Advertisement
ಸಿದ್ದಾಪುರ ತಾಲೂಕಿನ ಶ್ರೀ ರಾಮದೇವ ಭಾನುRಳಿ ಮಠದಲ್ಲಿ ನಿರ್ಮಾಣವಾಗಿರುವ ಜಗತ್ತಿನ ಮಾದರಿ ಗೋಶಾಲೆ, “ಗೋಸ್ವರ್ಗ’ದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಗೋವಿಗೆ ಗೋಗ್ರಾಸ ನೀಡಿ ಆಶೀರ್ವಚನ ನೀಡಿದರು. 80 ದಿನಗಳಲ್ಲಿ ಗೋಸ್ವರ್ಗ ನಿರ್ಮಾಣವಾಗಿದ್ದು ಗೋಪ್ರೇಮಿಗಳ ಶಕ್ತಿಯ ಪ್ರತೀಕ. ಇಲ್ಲಿ ನಾವು ನಿಮಿತ್ತ ಮಾತ್ರ. ಯಾವುದೋ ದೈವಶಕ್ತಿಯ ಅನುಗ್ರಹದಿಂದ ಇದು ಸಾಧ್ಯವಾಗಿದೆ. ದೇವ ಸಂಕಲ್ಪಇದ್ದಾಗ ಆ ಕಾರ್ಯ ಸಾಧ್ಯವಾಗುತ್ತದೆ ಎನ್ನುವುದಕ್ಕೆ ಇದು ಉದಾಹರಣೆ. ಇಂದು ನಾಡಿನಲ್ಲಿ ಗೋಪ್ರೇಮಿಗಳ ಸಂಖ್ಯೆ ಹಾಗೂ ಗೋಪ್ರೇಮ ವೃದ್ಧಿಯಾಗುತ್ತಿರುವುದು ಸಂತಸದ ವಿಚಾರ. ಇಂದು ಇರುವ ಗೋಸ್ವರ್ಗ, ಕೃಷ್ಣ ಶಿಶು ಮಾತ್ರ. ಮುಂದಿನ ದಿನಗಳಲ್ಲಿ ಗೋಸ್ವರ್ಗದ ವಿಶ್ವರೂಪ ದರ್ಶನವಾಗಲಿದೆ. ಯಾವುದು ಸರಿಯೋ ಅದನ್ನು ಮಾಡಬೇಕು. ಸಾಧ್ಯಾಸಾಧ್ಯತೆಯ ಕುರಿತು ಚಿಂತಿಸಬಾರದು. ಕಾರ್ಯಗಳನ್ನು ಮಾಡುವಾಗ ಅಪವಾದ -ಆಪತ್ತು -ವಿಪತ್ತುಗಳು ಎದುರಾಗಬಹುದು. ಆದರೆ, ನಾವು ಸರಿಯಾದ ಕಾರ್ಯಗಳನ್ನು ಎಡಬಿಡದೇ ಮಾಡಬೇಕು. ಗೋಶಾಲೆಗಳು ಹಲವಿವೆ. ಆದರೆ, ಜಗತ್ತಿನ ಏಕೈಕ ಗೋಸ್ವರ್ಗ ಇದಾಗಿದೆ. ಗೋವಿನ ನೋವಿಗೆ ಅಂತ್ಯ ಹಾಡಲು, ಗೋಸೌಖ್ಯ ಕೇಂದ್ರಿತ ಗೋಧಾಮ ನಿರ್ಮಿಸಲು ಸಂಕಲ್ಪಿಸಿದೆವು ಎಂದು ಹೇಳಿದರು.
ಕಾಂಚಿ ಕಾಮಕೋಟಿ ಮಠದ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಶ್ರೀ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಡಿ.ವಿ.ಸದಾನಂದ ಗೌಡ ವಿಶೇಷ ಸಂದೇಶ ಕಳುಹಿಸಿದ್ದರು. ಇದೇ ವೇಳೆ, ಲಕ್ಷ ಗೋಗಂಗಾರತಿಯನ್ನು ಸಲ್ಲಿಸಲಾಯಿತು.