 14, 2018 | |

ಮಹಾನಗರ: ಎಸ್‌ಸಿಡಿಸಿಸಿ ಬ್ಯಾಂಕ್‌ ಗ್ರಾಹಕರಿಗೆ ಗುಣಮಟ್ಟದ ಸೇವೆ ಮತ್ತು ಸಿಬಂದಿಗೆ ಉತ್ತಮ ಸೇವಾ ಸೌಲಭ್ಯಗಳನ್ನು ನೀಡುವಲ್ಲಿ ಈಗಾಗಲೇ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು, ಮುಂದಿನ ಹಂತವಾಗಿ ತಾಲೂಕು ಮಟ್ಟದ ಎಲ್ಲ ಶಾಖೆಗಳಲ್ಲಿ ಹವಾನಿಯಂತ್ರಣ ವ್ಯವಸ್ಥೆ ಅಳವಡಿಸಲಾಗುವುದು ಎಂದು ಬ್ಯಾಂಕಿನ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಅವರು ಹೇಳಿದರು.

Advertisement

ಕರ್ನಾಟಕ ರಾಜ್ಯ ಮಾರಾಟ ಮಹಾಮಂಡಳದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿವೃತ್ತ ನೌಕರರ ಸಂಘದ ವತಿಯಿಂದ ಶನಿವಾರ ಬ್ಯಾಂಕಿನ ಸಭಾಂಗಣದಲ್ಲಿ ಆಯೋಜಿಸಿರುವ ಅಭಿನಂದನ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಎಸ್‌ಸಿಡಿಸಿಸಿ ಬ್ಯಾಂಕ್‌ 102 ಶಾಖೆಗಳನ್ನು ಹೊಂದಿದ್ದು, ವಾಣಿಜ್ಯ ಬ್ಯಾಂಕ್‌ ಗಳಿಗೆ ಸರಿಸಮಾನವಾಗಿ ಸೇವೆ ನೀಡುತ್ತಿದೆ. ಯಾವುದೇ ಚುನಾವಣೆ ನಡೆ ಯದೆ 3ನೇ ಬಾರಿ ಅವಿರೋಧವಾಗಿ ಆಡಳಿತ ಮಂಡಳಿ ಆಯ್ಕೆಯಾಗಿರುವ ಹೆಗ್ಗಳಿಕೆ ಎಸ್‌ಸಿಡಿಸಿಸಿ ಬ್ಯಾಂಕ್‌ನದ್ದಾಗಿದೆ ಎಂದರು.

ನೆರವು ನೀಡುವ ಭರವಸೆ
ರಾಜ್ಯ ಮಾರಾಟ ಮಹಾಮಂಡಳವನ್ನು ಕೂಡ ಅಭಿವೃದ್ಧಿ ಪಥದತ್ತಕೊಂಡೊಯ್ಯುವ ನಿಟ್ಟಿನಲ್ಲಿ ಕಾರ್ಯೋನ್ಮುಖನಾಗಿದ್ದೇನೆ. ಬ್ಯಾಂಕಿನ ನಿವೃತ್ತ ನೌಕರರ ಸಂಘ ಆರೋಗ್ಯ ತಪಾಸಣೆ ಮುಂತಾದ ಉತ್ತಮ
ಕಾರ್ಯಕ್ರಮಗಳನ್ನು ಸಂಘಟಿಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಸಂಘದ ಆರಂಭದ ವೇಳೆ 5 ಲಕ್ಷ ರೂ. ನೆರವು, ಇನ್ನೂ ಸಾಧ್ಯವಿರುವ ಎಲ್ಲ ನೆರವು ನೀಡುವುದಾಗಿ ಅವರು ಭರವಸೆ ನೀಡಿದರು.

ಸವಣೂರು ವಿದ್ಯಾರಶ್ಮೀ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸವಣೂರು ಸೀತಾರಾಮ ರೈ, ಬ್ಯಾಂಕಿನ ನಿವೃತ್ತ ಎಂಡಿ
ರಘುರಾಮ ರಾವ್‌, ಸಹಕಾರಿ ಸಂಘಗಳ ಉಪನಿಬಂಧಕ ಬಿ.ಕೆ. ಸಲೀಂ, ಕೆಎಂಸಿಯ ವೈದ್ಯ ಡಾ| ವಾಮನ ಕುಲಕರ್ಣಿ ಅವರು ಅತಿಥಿಯಾಗಿದ್ದರು.

Advertisement

ಸಂಘದ ಅಧ್ಯಕ್ಷ ಕೆ. ಅಣ್ಣಯ್ಯ ಸೇರಿಗಾರ್‌ ಸ್ವಾಗತಿಸಿದರು. ನಿವೃತ್ತ ಎಂಡಿಗಳಾದ ದಿನಕರ್‌, ನಾರಾಯಣ ಕಾಮತ್‌, ಬಾಬು ಬಿಲ್ಲವ, ಇಂದಿರಾ ಕುಮಾರಿ, ವಿಶ್ವನಾಥ ನಾಯರ್‌, ಲಕ್ಷ್ಮಣ್‌ ಕುಮಾರ್‌ ಮಲ್ಲೂರು, ಸಂಘದ ಪದಾಧಿಕಾರಿಗಳಾದ ಎಂ. ಉಗ್ಗಪ್ಪ ಶೆಟ್ಟಿ, ಕೆ. ರಾಮಚಂದ್ರ ಹೊಳ್ಳ, ಎನ್‌. ಮೋಹನ್‌ ಹೆಗ್ಡೆ, ಎಸ್‌. ಜಯರಾಮ ಶೆಟ್ಟಿ ಉಪಸ್ಥಿತರಿದ್ದರು. ಕೆಎಂಸಿ ಆಸ್ಪತ್ರೆಯ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ ಶಿಬಿರ ಜರಗಿತು.

ಅಭಿವೃದ್ಧಿಯ ಹರಿಕಾರ 
ಒಂದು ಕಾಲಘಟ್ಟದಲ್ಲಿ ಕಡಿದಾದ ಹಾದಿಯಲ್ಲಿ ಸಾಗುತ್ತಿದ್ದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ್ನು ಧೈರ್ಯ, ಸಾಹಸ, ದೂರದೃಷ್ಟಿತ್ವ ಮತ್ತು ದಕ್ಷ ಆಡಳಿತದ ಮೂಲಕ 102 ಶಾಖೆಗಳಿಗೆ ವಿಸ್ತರಿಸಿ ಪ್ರಗತಿಯ ಉತ್ತುಂಗಕ್ಕೇರಿಸಿರುವ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಅವರು ಎಸ್‌ ಸಿಡಿಸಿಸಿ ಬ್ಯಾಂಕಿನ ಅಭಿವೃದ್ಧಿಯ ಹರಿಕಾರ ಎಂದು ಅಭಿನಂದನ ಭಾಷಣ ಮಾಡಿದ ಬ್ಯಾಂಕ್‌ನ ನಿವೃತ್ತ ಅಧಿಕಾರಿ ಪೊಳಲಿ ಜಯರಾಮ ಕಾರಂತ್‌ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next