Advertisement

ವಿಶ್ವಕರ್ಮ ಮಹಾಸಭಾದಿಂದ ಅಭಿನಂದನಾ ಸಮಾವೇಶ

11:20 AM Jul 23, 2017 | Team Udayavani |

ಬೆಂಗಳೂರು: ಇತ್ತೀಚೆಗೆ ಬಿಜೆಪಿ ಸೇರಿರುವ ಕೆ.ಪಿ.ನಂಜುಂಡಿ ನೇತೃತ್ವದ ವಿಶ್ವಕರ್ಮ ಮಹಾಸಭಾದಿಂದ ಭಾನುವಾರ ಬಿಜೆಪಿ ನಾಯಕರಿಗೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ.

Advertisement

ಬಿಜೆಪಿ ನಾಯಕರನ್ನು ಅಭಿನಂದಿಸುವ ಸಲುವಾಗಿಯೇ ಮಧ್ಯಾಹ್ನ 1.30ಕ್ಕೆ ನಗರದ ಅರಮನೆ ಮೈದಾನದಲ್ಲಿ ವಿಶ್ವಕರ್ಮ ಮಹಾಸಭಾದ ವತಿಯಿಂದ ಸಮಾವೇಶ ಆಯೋಜಿಸಲಾಗಿದ್ದು, ಆ ಮೂಲಕ ಸಮುದಾಯದ ಜನರನ್ನು ಬಿಜೆಪಿಯತ್ತ ಸೆಳೆಯುವ ಪ್ರಯತ್ನಕ್ಕೆ ಕೆ.ಪಿ.ನಂಜುಂಡಿ ಮುಂದಾಗಿದ್ದಾರೆ.

ಈ ಹಿಂದೆ ನಂಜುಂಡಿ ಅವರು ಕಾಂಗ್ರೆಸ್‌ನಲ್ಲಿದ್ದಾಗ ವಿಶ್ವಕರ್ಮ ಮಹಾಸಭಾದ ಎಲ್ಲಾ ಕಾರ್ಯಕ್ರಮಗಳಲ್ಲಿ ಕಾಂಗ್ರೆಸ್‌ ನಾಯಕರಿಗೆ ಮಾತ್ರ ಆಹ್ವಾನವಿರುತ್ತಿತ್ತು. ಈ ಬಾರಿ ಕೇವಲ ಬಿಜೆಪಿ ನಾಯಕರಿಗೆ ಮಾತ್ರ ಆಹ್ವಾನವಿದೆ. 

ಈ ಕುರಿತಂತೆ ವಿಶ್ವಕರ್ಮ ಮಹಾಸಭಾ ಹೆಸರಿನಲ್ಲಿ ಆಹ್ವಾನ ಪತ್ರ ಸಿದ್ಧಪಡಿಸಲಾಗಿದ್ದು, ಅದರಲ್ಲಿ ಮಾಜಿ ಮತ್ತು ಭಾವಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ರಾಜ್ಯ ನಾಯಕರಿಗೆ ಅಭಿನಂದನೆ ಸಲ್ಲಿಸಲು ಈ ಸಮಾವೇಶ ಏರ್ಪಡಿಸಿರುವುದಾಗಿ ಹೇಳಲಾಗಿದೆ.

ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಅವರಲ್ಲದೆ, ಕೇಂದ್ರ ಸಚಿವರಾದ ಅನಂತಕುಮಾರ್‌, ಡಿ.ವಿ.ಸದಾನಂದಗೌಡ, ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌, ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ, ಬಿಜೆಪಿ ಮುಖಂಡರಾದ ಆರ್‌.ಅಶೋಕ್‌, ಪ್ರಹ್ಲಾದ ಜೋಶಿ, ಅರವಿಂದ ಲಿಂಬಾವಳಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next